ಓಲಾ ಕಂಪನಿಯ ಉದಯ
ಭಾರತದ ಎಲಾನ್ ಮಸ್ಕ್ ಅಂತಾನೆ ಕರೆಯಲ್ಪಟ್ಟ ಭವಿಷ್ ಅಗರ್ವಾಲ್ 2010 ರಲ್ಲಿ ಮುಂಬೈ ನ ಐಐಟಿ ಅಲ್ಲಿ ತನ್ನ ವಿದ್ಯಾಭ್ಯಾಸ ವನ್ನು ಮುಗಿಸಿದ್ದರು ಒಂದು ಸಣ್ಣ ಕೊಠಡಿಯಲ್ಲಿ ಓಲಾ ಕ್ಯಾಬ್ಸ್ ಅನ್ನುವ ಒಂದು ಭವಿಷ್ಯದಲ್ಲಿ ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಒಂದು ಕಂಪನಿಗೆ ಅಡಿಪಾಯ ಹಾಕಿದ್ದರು. ಆ ಸಮಯದಲ್ಲಿ ಕ್ಯಾಬ್ ಎಂದರೆ ಉಬರ್ (Uber) ಅನ್ನುವ ಮಟ್ಟಕ್ಕೆ uber ಕಂಪನಿ ಬೆಳೆದು ನಿಂತಿತ್ತು. ಆ ಸಮಯದಲ್ಲಿ Uber ಅನ್ನುವ ಕ್ಯಾಬ್ ಲೋಕದ ದೈತ್ಯ ಕಂಪನಿಗೆ ಭಾರತದ ಈ ಓಲಾ ಕಂಪನಿ ಟಾಂಗ್ ಕೊಡಲು ಬಂದಿತ್ತು. ಬರಿ ದೊಡ್ಡ ದೊಡ್ಡ ಕಾರುಗಳಿಗೆ ಮಾತ್ರವಲ್ಲದೆ ಓಲಾ ಆಟೋ ಓಲಾ ಮಿನಿ ಅನ್ನುವ ನಮ್ಮ ದೇಶಕ್ಕೆ ಸರಿಹೊಂದುವಂತಹ ಆಪ್ಷನ್ ಗಳನ್ನು ಕೂಡ ಈ ಓಲಾ ಕಂಪನಿ ಜಾರಿಗೆ ತಂತು. ಈ ವೇಗವಾದ ಬೆಳವಣಿಗೆ ನೋಡಿ ಸಾಫ್ಟ್ ಬ್ಯಾಂಕ್ ಮತ್ತು ಟೈಗರ್ ಗ್ಲೋಬಲ್ ಅನ್ನುವ ದಿಗ್ಗಜ ಕಂಪನಿಗಳು ಸಾವಿರಾರು ರೂಪಾಯಿಗಳನ್ನು ಈ ಕಂಪನಿಯ ಮೇಲೆ ಹೂಡಿಕೆ ಮಾಡಿದರು
ಓಲಾ ಎಲೆಕ್ಟ್ರಿಕ್ ಬೈಕ್ ಗಳ ಪರಿಚಯ
ಕ್ಯಾಬ್ ಬಿಸಿನೆಸ್ ಅಲ್ಲಿ ಯಶಸ್ಸು ಸಿಕ್ಕಿದ ಕೂಡಲೇ ಭವಿಷ್ ಅಗರ್ವಾಲ್ ಕಣ್ಣು ಬಿದ್ದಿದ್ದು ಭಾರತದ ಭವಿಷ್ಯದ ಬಿಸಿನೆಸ್ ಆದ ಎಲೆಕ್ಟ್ರಿಕ್ ವೆಹಿಕಲ್ ಇಂಡಸ್ಟ್ರಿ ಮೇಲೆ, ಆಗ ಇನ್ನೂ ಭಾರತದಲ್ಲಿ ಎಲೆಕ್ಟ್ರಿಕ್ ಬೈಕುಗಳು ಮಾರಾಟ ಶುರು ಮಾಡಿರಲೇ ಇಲ್ಲ ಅಂತ ಸಮಯದಲ್ಲಿ ನಾನು ಮಾರಾಟ ಮಾಡುತ್ತೇನೆ ಎಂದು ಹೊರಟರು ಓಲಾ ಎಲೆಕ್ಟ್ರಿಕ್ ಅನ್ನು ಶುರು ಮಾಡಿದರು ಜುಲೈ 2019 ರಲ್ಲಿ ಓಲಾ ಎಲೆಕ್ಟ್ರಿಕ್ ಗೆ 250$ ಮಿಲಿಯನ್ ಡಾಲರ್ ಫಂಡಿಂಗ್ ಕೂಡ ಬಂತು.ಇದರಿಂದ ಓಲಾ ಕಂಪನಿ ಯೂನಿಕಾರ್ನ್ ಪಟ್ಟಕ್ಕೆ ಏರಿತು.
ದಿಕ್ಕು ತಪ್ಪಿದ ಓಲಾ ಕಂಪನಿ
ಒಂದು ಕಂಪನಿ ಶುರು ಮಾಡಿ ದೊಡ್ಡ ಮಟ್ಟಿನ ಯಶಸ್ಸು ಸಿಕ್ಕಿದ ನಂತರ ಅದರ ಯಶಸ್ಸಿನ ಅತಿಯಾದ ಆತ್ಮವಿಶ್ವಾಸದಿಂದ ಆ ಕಂಪನಿಯ ಮುಖ್ಯವಾದ ಬಿಸಿನೆಸ್ ಕ್ಯಾಬ್ ಗಳನ್ನು ಬಧ್ರ ಪಡಿಸಿಕೊಳ್ಳುವುದು ಬಿಟ್ಟು ಇಲ್ಲ ಸಲ್ಲದ ಕಡೆಯೆಲ್ಲ ಹಣ ಹಾಕಿ ಈ ಭವಿಷ್ ಅಗರ್ವಾಲ್ ಕೈ ಸುಟ್ಟುಕೊಂಡರು. ಹತ್ತು ನಿಮಿಷದಲ್ಲಿ grossery ಅನ್ನು ಡೆಲಿವರಿ ಮಾಡ್ತೀವಿ ಎಂದು ಓಲಾ ಡ್ಯಾಶ್ ಅಂತ ಶುರು ಮಾಡಿದರು, ನಂತರ ಕ್ಲೌಡ್ ಕಿಚನ್ ಅನ್ನುವ ಕಾನ್ಸೆಪ್ಟ್ ಇಟ್ಕೊಂಡು ಓಲಾ ಫುಡ್ಸ್ ಅಂತ ಶುರು ಮಾಡಿದರು, ಇದು ಯಾವುದು ಯಶಸ್ಸು ಸಿಕ್ಕಿಲ್ಲ ಅಂದರು, ಮತ್ತೆ 2021 ರಲ್ಲಿ 2nd ಹ್ಯಾಂಡ್ ಕಾರ್ ಗಳನ್ನು ಮಾರಾಟ ಮಾಡುತ್ತೇವೆ ಎಂದು ಓಲಾ ಕಾರ್ಸ್ ಅಂತ ಶುರು ಮಾಡಿದರು ಇದರಿಂದ ಆದ ಪರಿಣಾಮ ಏನು? ಈ ಕಂಪನಿಗಳು ಹೇಳ ಹೆಸರು ಇಲ್ಲದಂತೆ ಮಾಯವಾದವು, ಯಾವುದೇ ವಾಸ್ತವಿಕವಾದ ಪರಿಸ್ಥಿತಿಯನ್ನು ಪರಿಶೀಲಿಸದೆ ನಾನು ಎಷ್ಟು ಬಿಸಿನೆಸ್ ಮಾಡಬಹುದು ಅನ್ನುವ ಯೋಚನೆ ಕೂಡ ಇಲ್ಲದೆ ಅತಿಯಾದ ಆತ್ಮವಿಶ್ವಾಸದಿಂದ ಈ ಎಲ್ಲಾ ಬಿಸಿನೆಸ್ ಶುರು ಮಾಡಲು ಹೋಗಿ ಸಾವಿರಾರು ಕೋಟಿ ರೂಪಾಯಿಯನ್ನು ನಷ್ಟ ಮಾಡಿಕೊಂಡರು ಈ ಭವಿಷ್ ಅಗರ್ವಾಲ್.
ಚಾಲಕರ ಕಷ್ಟ ಗ್ರಾಹಕರಿಗೆ ಮೋಸ
ಇಷ್ಟೆಲ್ಲಾ ಆದಮೇಲೆ ಇದರ ಮುಖ್ಯವಾದ ಬಿಸಿನೆಸ್ ಓಲಾ ಕ್ಯಾಬ್ಸ್ ಅಭಿವೃದ್ಧಿ ಆಗಲು ಮುಖ್ಯವಾಗಿ ಕಾರಣರಾಗಿದ್ದ ಕ್ಯಾಬ್ ಚಾಲಕರಿಗೆ ಸಿಗುತ್ತಿದ್ದ ಇನ್ಸೆಂಟಿವ್ ಗಳನ್ನು ಕೂಡ ಕಡಿತಗೊಳಿಸಿದರು ಮತ್ತು ಡ್ರೈವರ್ ಗಳಿಗೆ ಸರಿಯಾದ ಸಪೋರ್ಟ್ ಕೊಡಲಿಲ್ಲ, ಈ ಕಡೆ ಕಸ್ಟಮರ್ ಗಳಿಗೆ ಅತಿಯಾದ ಸರ್ಜ್ ಚಾರ್ಜುಗಳನ್ನು ಹಾಕಲು ಶುರು ಮಾಡಿ ಇತ್ತೀಚಿನ ಸಮೀಕ್ಷೆಯ ಪ್ರಕಾರ ಓಲಾದ 70% ಗ್ರಾಹಕರು ಓಲಾದ ಎಕ್ಸ್ಟ್ರಾ ಸರ್ಜ್ ಚಾರ್ಜ್ ಗಳು ಹಾಗೂ ಚಾಲಕರ ಹೆಚ್ಚಿನ ರೈಡ್ ಕ್ಯಾನ್ಸಲೇಷನ್ ಗಳನ್ನು ನೋಡಿ ಗ್ರಾಹಕರು ಈ ಕಂಪನಿಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.
ವಿದೇಶದಿಂದ ಓಲಾ ಎತ್ತಂಗಡಿ
ಈ ಎಲ್ಲಾ ತಪ್ಪುಗಳಿಂದ ಓಲಾ ಕ್ಯಾಬ್ ಬೇರೆ ದೇಶದಿಂದ ಕೂಡ ಎತ್ತಂಗಡಿ ಆಯ್ತು. ಹೌದು ಉಬರ್ (Uber) ಮುಂದೆ ಓಲಾ ಕಂಪನಿಯು ಪ್ರೊಫೆಷನಲ್ ಆಗಿ ನಿಲ್ಲಲು ಆಗಲಿಲ್ಲ. ಅದರಿಂದ ಏಪ್ರಿಲ್ 2022 ರಲ್ಲಿ UK, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಮಾರುಕಟ್ಟೆಯಿಂದ ಓಲಾ ಮತ್ತೆ ಇಂಡಿಯಾಗೆ ಬಂತು.
ಭಾರತ ಸರ್ಕಾರದಿಂದ ಓಲಾಗೆ ನೋಟೀಸ್
ಹೌದು ಇಷ್ಟೆಲ್ಲಾ ಆದಮೇಲೆ ಭಾರತ ಸರ್ಕಾರದಿಂದ ಓಲಾಗೆ ಒಂದು ಖಡಕ್ ನೋಟಿಸ್ ಅನ್ನು ನೀಡಲಾಯಿತು ಕಾರಣ ಏನು ಅಂದರೆ ಈ ಆಪಲ್ iPhone(IOS) ಮತ್ತು ಆಂಡ್ರಾಯ್ಡ್ (Android) ಈ ಸಾಫ್ಟ್ ವೇರ್ ಗಳಿಂದ ಕ್ಯಾಬ್ ಬುಕ್ ಮಾಡಿದರೆ ಒಂದೇ ದೂರಕ್ಕೆ ಬೇರೆ ಬೇರೆ ರೀತಿಯ ಚಾರ್ಜ್ ಮಾಡಲಾಗುತಿತ್ತು ಏಕೆಂದರೆ iPhone ಬಳಕೆದಾರರ ಹತ್ತಿರ ಜಾಸ್ತಿ ಮತ್ತು ಆಂಡ್ರಾಯ್ಡ್ ಬಳಕೆದಾರರ ಹತ್ತಿರ ಕಮ್ಮಿ ಅಮೌಂಟ್ ಚಾರ್ಜ್ ಮಾಡಲಾಗುತಿತ್ತು. ಇದನ್ನು ಗಮನಿಸಿದ ಕೇಂದ್ರ consumer protection authority ಲಾಭ ಮಾಡುವದಕ್ಕೆ ಈ ರೀತಿಯ ಕೆಲಸ ಮಾಡಿರುವುದಕ್ಕೆ ನೇರವಾಗಿ ನೋಟೀಸ್ ನೀಡಲಾಗಿತ್ತು.
EV ಎಲೆಕ್ಟ್ರಿಕ್ ಬೈಕ್ ಗಳ ಮಹಾಪತನ
ಇಷ್ಟೆಲ್ಲಾ ನಷ್ಟದ ನಡುವೆ ಭವಿಷ್ ಅಗರ್ವಾಲ್ ರ ಆಶಾಕಿರಣವೆ ಆಗಿದ್ದ ಓಲಾ ಎಲೆಕ್ಟ್ರಿಕ್ ಬೈಕುಗಳ ಮಾರಾಟ ಕೂಡ ದಾಖಲೆ ಬೆಲೆಯಲ್ಲಿ ಪತನಗೊಂಡಿತು ಹೌದು ಯಾರು ಯೋಚಿಸದೆ ಇರುವಂತಹ ಸಮಯದಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ಮಾರುಕಟ್ಟೆಗೆ ತಂದಂತಹ ಓಲಾ ಇದರ ಡಿಸೈನ್ ಮತ್ತು ಟೆಕ್ನಾಲಜಿ ಮೂಲಕ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿತು. 2024 ರ ಆರಂಭದಲ್ಲಿ ಇವರ ಸೇಲ್ಸ್ ಲೆಕ್ಕ ನೋಡಿ ಈ ಲೆಜೆಂಡರಿ ಆಟೋಮೊಬೈಲ್ ಮೇಕರ್ಸ್ ಆದಂತಹ ಬಜಾಜ್, ಹೀರೋ, ಟಿವಿಸ್ ಅಂತಹ ಕಂಪನಿಗಳೆ ಮಂಕಾದವು, ಇವರು 2024 ರಲ್ಲಿ 36% ಶೇರ್ ಇಟ್ಕೊಂಡು ಮಾರ್ಕೆಟ್ ಲೀಡರ್ ಆಗಿದ್ದರು. ಆದರೆ ದುಡ್ಡು ಮಾಡುವ ಆತುರಕ್ಕೆ ಬಿದ್ದು ಇನ್ನೂ ಪೂರ್ಣ ಪ್ರಮಾಣವಾಗಿ ತಯಾರಾಗದ ವೆಹಿಕಲ್ ಗಳನ್ನು ಬಿಟ್ಟು ತನ್ನ ಹೆಸರನ್ನು ಹಾಳು ಮಾಡಿಕೊಂಡಿದಲ್ಲದೆ, ವಾಹನ ಖರೀದಿ ಮಾಡಿದ ಗ್ರಾಹಕರಿಗೂ ಸರಿಯಾದ ಸರ್ವಿಸ್ ಸೆಂಟರ್ ಗಳಿಲ್ಲದೆ ಗ್ರಾಹಕರಿಗೂ ತೊಂದರೆ ಕೊಟ್ಟಿತು. ಇದರ ಪರಿಣಾಮ 2024 ರಲ್ಲಿ 36% ಇದ್ದ ಇದರ ಮಾರುಕಟ್ಟೆಯ ವ್ಯಾಲ್ಯೂ 16% ಕುಸಿಯಿತು. ಈ ತಪ್ಪುಗಳಿಂದ ಇದರ ಮಾರುಕಟ್ಟೆಯನ್ನು ನಿಧಾನವಾಗಿ ಬಜಾಜ್, ಟಿವಿಸ್ ಕಂಪನಿಯು ಆ ಜಾಗವನ್ನು ಆಕ್ರಮಿಸಿಕೊಂಡಿದೆ.
ಕಳಪೆ ಸರ್ವಿಸ್ ಬೆಂಕಿಯಿಟ್ಟ ಗ್ರಾಹಕರು
ಈ ಎಲ್ಲಾ ಸಮಸ್ಯೆಗಳ ನಡುವೆ ಓಲಾ ಬೈಕ್ ಗಳು ಚಲಿಸುತ್ತಿರುವಾಗಲೇ ಮುಂದೆ ಪೋರ್ಕ್ ಕಟ್ ಆಗಿ, ಸಾಫ್ಟ್ವೇರ್ ಗ್ಲಿಚ್ ಇಂದ ಬೈಕುಗಳು ಆಟೋಮ್ಯಾಟಿಕ್ ಆಗಿ ಹಿಂದೆ ಚಲಿಸುವುದರ ಮೂಲಕ ಚಾಲಕರಿಗೆ ಅಪಘಾತವಾಗುವುದು. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸರಿಯಾದ ಸರ್ವಿಸ್ ಸೆಂಟರ್ ಇಲ್ಲದೆ ತಿಂಗಳಾನು ಗಟ್ಟಲೆ ಸಾವಿರಾರು ಓಲಾ ಬೈಕ್ ಗಳು ಶೋ ರೂಮ್ ಮುಂದೆ ಸರಿಯಾಗದೆ ನಿಂತುಕೊಂಡಿದೆ. ಇದೆ ವಿಚಾರವಾಗಿ 2 ತಿಂಗಳಿಂದ ಬೈಕ್ ರೆಡಿ ಆಗಲಿಲ್ಲ ಎಂದು ಬೇಸತ್ತ ಯುವಕ ಕರ್ನಾಟಕದ ಕಲಬುರಗಿ ಅಲ್ಲಿ ಓಲಾ ಶೋ ರೂಮ್ ಗೆ ಬೆಂಕಿ ಇಟ್ಟ ಘಟನೆ ನಡೆಯಿತು, ಹಾಗೆ ಗೋವಾದಲ್ಲು ಬೈಕ್ ತಿಂಗಳಾದರೂ ರೆಡಿ ಮಾಡಲಿಲ್ಲ ಎಂದು ಗೋವಾ ಕನ್ಸೂಮರ್ ಕೋರ್ಟ್ ಭವಿಷ್ ಅಗರ್ವಾಲ್ ವಿರುದ್ಧವೆ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು ಕಂಪನಿಯ ಮಾಲಿಕನಿಗೆ ಅರೆಸ್ಟ್ ವಾರೆಂಟ್ ನೀಡಿದ್ದು ಇದೆ ಮೊದಲ ಬಾರಿ.
ಕೇವಲ 3 ತಿಂಗಳಿಗೆ 487 ಕೋಟಿ ರೂಪಾಯಿ ನಷ್ಟ
ಓಲಾದ ಬ್ಯಾಲೆನ್ಸ್ ಶೀಟ್ ಕೂಡ ಕಿತ್ತುಕೊಂಡಿದೆ ಡಿಸೆಂಬರ್ 2025 ಕ್ಕೆ ಅಂತ್ಯವಾದ Q3 ಅಲ್ಲಿ ಆರ್ಥಿಕ ಫಲಿತಾಂಶ ನೋಡಿದರೆ ಯಾರಿಗೆ ಬೇಕಾದರು ಅರ್ಥವಾಗುತ್ತದೆ ಓಲಾ ಕಂಪನಿಯ ಪರಿಸ್ಥಿತಿ ಏನಾಗಿದೆ ಎಂದು, ಓಲಾ ಕಂಪನಿಯ ರೆವೆನ್ಯೂ ಬರೋಬ್ಬರಿ 55% ಕಮ್ಮಿ ಆಗಿದೆ ಕೇವಲ 470 ಕೋಟಿಗೆ ಬಂದು ನಿಂತಿದೆ ಇದರ ರೆವೆನ್ಯೂ ಇದು ಪ್ರಾಫಿಟ್ ಲೆಕ್ಕಾಚಾರ ಅಲ್ಲ, ಕೇವಲ ಮೂರೇ ತಿಂಗಳಲ್ಲಿ ಕಂಪನಿಗೆ ಆಗಿರೋ ನಷ್ಟ ಬಂದು ಬರೋಬ್ಬರಿ 487 ಕೋಟಿ ರೂಪಾಯಿ ಅಂದ್ರೆ ಇದರಲ್ಲಿ ಬರುತ್ತಿರೋ ಆದಾಯಕ್ಕಿಂತ ಇದಕ್ಕೆ ವ್ಯಯಿಸುತ್ತಿರುವ ಖರ್ಚು ನಷ್ಟನೆ ಜಾಸ್ತಿ.
4000 ಕೋಟಿ ಮಾಲೀಕತ್ವದ ಕಂಪನಿ ಶುರು ಮಾಡುತೀವಿ ಎಂದು ಹೇಳಿಕೆ ನೀಡಿದ್ದ ಕಂಪನಿಯ ಪರಿಸ್ಥಿತಿ!
ಇದೆ ಓಲಾ ಕಂಪನಿ ಡಿಸೆಂಬರ್ 2024 ರಲ್ಲಿ ದೇಶಾದ್ಯಂತ 4000 ಕೋಟಿ ಕಂಪನಿ ಮಾಲೀಕತ್ವದ ಶೋರೂಮ್ ಶುರು ಮಾಡ್ತೀವಿ ಪ್ರತಿ ತಾಲೂಕಿಗು ಸರ್ವಿಸ್ ಸೆಂಟರ್ ಓಪನ್ ಮಾಡ್ತೀವಿ. ಅಂತ ಬಿಲ್ಡ್ ಅಪ್ ಕೊಟ್ಟಿತ್ತು, ಆದರೆ ಕೇವಲ ಒಂದು ವರ್ಷದ ನಂತರ ಕಂಪನಿಯ ಪೂರ್ತಿ ಚಿತ್ರಣ ಬದಲಾಗಿದೆ. ಫೆಬ್ರವರಿ 2026 ರ ಹೊತ್ತಿಗೆ ಕಂಪನಿಯನ್ನು ನಿಭಾಯಿಸಲು ಆಗದೆ ಮಾರಾಟ ಪಾತಾಳಕ್ಕೆ ಇಳಿದ ಕಾರಣ ಶೋ ರೂಮ್ ಗಳ ಸಂಖ್ಯೆಯನ್ನು ಕೇವಲ 550 ಕ್ಕೆ ಇಳಿಕೆ ಮಾಡುತ್ತಿದ್ದಾರೆ ದುಡ್ಡು, ಮಾರ್ಕೆಟ್, ಕಸ್ಟಮರ್ ನಂಬಿಕೆ, ಬ್ರ್ಯಾಂಡ್, ಈ ಎಲ್ಲಾ ಮರ್ಯಾದೆಯನ್ನು ಓಲಾ ಕಣ್ಣ ಮುಂದೆ ಕಳೆದುಕೊಳ್ತು.
ಓಲಾದ ಅಸ್ತಿತ್ವಕ್ಕಾಗಿ ಕೊನೆಯ ಹೋರಾಟ
ಇಂಡಸ್ಟ್ರಿಯ ತಜ್ಞರು ಹೇಳುವ ಪ್ರಕಾರ ಓಲಾ ಕಂಪನಿಯ ಈಗಿನ ಪರಿಸ್ಥಿತಿಗೆ ಕಾರಣ ಮಾಲೀಕರಾದ ಭವಿಷ್ ಅಗರ್ವಾಲ್ ರವರ ಅತಿಯಾದ ಆತ್ಮವಿಶ್ವಾಸ ಹಾಗೂ ಕಂಪನಿ ಒಳಗಿನ ಕಳಪೆ ಕೆಲಸದಿಂದ ಕೆಲಸದ ಒತ್ತಡ, ಮಾರ್ಗದರ್ಶನವಿಲ್ಲದ ಕಂಪನಿಯ ಮ್ಯಾನೇಜ್ ಮೆಂಟ್ ತಡೆಯಲಾರದೆ ಅಗ್ರ ಸ್ಥಾನದ ಅಧಿಕಾರಿಗಳಾದ ಸಿಎಫ್ಓ, ಸಿಟಿಓ, ಇವರೆಲ್ಲಾ ಒಬ್ಬೊಬ್ಬರಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗ್ತಾ ಇದಾರೆ ಎಲ್ಲಕ್ಕಿಂತ ಆಘಾತಕಾರಿ ವಿಚಾರ ಅಂದರೆ ಅಕ್ಟೋಬರ್ 2025 ರಲ್ಲಿ ಓಲಾದ ಮಾಜಿ ಉದ್ಯೋಗಿ ಒಬ್ಬರು ಜೀವ ಕಳಕೊಂಡ್ರು, ಇದರಲ್ಲಿ ಖುದ್ದಾಗಿ ಭವಿಷ್ ಅಗರ್ವಾಲ್ ಮತ್ತು ಓಲಾದ ವಿರುದ್ಧವೇ ಬೆಂಗಳೂರಿನಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು ಇದು ಕಾರ್ಪೊರೇಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಇನ್ನು ಅಕ್ಟೋಬರ್ 2024 ರಲ್ಲಿ ಗ್ರಾಹಕರ ಪ್ರಾಬ್ಲಮ್ ಅನ್ನು ಬಗೆಹರಿಸುವ ಬದಲು ಕಾಮಿಡಿಯನ್ ಕುನಾಲ್ ಕಮರ್ ಅವರ ಜೊತೆ ಜಗಳಕ್ಕೆ ಇಳಿದಿದ್ದರು ಇದು ಓಲಾ ಕಂಪನಿಯ ಇಮೇಜ್ ಅನ್ನು ಮತ್ತಷ್ಟು ಡ್ಯಾಮೇಜ್ ಮಾಡಿತು.
ಈಗ ಎಲೆಕ್ಟ್ರಿಕ್ ಬೈಕುಗಳ ಬಿಸಿನೆಸ್ ಪೂರ್ಣವಾಗಿ ಕೈ ಕೊಟ್ಟ ಮೇಲೆ 2026 ರಲ್ಲಿ ಮ್ಯಾನೇಜ್ಮೆಂಟ್ ಸ್ಟ್ರಕ್ಚರಲ್ ರಿಸೆಟ್ ಅಂದರೆ ಮೂಲಭೂತ ಬದಲಾವಣೆ ಮಾಡ್ತೀವಿ ಎಂದು ಹೊಸ ದಾರಿಯನ್ನು ಆಯ್ಕೆ ಮಾಡಿದೆ EV ಸ್ಕೂಟರ್ ಗಳನ್ನು ಬಿಟ್ಟು ಓಲಾ ಶಕ್ತಿಯ ಹೆಸರಲ್ಲಿ ಹೋಮ್ ಇನ್ವರ್ಟರ್ ಮತ್ತು ಬ್ಯಾಟರಿ ಬಿಸಿನೆಸ್ ಅನ್ನು ಶುರು ಮಾಡಿದ್ದಾರೆ.
ಇನ್ನು ವೇಗದ ಇ ಕಾಮರ್ಸ್ ಡೆಲಿವರಿಗೋಸ್ಕರ ಕಡಿಮೆ ಬೆಲೆಯ ತ್ರಿ ವೀಲರ್ಸ್ ಮಾಡೊ ಪ್ಲಾನ್ ಮಾಡಿದ್ದಾರೆ. ಇದು ಭಾರತದ EV ಸ್ಕೂಟರ್ ಇಂಡಸ್ಟ್ರಿಯ ರಾಜನಾಗಿದ್ದ ಓಲಾ ಕಂಪನಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮಾಡುತ್ತಿರುವ ಕೊನೆಯ ಪ್ರಯತ್ನ ಇದಾಗಿದೆ.
ಕೊನೆಯದಾಗಿ ಹೇಳಬೇಕೆಂದರೆ
ಇನ್ನು ಓಲಾ ಕಂಪನಿಯ ಪರಿಸ್ಥಿತಿ ಈಗ ಅತಂತ್ರವಾಗಿದೆ. ಉಸಿರು ಉಳಿಸಿಕೊಳ್ಳಲು ಒದ್ದಾಡ್ತಾ ಇದೆ ಓಲಾ ಕಂಪನಿ ಮತ್ತೆ ಮೇಲೆ ಹೇಳೋಕೆ ಸಾಧ್ಯನಾ? ಹೌದು ಸಾಧ್ಯ ಇದೆ ಆದರೆ ಬೇಡದ ಪ್ರಾಮಿಸ್ ಗಳನ್ನು ಈ ಸೋಷಿಯಲ್ ಮೀಡಿಯಾ ಬಿಲ್ಡ್ ಅಪ್ ಗಳನ್ನು, ಹಾಗೂ ಅತಿಯಾದ ಆತ್ಮವಿಶ್ವಾಸವನ್ನು ಬಿಟ್ಟು ವಾಸ್ತವಿಕತೆ ಯನ್ನು ಅರ್ಥ ಮಾಡ್ಕೊಂಡು. ಒಳ್ಳೆ ಗುಣಮಟ್ಟದ ಪ್ರಾಡಕ್ಟ್ ಗಳನ್ನು ಮಾರುಕಟ್ಟೆಗೆ ಬಿಟ್ಟರೆ ಹಾಗೂ ನಿಧಾನವಾದರೂ ಪರವಾಗಿಲ್ಲ ನಿರಂತರವಾದ ಬೆಳವಣಿಗೆ ಮೇಲೆ ಗಮನಹರಿಸಬೇಕು, ತಮ್ಮ ಹತ್ತಿರ ಮ್ಯಾನೇಜ್ ಮಾಡುವಷ್ಟು ಮಾತ್ರ ಬಿಸಿನೆಸ್ ಗಳಿಗೆ ಇಳಿಯಬೇಕು. ಪ್ರಾಡಕ್ಟ್ ಗುಣಮಟ್ಟವನ್ನು ಹೆಚ್ಚಿಸಿ ಸರ್ವಿಸ್ ಸೆಂಟರ್ ಗಳಲ್ಲಿ ಗ್ರಾಹಕರ ಸಮಸ್ಯೆ ಬಗೆಹರಿಸುವ ಕಡೆ ಗಮನ ವಹಿಸಬೇಕು.