ಪಂಚ್ ಅನ್ನುವ ಮರಿಕೋತಿಯ ಕಥೆ ಏನು?ಈಗಿನ ಇದರ ಪರಿಸ್ಥಿತಿ ತಿಳಿಯೋಣ ಬನ್ನಿ!

ಈಗಿನ ಇಂಟರ್ನೆಟ್ ಕಾಲದಲ್ಲಿ ಇದ್ದಕಿದ್ದ ಹಾಗೆ ರಾತ್ರೋ ರಾತ್ರಿ ಯಾರು ಬೇಕಾದರೂ ವೈರಲ್ ಹಾಗಿಬಿಡುತ್ತಾರೆ ಈ ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯಾ ಅನ್ನುವುದು ಹಾಗೆ. ಯಾವತ್ತೊ ನಡೆದಿರುವ ವಿಷಯಗಳು ಯಾವಾಗಲೋ ವೈರಲ್ ಹಾಗಿಬಿಡುತ್ತೆ ಹೀಗೆ ಕಳೆದ ತಿಂಗಳಲ್ಲಿ 2007 ರಲ್ಲಿ ತೆಗೆದಿರೊ ಪೆಂಗ್ವಿನ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಹಾಗಿತ್ತು, ಈಗ ಆದೇ ರೀತಿಯ ವಿಷಯ ಇಂಟರ್ನೆಟ್ ಅಲ್ಲಿ ಸಂಚಲನವನ್ನು ಮೂಡಿಸಿದೆ. ಅದೆ ಈ ಪಂಚ್ ಅನ್ನುವ ಒಂದು ಸಣ್ಣ ಕೋತಿ ಮರಿಯ ವಿಚಾರ

ಹೌದು ಜಪಾನ್ ಝೂ ಅಲ್ಲಿ ಇರುವ ಈ ಪಂಚ್ ಅನ್ನುವ ಸಣ್ಣ ಮಾಕಾಕ್ ಕೋತಿ ಮರಿಯ ವಿಷಯ ಈಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲು ಸಂಚಲನ ಮೂಡಿಸುತ್ತಿದೆ. ಈ ಮಕಾಕ್ ಕೋತಿ ಒಂದು ಸಾದಾರಣ ಗೊಂಬೆಯನ್ನು ತನ್ನ ತಾಯಿಯಂತೆ ಅಪ್ಪಿಕೊಂಡು ಎಲ್ಲಿ ಹೋದರು ಅದನ್ನು ತೆಗೆದುಕೊಂಡು ಹೋಗುವುದು. ಮುದ್ದಾಡುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದೆ ಆಗಿದ್ದರೆ ಬನ್ನಿ ಏನ್ ಇದರ ಕಥೆ ಇದು ಇಷ್ಟು ವೈರಲ್ ಆಗುತ್ತಿರುವುದು ಯಾಕೆ ಇದನ್ನು ನೋಡಿ ಜನರು ಎಮೋಷನ್ ಆಗ್ತಾ ಇರೋದು ಯಾಕೆ ಹಾಗೆ ಈ ಮಕಾಕ್ ಗಳ ಜೀವನ ಶೈಲಿಯ ಬಗ್ಗೆ ಈ ಎಲ್ಲವನ್ನು ಈ ಲೇಖನಿಯಲ್ಲಿ ತಿಳಿಯೋಣ ಬನ್ನಿ!

ಈ ಒಂದು ವಿಷಯ ವೈರಲ್ ಆಗ್ತಾ ಇರೋದು ಯಾಕೆ ಪಂಚ್ ನ ಕಥೆ ಏನು

ಈ ಒಂದು ವಿಷಯ ಹಾಗೂ ಈ ವಿಡಿಯೋ ವೈರಲ್ ಆಗ್ತಾ ಇರೋದು ಯಾಕೆ ಅಂದರೆ ಈ ಕೋತಿ ಮರಿಯ ನಡುವಳಿಕೆ ಇಂದ ಈ ಕೋತಿ ಮರಿ ಕಳೆದ ಜುಲೈನಲ್ಲಿ ಜಪಾನ್ ಝೂ ಒಂದರಲ್ಲಿ ಜನಿಸಿತ್ತು. ಆಮೇಲೆ ಏನಾಯಿತು ಅಂತ ಗೊತ್ತಿಲ್ಲ ಅದರ ಅಮ್ಮನಿಗೆ ಇದು ಇಷ್ಟ ಆಗಲಿಲ್ಲ ಅದು ಈ ಮರಿಯನ್ನು ಜೊತೆಯಲ್ಲಿ ಸೇರಿಸಿಕೊಳ್ಳಲಿಲ್ಲ. ಸಾಮಾನ್ಯವಾಗಿ ನೋಡಿದರೆ ಕೋತಿಗಳು ತನ್ನ ಮರಿಗಳನ್ನು ಎದೆಗೆ ಅಪ್ಪಿಸಿಕೊಂಡು ಸಾಕುತ್ತವೆ. ಆದರೆ ಈ ಕೋತಿ ಮರಿಯನ್ನು ಇದರ ತಾಯಿ ಮಂಗ ಯಾಕೋ ಹತ್ತಿರ ಇಟ್ಟುಕೊಂಡಿಲ್ಲ, ಇದರಿಂದ ಈ ಪಂಚ್ ವಿಚಿತ್ರವಾಗಿ ಆಡಲು ಶುರು ಮಾಡಿತು ಇದನ್ನು ಗಮನಿಸಿದ ಝೂನ ಸಿಬ್ಬಂದಿಗಳು ಈ ಮರಿಯನ್ನು ಸಮಾಧಾನ ಮಾಡಲು ನಾನಾ ಪ್ರಯತ್ನ ಪಟ್ಟರು ಇವರಿಂದ ಆಗಲಿಲ್ಲ. ಮತ್ತು ಇದು ಕೂಡ ಬೇರೆ ಕೋತಿಗಳ ಜೊತೆ ಬೆರೆಯಲು ಹೋದರೆ ಆ ಕೋತಿಗಳು ಇದನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಒಂಟಿಯಾದ ಈ ಕೋತಿ ಮರಿ ದಿನೆ ದಿನೇ ಮಂಕಾಗುತ್ತಿತ್ತು ಇದನ್ನೆಲ್ಲಾ ನೋಡಿ ಝೂ ಕೀಪರ್ ಗಳು ಏನು ಮಾಡಬೇಕು ಅಂತ ಚಿಂತೆಯಲ್ಲಿದ್ದರು.

ತಾಯಿ ಕೋತಿ ಇಲ್ಲ ಎಂದರೆ ಬೆಳವಣಿಗೆ ಕಷ್ಟ

ಹೌದು ಈ ಪ್ರಾಣಿಗಳಿಗೆ ಎಲ್ಲವನ್ನೂ ತಿಳಿಸಿಕೊಡುವ ಯಾವುದೇ ಟ್ರೇನಿಂಗ್ ಸೆಂಟರ್ ಗಳಿಲ್ಲ  ಹಾಗೆ ಹೇಳಿ ಕಳಿಸೋಕೆ ಅವುಗಳಿಗೆ ಮಾತು ಕೂಡ ಬರುವುದಿಲ್ಲ. ಪ್ರಾಣಿಗಳಿಗೆ ಅದರ ಸಹಜ ವರ್ತನೆ ಹಾಗೂ ಮೂಳೆ ಮಾಂಸಗಳು ಗಟ್ಟಿಯಾಗೋಕೆ ಅವುಗಳು ಅದರ ಕುಟುಂಬ ಮತ್ತು ಗುಂಪಿನ ನಡುವೆ ಇರಬೇಕಾಗುತ್ತದೆ. ಹಾಗೆ ತಾಯಿಯನ್ನು ತಬ್ಬಿಕೊಂಡು ಬೆಳೆಯುವುದರ ಮೂಲಕ ಕೋತಿಗಳು ಬೆಳವಣಿಗೆ ಹೊಂದುತ್ತವೆ ಹಾಗೂ ಅದರ ಮಾಂಸ ಮೂಳೆಗಳು ಗಟ್ಟಿ ಯಾಗುತ್ತವೆ ಹಾಗೂ ಗ್ರಿಪ್ ಗಳನ್ನು ಕಲಿಯುತ್ತವೆ. ಆದರೆ ಈ ಕೋತಿ ಒಂಟಿ ಆಗಿದ್ದರೆ ಇದರ ಬೆಳವಣಿಗೆ ಹೇಗೆ ಎಂಬುದು ಝೂ ಕೀಪರ್ ಚಿಂತೆ ಯಾಗಿರುತ್ತದೆ.

ಅರಂಗೊಂಟನ್ ಗೊಂಬೆ ಕೊಟ್ಟಿದ್ದು ಯಾರೂ ಯಾಕೆ?

ಇದರ ಬೆಳವಣಿಗೆ ಚಿಂತೆಯಲ್ಲಿದ್ದ ಝೂ ಕೀಪರ್ ಗಳು ಕೋತಿ ಇಟ್ಕೊಳ್ಳುವಂತಹ ತುಂಬಾ ವಸ್ತುಗಳನ್ನು ಅದಕ್ಕೆ ಕೊಟ್ಟರು ಆದರೆ ಅದು ಯಾವುದನ್ನು ಇಟ್ಟುಕೊಳ್ಳಲಿಲ್ಲ. ಆಗ ಅದಕ್ಕೆ ಮೃದುವಾದ ಅರಂಗೊಂಟನ್ ಗೊಂಬೆಯನ್ನು ಆ ಕೋತಿಮರಿಗೆ ಕೊಡಲಾಯಿತು ಆ ಗೊಂಬೆ ಮಂಗನ ತರ ಕಾಣ್ತಿದೆ ಅಂತಾನೋ ಅಥವಾ ಇನ್ಯಾವ ಕಾರಣಕ್ಕೋ ಈ ಕೋತಿಮರಿಗೆ ಆ ಗೊಂಬೆ ಇಷ್ಟ ಆಗಿ ಅದನ್ನೇ ಇದರ ಅಮ್ಮ ಅನ್ಕೊಂಡು ಎಲ್ಲಿ ಹೋದರು ಅದನ್ನ ತೆಗೆದುಕೊಂಡು ಹೋಗುತ್ತದೆ.

ಅಮ್ಮ ಆದ ಗೊಂಬೆ

ಈ ಪಂಚಿಗೆ ಗೊಂಬೆ ಸಿಕ್ಕಿದಾಗ ಅದಕ್ಕೆ ಅದರ ಅಮ್ಮನೆ ಸಿಕ್ಕಿದಾಗೆ ಆಯ್ತು. ಹೇಗೆ ಈ ಚಿಕ್ಕ ಮಕ್ಕಳು ಆಟ ಆಡುವಾಗ ಯಾರಾದರೂ ಹೊಡೆದ್ರೆ, ತಳ್ಳಿದೆ, ಬೈದರೆ ಹೇಗೆ ಅದರ ಅಮ್ಮನ ಹತ್ತಿರ ಓಡೋಡಿ ಹೋಗಿ ತಬ್ಬಿಕೊಂಡು ಕಂಪ್ಲೇಟ್ ಹೇಳೋತರ ಈ ಕೋತಿ ಮರಿ ಪಂಚ ಕೂಡ ತನ್ನ ಜೊತೆಯಲ್ಲಿರುವ ಕೋತಿ ಮರಿಗಳು ತನಗೆ ತೊಂದರೆ ಕೊಟ್ಟಾಗ ಈ ಗೊಂಬೆ ಎಲ್ಲಿರುತ್ತೋ ಅಲ್ಲಿಗೆ ಓಡಿಹೋಗುವುದಕ್ಕೆ ಶುರು ಮಾಡಿತು. ಹಾಗೆ ಆ ಗೊಂಬೆಯನ್ನು ತಬ್ಬಿಕೊಳ್ಳುವ ಅಭ್ಯಾಸ ಕೂಡ ಮಾಡಿಕೊಳ್ಳಿತು. ಹಾಗೆ ಈ ಆ ಜೀವವಿಲ್ಲದ ಗೊಂಬೆ ಈ ಮರಿ ಕೋತಿಗೆ ಹೊಸ ಜೀವನವನ್ನು ಕೊಟ್ಟಿತು. ಈ ಕೋತಿ ಮರಿಗೆ ಅಮ್ಮನ ರೀತಿ ಇರುವ ಗೊಂಬೆ ಸಿಕ್ಕಿದಮೇಲೆ ಈ ಮರಿ ಕೋತಿ ತುಂಬಾ ಉತ್ಸಾಹದಿಂದ ಹಾಗೂ ಲವಲವಿಕೆಯಿಂದ ಇರಲು ಶುರು ಮಾಡಿತು.

ಉಳಿದ ಕೋತಿಗಳು ಇದರ ಜೊತೆ ಬೆರೆಯಲು ಶುರು ಮಾಡಿದವು

ಈ ಕೋತಿ ಮರಿ ಯಾವ ಕೋತಿಗಳು ದೂರ ತಳ್ಳಿದ್ದವೋ ಆ ಉಳಿದ ಕೋತಿಗಳು ಕೂಡ ಇದರ ಜೊತೆ ಸೇರಲು ಶುರು ಮಾಡಿದವು ತಮ್ಮ ಗುಂಪಿನ ಸದಸ್ಯನ ತರ ಮತ್ತು ಸ್ನೇಹಿತನ ತರ ನೋಡಲು ಶುರು ಮಾಡಿದವು ಈಗ ಕೋತಿ ಮರಿ ಪಂಚ್ ತುಂಬಾ ಆಕ್ಟಿವ್ ಆಗಿದೆ ಎಲ್ಲಾ ಕೋತಿಗಳ ತರ ಝೂ ಅಲ್ಲಿ ಜೀವನ ನಡೆಸುತ್ತಿದೆ, ಈಗ ಇದಕ್ಕೆ ಬೇಜಾರು ಆದರೆ ಖುಷಿ ಆದರೆ ಯಾವುದಾದರೂ ಕೋತಿ ಸಮಸ್ಯೆ ಮಾಡಿದರೆ ಇದು ಇದರ ಅಮ್ಮನ ರೀತಿ ಇರುವ ಕೋತಿಯ ಬಳಿ ಬರುತ್ತದೆ ಅದನ್ನು ನೋಡಲು ದಿನನಿತ್ಯ ಸಾವಿರಾರು ಜನ ಈ ಝೂಗೆ ಬರುತ್ತಾ ಇದ್ದಾರೆ.

ಈ ವಿಷಯದ ಬಗ್ಗೆ ವನ್ಯ ಜೀವಿ ತಜ್ಞರು ಹೇಳೋದೇನು

ವನ್ಯಜೀವಿ ತಜ್ಞರು ಹೇಳೋ ಪ್ರಕಾರ ಈ ಕೋತಿ ಮರಿಗಳಿಗೆ ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯೇ ಸರ್ವಸ್ವ ಆಗಿರುತ್ತೆ ಅದರ ಬೆಳವಣಿಗೆ ಕೂಡ ತಾಯಿಯ ಮೇಲೆ ಅವಲಂಬಿತವಾಗಿರುತ್ತದೆ. ಆ ತಾಯಿಕೋತಿ ತನ್ನ ಮರಿಗಳಿಗೆ ಹೇಗೆ ಬದುಕಬೇಕೆಂದು ತೋರಿಸುತ್ತದೆ. ಆದರೆ ಈ ಮರಿಕೋತಿ ಪಂಚಿಗೆ ಆ ಅದೃಷ್ಟ ಇರಲಿಲ್ಲ, ಇನ್ನು ಈ ಮರಿ ಕೋತಿ ಮತ್ತು ಅದರ ಅಮ್ಮನ ಬಗ್ಗೆ ವನ್ಯಜೀವಿ ತಜ್ಞೆ ಎಮಿಲಿ ಬೆಲ್ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ ಏನೆಂದರೆ ಇವರು ಹೇಳೋ ಪ್ರಕಾರ ಈ ಪಂಚ್ ಅದರ ತಾಯಿಗೆ ಮೊದಲ ಮರಿ ಆದರೆ ಆ ತಾಯಿಕೋತಿ ತನ್ನ ಬಾಲ್ಯ ಮುಗಿಯುವುದರ ಮೊದಲೇ ಈ ಮರಿಗೆ ಜನ್ಮ ಕೊಟ್ಟಿದೆ ತಾಯಿಗೆ ಕೂಡ ಅನುಭವ ಕಡಿಮೆ. ಹಾಗಾಗಿ ಈ ತಾಯಿಕೋತಿ ತನ್ನ ಮರಿಯನ್ನು ನೋಡಿಕೊಳ್ಳುವ ಬದಲು ತನ್ನ ಜೀವನ ನೋಡಿಕೊಂಡಿದೆ. ಅದು ಇನ್ನೊಂದು ಸಂಗಾತಿಯನ್ನು ಹುಡುಕಿಕೊಂಡಿದೆ ಅದಕ್ಕಾಗಿ ಈ ಪಂಚ್ ತನ್ನ ತಾಯಿ ಬಳಿ ಹೋದರು ಆ ತಾಯಿಕೋತಿ ಇದನ್ನು ಅಪ್ಪಿಕೊಳ್ಳದೆ ದೂರ ತಳ್ಳಿದೆ. ಇದನ್ನು ಬಿಟ್ಟರೆ ಇನ್ನೊಂದು ಕಾರಣ ಕೂಡ ಹೇಳಿದ್ದಾರೆ ಈ ಪಂಚಿನ ತಾಯಿಕೋತಿ ಏನಿದೆ ಅದರ ಅಮ್ಮ ಕೂಡ ಇದನ್ನು ಬಿಟ್ಟುಹೋಗಿರಬೇಕು ಅದಕ್ಕೆ ಇದು ಕೂಡ ಹಾಗೆ ಮಾಡಬೇಕೆಂದು ಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಅಥವಾ ತಾಯಿ ಕೋತಿ ಅಬ್ ನಾರ್ಮಲ್ ಕೂಡ ಹಾಗಿರಬಹುದು ಎಂದು ಹೇಳಲಾಗುತ್ತಿದೆ.

ಈಗಿನ ಪಂಚಿನ ಪರಿಸ್ಥಿತಿ ಹೇಗಿದೆ

ಇಷ್ಟೆಲ್ಲದರ ನಡುವೆ ಒಂದು ಸಮಾಧಾನದ ಸಂಗತಿ ಎಂದರೆ ಉಳಿದ ಕೋತಿಗಳು ಈ ಪಂಚಿನ ಜೊತೆ ಸೇರಿದೆ ಹಾಗೂ ಈ ಮರಿಯ ಬೆಳವಣಿಗೆಯಲ್ಲಿ ಸಹಾಯವಾಗಿ ನಿಂತಿದ್ದಾವೆ ಹಾಗೂ ಈ ಪಂಚಿಗೆ ಬೇರೆ ಒಂದು ಕೋತಿ ತಾಯಿಯ ಪ್ರೀತಿಯನ್ನು ಕೊಟ್ಟು ಅದನ್ನು ಅಪ್ಪಿಕೊಂಡು ಬೆಳೆಸುತ್ತಿದೆ ಎಂದು ಜೂನ ಸಿಬ್ಬಂಧಿಗಳು ಮಾಹಿತಿ ಕೊಡ್ತಾ ಇದಾರೆ. ತಾಯಿಯಿಂದ ದೂರಾಗಿ ನೋವಿನಲ್ಲಿದ್ದ ಪಂಚ್ ಪರಿಸ್ಥಿತಿ ಈಗ ನಿರಾಳ.

ಪಂಚಿನ ರೀತಿ ತಾಯಿಯಿಂದ ದೂರಾಗಿರುವ ಕೋತಿಯನ್ನು ದತ್ತು ಕೇಳುತ್ತಿರುವ ಜನರು

ಈ ಪಂಚಿಗೆ ಏನೋ ಒಳ್ಳೆ ಜೀವನ ಸಿಕ್ಕಿತು ಆದರೆ ಇದರ ಕಥೆಯನ್ನು ಕೇಳಿ ಇದೆರೀತಿ ತಾಯಿಯಿಂದ ದೂರಾದ ಮರಿಗಳನ್ನು ದತ್ತು ಪಡೆದು ಸಾಕುಪ್ರಾಣಿಗಳಂತೆ ಸಾಕಲು ಕೇಳುತ್ತಿದ್ದರಂತೆ ಆದರೆ ಅದು ಸರಿಯಾದ ಕ್ರಮ ಅಲ್ಲ ಎಂಬುದು ಪ್ರೊಫೆಸರ್ ಸಿಟ್ ಚಿಲ್ ಅವರ ಅನಿಸಿಕೆ, ಯಾಕೆಂದರೆ ಈ ಮಕಾಕ್ ಕೋತಿಗಳು ಸಾಕು ಪ್ರಾಣಿಗಳು ಅಲ್ಲ ಜೂ ಅಲ್ಲಿ ಇಟ್ಕೊಂಡಿರೋದೆ ತಪ್ಪು ಹೀಗಿರುವಾಗ ಅವುಗಳನ್ನು ಮನೆಗಳಲ್ಲಿ ಸಾಕೋದು ಸರಿಯಾದ ಕ್ರಮವಲ್ಲ ಅನ್ನುವುದು ಪ್ರೊಫೆಸರ್ ಅಭಿಪ್ರಾಯ ಅವುಗಳು ಸ್ವತಂತ್ರವಾಗಿ ಅದರ ಪಾಡಿಗೆ ಬೆಳೆಯಬೇಕೇ ಹೊರತು ಯಾರದೋ ಆರೈಕೆಯಲ್ಲಿರುವುದು ಸರಿಯಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಮಕಾಕ್ ಗಳ ಹಿನ್ನಲೆ ಏನು?

ಈ ಮಕಾಕ್ ಗಳು ಏಷ್ಯಾ ಉತ್ತರ ಆಫ್ರಿಕಾ ಹಾಗೂ ಯೂರೋಪಿನಾ ಖಂಡಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಸುಮಾರು 23 ವಿವಿಧ ಪ್ರಭೇದಗಳ ಮಕಾಕ್ ಗಳಿದ್ದಾವೆ ಇವು ಹಣ್ಣುಗಳು ಕಾಯಿ ಮತ್ತು ಎಲೆ ಹಾಗೂ ಮರದ ತೊಗಟೆಗಳನ್ನು ತಿಂದು ಬದುಕುತ್ತವೆ. ಇನ್ನು ಇದರಲ್ಲಿ ಉದ್ದ ಬಾಲದ ಮಕಾಕ್ ಗಳು ಮಾಂಸವನ್ನು ಕೂಡ ಆಹಾರವಾಗಿ ತಿನ್ನುತ್ತವೆ ಮಲೇಷಿಯಾದಲ್ಲಿ ಪಿಕ್ಸೆಲ್ಡ್ ಮಕಾಕ್ ಗಳಿವೆ ಅವು ವರ್ಷಕ್ಕೆ 70 ಇಲಿಗಳನ್ನು ತಿಂದು ಬದುಕುತ್ತವೆ. ಇನ್ನು ನಮ್ಮಲ್ಲಿ ಕಂಡುಬರುವ ಕೋತಿಗಳು ಅವನ್ನು ಬೋನೆಟ್ ಮಕಾಕ್ ಎಂದು ಕರೆಯುತ್ತಾರೆ ಇವುಗಳು ನಮ್ಮ ದೇಶದ ಎಲ್ಲಾ ಕಡೆ ಕಾಣಸಿಗುತ್ತವೆ. ಹಾಗೂ ನಮ್ಮ ಪಶ್ಚಿಮಘಟ್ಟದಲ್ಲಿ ಸಿಂಗಲೀಕ ಎನ್ನುವ ಲ್ಯಾಂಟೈಲ್ಡ್ ಮಕಾಕ್ ಗಳು ಕೂಡ ಇದೆ ಪ್ರಭೇದಕ್ಕೆ ಸೇರಿದೆ ಹಾಗೆ ಇದರ ಜೊತೆಗೆ ಭಾರತದಲ್ಲಿ ಅರುಣಾಚಲ ಮಕಾಕ್, ಅಸ್ಸಾಂ ಮಕಾಕ್ ಹಾಗೆ ವಿವಿಧ ರೀತಿಯ ಮಕಾಕ್ ಕೂಡ ಭಾರತದಲ್ಲಿ ಸಿಗುತ್ತವೆ.

ಪಂಚ್ ಕೋತಿಯ ಪ್ರಬೇಧ

ಜಪಾನ್ ಜೂ ನಲ್ಲಿರುವ ಈ ಕೋತಿ ಜಪಾನೀಸ್ ಮಕಾಕ್ ಗುಂಪು ಇವುಗಳನ್ನು ಸಿಂಪಲ್ ಹಾಗೆ ಸ್ನೋ ಮಂಕಿ ಎಂದು ಕರೆಯುತ್ತಾರೆ ಈ ಮಕಾಕ್ ಗಳು 36 ಸೆಂಟಿಮೀಟರ್ ಇಂದ 77 ಸೆಂಟಿಮೀಟರ್ ಗಳಷ್ಟು ಉದ್ದ ಬೆಳೆಯುತ್ತವೆ ಇವು ಸಸ್ಯಾಹಾರಿ ಮಕಾಕ್ ಆಗಿದ್ದು ಇವು ಫಂಗಸ್ಗಳನ್ನು ಕೂಡ ತಿನ್ನುತ್ತವೆ ಹೀಗೆ ಮೂರು ಖಂಡಗಳಲ್ಲಿ ವಿವಿಧ ರೀತಿಯ ಕೋತಿಗಳಿಗೆ ಆ ದೇಶದ ರೀತಿಯ ಪ್ರಾಮುಖ್ಯತೆ ಕೊಡುತ್ತಾರೆ. ನಮ್ಮಲ್ಲಿ ಕೋತಿ ಸತ್ತರೆ ಅದನ್ನು ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ ನಮ್ಮಲ್ಲಿ ಅಷ್ಟರ ಮಟ್ಟಿಗೆ ಕೋತಿಗೆ ಪ್ರಾಮುಖ್ಯತೆ ಕೊಡುತ್ತಾರೆ.

Leave a Comment