ಪ್ರತಿಯೊಬ್ಬ ಭಾರತೀಯನಿಗೂ ಉಪಯೋಗ ವಾಗುವ ಸರ್ಕಾರಿ ಅಪ್ಲಿಕೇಶನ್ ಗಳು!

ಇಂದಿನ ಡಿಜಿಟಲ್ ಯುಗದಲ್ಲಿ ಭಾರತ ಸರ್ಕಾರವು ಜನರ ಜೀವನವನ್ನು ಸುಲಭಗೊಳಿಸಲು ಅನೇಕ ಉಪಯುಕ್ತ ಮೊಬೈಲ್ ಆ್ಯಪ್‌ಗಳನ್ನು ಪರಿಚಯಿಸಿದೆ. ಈಗ ಸರ್ಕಾರಿ ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳ ಮುಂದೆ ಗಂಟೆಗಳ ಕಾಲ ನಿಂತುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ನಲ್ಲೇ ಕೆಲವೇ ಕ್ಲಿಕ್‌ಗಳಲ್ಲಿ ಕೆಲವೇ ಗಂಟೆ ಗಳಲ್ಲಿ ದಾಖಲೆಗಳಲ್ಲಿ ತಪ್ಪಿದ್ದರೆ ಸರಿ ಪಡಿಸಬಹುದು, ಪೇಮೆಂಟ್ ಮಾಡಬಹುದು, ಆರೋಗ್ಯದ ಮಾಹಿತಿ ಯನ್ನು ತಿಳಿದುಕೊಳ್ಳಬಹುದು, ಬ್ಯಾಂಕಿಂಗ್ ಸೇವೆಗಳು, ಮತ್ತು ಇತರ ಅನೇಕ ಸೌಲಭ್ಯ ಗಳನ್ನು ನಿಮ್ಮ ಮೊಬೈಲಿನ ಸಹಾಯದಿಂದ ಈ ಅಪ್ಲಿಕೇಶನ್ ಗಳ ಮೂಲಕ ಪಡೆಯಬಹುದು.


ಈ ಲೇಖನಿ (Article) ಅಲ್ಲಿ ಪ್ರತಿಯೊಬ್ಬ ಭಾರತೀಯರು ಬಳಸಲೇಬೇಕಾದ ಹಾಗೂ ತುಂಬ ಉಪಯುಕ್ತವಾದ ಪ್ರಮುಖ ಸರ್ಕಾರಿ ಅಪ್ಲಿಕೇಶನ್ ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ

1.DigiLocker – ಡಿಜಿಟಲ್ ಅಲ್ಲಿ ನಿಮ್ಮ ದಾಖಲೆಗಳನ್ನು ಭದ್ರವಾಗಿ ಸಂಗ್ರಹ ಮಾಡಲು

DigiLocker ಭಾರತ ಸರ್ಕಾರದ ಅತ್ಯಂತ ಉಪಯುಕ್ತ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಇದು ನಿಮ್ಮ ಎಲ್ಲಾ ಪ್ರಮುಖ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲು ಸಹಾಯ ಮಾಡುತ್ತದೆ. ಈ ಡ್ರೈವಿಂಗ್ ಲೈಸೆನ್ಸ್ ಗಳು, ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಗಳು, ಪಾನ್ ಕಾರ್ಡ್ ಗಳು, ಹೀಗೆ ಹಲವಾರು ಡಾಕ್ಯುಮೆಂಟ್ಸ್ ಗಳ ವಿವರಗಳನ್ನು ಇದರಲ್ಲಿ ಭಧ್ರವಾಗಿ ಸುರಕ್ಷಿತವಾಗಿ ಇರಿಸಬಹುದು. ಈ ಅಪ್ಲಿಕೇಶನ್ ಅಲ್ಲಿ ನೀವು ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿದರೆ ಸಾಕು ಯಾವಾಗ ಬೇಕಾದರೂ ಅವುಗಳನ್ನು ಡೌನ್‌ಲೋಡ್ ಅಥವಾ ಶೇರ್ ಮಾಡಬಹುದು. ಹಲವು ಸ್ಥಳಗಳಲ್ಲಿ ನಿಮ್ಮ ಫಿಸಿಕಲ್ ಡಾಕ್ಯುಮೆಂಟ್ ತೆಗೆದುಕೊಂಡು ಹೋಗಬೇಕಾಗಿಲ್ಲ ಈ ಡಿಜಿಟಲ್ ರೂಪದ ಡಾಕ್ಯುಮೆಂಟ್ಗಳನ್ನ ಬಳಸಿ ಇದರ ಉಪಯೋಗವನ್ನು ಪಡೆಯಬಹುದು.

2. UMANG – ಎಲ್ಲಾ ಸರ್ಕಾರಿ ಸೇವೆಗಳು ಒಂದೇ ಅಪ್ಲಿಕೇಶನ್ ಅಲ್ಲಿ ಕಾಣಬಹುದು

UMANG (unified mobile application for new age Governance) ಈ ಒಂದು ಅಪ್ಲಿಕೇಶನ್ ಅನೇಕ ಸರ್ಕಾರಿ ಸೇವೆಗಳನ್ನು ಈ ಒಂದೆ ಒಂದು ಸಿಂಗಲ್ ಅಪ್ಲಿಕೇಶನ್ ಒದಗಿಸುತ್ತದೆ. ಇದರಲ್ಲಿ ಲಭ್ಯವಿರುವ ಸೇವೆಗಳು ಯಾವುದು ಎಂದರೆ. ನಿಮ್ಮ PF ಅಕೌಂಟ್ ಅಲ್ಲಿರುವ ಹಣದ ಮಾಹಿತಿಯನ್ನು ಪರಿಶೀಲಿಸಬಹುದು, ಪಾನ್ ಕಾರ್ಡ್ ಮೂಲಕ ಬಳಸುವ ಸೇವೆಗಳನ್ನು ಇದರಲ್ಲಿ ಪಡೆಯಬಹುದು, ಗ್ಯಾಸ್ ಸಿಲಿಂಡರ್ ಗಳನ್ನು ಇದರ ಮೂಲಕ ಬುಕ್ ಮಾಡಬಹುದು, ನಿವೃತ್ತಿ ಹೊಂದಿದೆ ಮೇಲೆ ಸಿಗುವ ನಿಮ್ಮ ಪೆನ್ಷನ್ ಬಗ್ಗೆ ನೀವು ಮಾಹಿತಿ ಪಡೆಯಬಹುದು, ವಿದ್ಯುತ್ ಬಿಲ್ ಗಳನ್ನು ಕೂಡ ಇದರ ಮೂಲಕ ಪಾವತಿ ಮಾಡಲುಬಹುದು. ಈ ಒಂದು ಅಪ್ಲಿಕೇಶನ್ ಅಲ್ಲಿ 100 ಕ್ಕೂ ಅಧಿಕ ಸರ್ಕಾರಿ ಸೇವೆಗಳು ಸಿಗುವುದರಿಂದ ಇದು ಒಂದು ಅತ್ಯುತ್ತಮವಾದ ಅಪ್ಲಿಕೇಶನ್.

3. ಆರೋಗ್ಯ ಸೇತು (Arogya setu)

ಈ ಅಪ್ಲಿಕೇಶನ್ ಕರೋನದ ಸಮಯದಲ್ಲಿ ಕೂತಲ್ಲೇ ಮೊಬೈಲ್ ಮೂಲಕ ಸಹಾಯ ಪಡೆಯಲು ಬಹಳ ಪ್ರಸಿದ್ಧಿ ಪಡೆದಿತ್ತು. ಆದರೆ ಇವತ್ತಿಗೂ ಇದು ಆರೋಗ್ಯ ಸಂಬಂಧಿತ ಮಾಹಿತಿ ಗಳಿಗಾಗಿ ಉಪಯುಕ್ತವಾಗಿ ಕೆಲಸ ನಿರ್ವಹಿಸುವ ಅಪ್ಲಿಕೇಶನ್. ಬನ್ನಿ ಈಗ ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ, ನಿಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ಗಳನ್ನು ಪಡೆಯಬಹುದು, ನಿಮ್ಮ ಹತ್ತಿರದ ಆಸ್ಪತ್ರೆಗಳ ಬಗ್ಗೆ ಅಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು, ಆರೋಗ್ಯದ ಸಲಹೆಗಳನ್ನು  ಈ ಅಪ್ಲಿಕೇಶನ್ ಮೂಲಕ ನೀವು ಪಡೆಯಬಹುದು ಈ ಒಂದು ಅಪ್ಲಿಕೇಶನ್ ನಮ್ಮ ಆರೋಗ್ಯದ ಸುರಕ್ಷತೆ ಮತ್ತು ಅದಕ್ಕೆ ಬೇಕಾದ ಸಹಾಯ ಗಳನ್ನು ಮಾಡುತ್ತವೆ.

4. ಭೀಮ್ ಯುಪಿಐ (BHIM UPI)

BHIM (Bharat interface for money) ಈ ಒಂದು ಅಪ್ಲಿಕೇಶನ್ ಭಾರತದ ಸುರಕ್ಷಿತ ಡಿಜಿಟಲ್ ಪಾವತಿಯ ಅಧಿಕೃತ UPI ಅಪ್ಲಿಕೇಶನ್ ಇದರ ವಿಶೇಷತೆಗಳು, ಹಣ ಕಳಿಸುವುದು, ಹಣ ಸ್ವೀಕರಿಸುವುದು, ಬಿಲ್ ಗಳನ್ನು ಪಾವತಿ ಮಾಡುವುದು, ಬ್ಯಾಂಕ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡುವುದು, ಈ ಅಪ್ಲಿಕೇಶನ್ ಸರಳ ವೇಗವಾದ ಮತ್ತು ಸುರಕ್ಷಿತವಾದ ಪಾವತಿ ವ್ಯವಸ್ಥೆ ಯನ್ನು ನಿಮಗೆ ಒದಗಿಸುತ್ತದೆ.

5. mparivahan – ವಾಹನ ಮಾಹಿತಿ ಗಳ ಬಗ್ಗೆ ತಿಳಿಯಲು

ಈ ಒಂದು ಅಪ್ಲಿಕೇಶನ್ ನಿಮ್ಮ ವಾಹನಕ್ಕೆ ಸಂಬಂಧಿಸಿದ ನಿಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀಡುತ್ತದೆ. RC ಕಾರ್ಡ್ ನ ವಿವರಗಳನ್ನು ನೋಡಬಹುದು, ಡ್ರೈವಿಂಗ್ ಲೈಸೆನ್ಸ್ ನ ಮಾಹಿತಿಯನ್ನು ಪಡೆಯಬಹುದು, ವಾಹನ ಓನರ್ ಗಳ ಮಾಹಿತಿಗಳು, ಪೊಲೀಸರು ಕೇಳಿದಾಗ ನಿಮ್ಮ ದಾಖಲೆಗಳನ್ನು ಕೇಳಿದಾಗ ಈ ಅಪ್ಲಿಕೇಶನ್ ಅಲ್ಲಿ ತೋರಿಸಬಹುದು ಇದರಿಂದ ನಿಮ್ಮ ದಾಖಲೆಗಳನ್ನು ಫಿಸಿಕಲ್ ಫಾರ್ಮಾಟ್ ಅಲ್ಲಿ ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ.

6. My Gov ಸರ್ಕಾರದ ಜೊತೆ ನೇರ ಸಂಪರ್ಕ

My Gov ಈ ಒಂದು ಅಪ್ಲಿಕೇಶನ್ ನ ಮೂಲಕ ನೀವು ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೇರವಾಗಿ ನಿಮ್ಮ ಮೊಬೈಲ್ ಮೂಲಕವೇ ತಿಳಿಯಬಹುದು, ಮತ್ತು ಅದಕ್ಕೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳಬಹುದು. ಇದರಿಂದ ಇರುವ ಪ್ರಯೋಜನ ಗಳು ಏನೆಂದರೆ. ಹೊಸ ಯೋಜನೆಗಳ ಮಾಹಿತಿಯನ್ನು ಬೇಗ ಪಡೆಯಬಹುದು, ಸಮೀಕ್ಷೆ ಗಳಲ್ಲಿ ಭಾಗವಹಿಸುವ ಅವಕಾಶ ಗಳನ್ನು ಪಡೆದು ನಿಮ್ಮ ಅಭಿಪ್ರಾಯ ವನ್ನು ಹಂಚಿಕೊಳ್ಳಬಹುದು, ದೇಶದ ಅಭಿವೃದ್ಧಿ ಯಲ್ಲಿ ನೀವು ಭಾಗವಹಿಸದಂತೆ ಆಗುತ್ತದೆ. ಇದರಿಂದ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದು ಅದರ ಉಪಯೋಗ ಪಡೆಯಬಹುದು .ಈ ಅಪ್ಲಿಕೇಶನ್ ನಮ್ಮ ಮತ್ತು ಸರ್ಕಾರದ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತದೆ.

7.mAdhaar – ನಿಮ್ಮ ಆಧಾರ್ ಕಾರ್ಡ್ ಮೊಬೈಲಿನಲ್ಲಿ

mAdhaar UIDAI ನೀಡಿರುವ ಈ ಅಪ್ಲಿಕೇಶನ್ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಈ ಅಪ್ಲಿಕೇಶನ್ ಮೂಲಕ ಬಳಸಬಹುದು. ಇದರಿಂದ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು, ನಿಮ್ಮ ವಿಳಾಸವನ್ನು (Address) ಅನ್ನು ಅಪ್ ಡೇಟ್ ಮಾಡಬಹುದು, ಮತ್ತು ekyc ಅನ್ನು ಕೂಡ ಮಾಡಬಹುದು, ಈ ಅಪ್ಲಿಕೇಶನ್ ಗಳನ್ನು ಬಳಸುವುದರ ಮೂಲಕ ನಿಮ್ಮ ಆಧಾರ್ ತಿದ್ದುಪಡಿ ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ಇರುವುದಿಲ್ಲ. ಇದರಿಂದ ನಿಮ್ಮ ಆಧಾರ್ ಕಾರ್ಡ್ ಡಿಜಿಟಲ್ ರೂಪದಲ್ಲಿ ನಿಮ್ಮ ಕೈಯಲ್ಲಿ ಇರುವಂತೆ ಮಾಡುತ್ತದೆ.

8. Fastag – ಟೋಲ್ ಗಳಲ್ಲಿ ಪಾವತಿ ಮಾಡಲು

ಫಾಸ್ಟ್ ಟ್ಯಾಗ್ ಈ ಒಂದು ಅಪ್ಲಿಕೇಶನ್ ಇಂದ ನಾವು ಪ್ರಯಾಣ ಮಾಡುವಾಗ ಟೋಲ್ ಗಳಲ್ಲಿ ಸಮಯ ವ್ಯರ್ಥ ಆಗೋದು ತಪ್ಪುತ್ತದೆ. ಇದು ನಿಮ್ಮ  ಫಾಸ್ಟ್ ಟ್ಯಾಗ್ ಕಾರ್ಡ್ ಇದರ ಮೂಲಕವೇ ರಿಚಾರ್ಜ್ ಮಾಡಬಹುದು ಇದರಿಂದ ಹೈವೇ ಗಳಲ್ಲಿ ಟೋಲ್ ಹಣ ಪಾವತಿ ಮಾಡುವುದು ಸುಲಭವಾಗುತ್ತದೆ. ಇದರ ಉಪಯೋಗಗಳು ಯಾವ ಟೋಲ್ ಅಲ್ಲಿ ಎಷ್ಟು ಹಣ ಪಾವತಿ ಮಾಡಿದ್ದೀರಿ ಅನ್ನೋ ವಿವರ ಕೊಡುತ್ತದೆ, ಮತ್ತು ಸುಲಭವಾಗಿ ಮೊಬೈಲಿನಲ್ಲಿ ಇದನ್ನು ರಿಚಾರ್ಜ್ ಮಾಡಬಹುದು, ಇದರಿಂದ ಸಮಯ ಉಳಿಯುತ್ತದೆ ಮತ್ತು ನಗದು ವಹಿವಾಟನ್ನು ಕಮ್ಮಿ ಮಾಡುತ್ತದೆ.

9. PM kisan App – ರೈತರಿಗೆ ಇರುವ ಅಪ್ಲಿಕೇಶನ್

ಈ ಅಪ್ಲಿಕೇಶನ್ ಇಂದ ರೈತರಿಗೆ ತುಂಬ ಅನುಕೂಲ ವಾಗುತ್ತಿದೆ ಇದು ಸರ್ಕಾರದ pm kisan ಯೋಜನೆಯ ಮಾಹಿತಿಯನ್ನು ರೈತರಿಗೆ ತಲುಪಿಸುತ್ತದೆ ಮತ್ತು ಅದರ ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಕಿಸಾನ್ ಯೋಜನೆಯ ಹಣ ಬಂದಿದೆಯೇ? ಎಂದು ಪರಿಶೀಲಿಸಬಹುದು, ನೊಂದಣಿ (Registration) ಮಾಹಿತಿ ಯನ್ನು  ತಿಳಿದುಕೊಳ್ಳಬಹುದು, ಸರ್ಕಾರವು ರೈತರಿಗೆ ಮಾಡುವ ಪ್ರತಿಯೊಂದು ಯೋಜನೆಯ ವಿವರಗಳನ್ನು ಈ ಅಪ್ಲಿಕೇಶನ್ ಮೂಲಕ ಮನೆಯಲ್ಲಿಯೇ ಕೂತು ಪರಿಶೀಲಿಸ ಬಹುದು.

ಈ ಅಪ್ಲಿಕೇಶನ್ ಗಳನ್ನು ಬಳಸುವುದರಿಂದ ಏನು ಪ್ರಯೋಜನಗಳು

ಇವುಗಳಿಂದ ದಿನ ನಿತ್ಯದ ವ್ಯವಹಾರದ ಜೀವನ ವನ್ನು ಸುಲಭ ಗೊಳಿಸುತ್ತದೆ. ಮತ್ತು ಇವೆಲ್ಲ ಡಿಜಿಟಲ್ ರೂಪದಲ್ಲಿ ಇರುವದರಿಂದ ನಿಮ್ಮ ದಾಖಲೆಗಳು ಸುರಕ್ಷಿತ ವಾಗಿರುತ್ತದೆ. ನೀವು ನಿಮ್ಮ ದಾಖಲೆಗಳನ್ನು ಫಿಸಿಕಲ್ ರೂಪದಲ್ಲಿ ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ ಬನ್ನಿ ಇನ್ನು ಇದರ ಇತರ ಅನೇಕ ಉಪಯೋಗಗಳ ಬಗ್ಗೆ ತಿಳಿಯೋಣ!

  • ನಿಮ್ಮ ಸಮಯವನ್ನು ಉಳಿಸುತ್ತದೆ
  • ನಿಮ್ಮ ಕೆಲಸಕ್ಕೆ ಯಾವುದೆ ಕಚೇರಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ
  • ಎಲ್ಲಾ ದಾಖಲೆಗಳು ಸುರಕ್ಷಿತ ವಾಗಿ ಇರುತ್ತದೆ
  • ಡಿಜಿಟಲ್ ಅಲ್ಲಿ ಹಣ ಪಾವತಿಸಲು ಸುಲಭ ವಾಗಿರುತ್ತದೆ
  • ಸರ್ಕಾರದ ಯೋಜನೆಗಳ ಮಾಹಿತಿ ಸಿಗುತ್ತದೆ ಇದರಿಂದ ಆ ಮಾಹಿತಿಗಳ ಅನುಕೂಲವನ್ನು ಪಡೆಯಬಹುದು.
  • ನಿಮ್ಮ ಒಂದು ಮೊಬೈಲಿನಲ್ಲಿಯೇ ಎಲ್ಲಾ ತರಹದ ಉಪಯೋಗಗಳನ್ನು ಈ ಅಪ್ಲಿಕೇಶನ್ ಮೂಲಕ  ಬಳಸಬಹುದು.

ಕೊನೆಯದಾಗಿ ಹೇಳುವುದು ಏನೆಂದರೆ

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್ ಇರುವ ಪ್ರತಿಯೊಬ್ಬ ಭಾರತೀಯರೂ ಈ ಸರ್ಕಾರಿ ಅಪ್ಲಿಕೇಶನ್ ಗಳನ್ನು ಬಳಸಬೇಕು. ಇವು ನಿಮ್ಮ ಜೀವನವನ್ನು ಸುಲಭಗೊಳಿಸುವುದಷ್ಟೇ ಅಲ್ಲ, ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.


DigiLocker, UMANG, BHIM, mParivahan, mAadhaar, ಮುಂತಾದ ಆ್ಯಪ್‌ಗಳು ನಿಜವಾಗಿಯೂ ಜನರಿಗೆ ಸಹಾಯಕ ವಾಗಿವೆ. ವಿಶೇಷವಾಗಿ ವಿದ್ಯಾರ್ಥಿ ಗಳು, ಉದ್ಯೋಗಿಗಳು, ರೈತರು ಮತ್ತು ಸಾಮಾನ್ಯ ಜನರು ಈ ಅಪ್ಲಿಕೇಶನ್ ಗಳನ್ನು ಬಳಸುವುದರಿಂದ ಬಹಳಷ್ಟು ಸರ್ಕಾರಿ ಸೇವೆಗ ಳನ್ನು ಮನೆಯಲ್ಲೇ ಇದ್ದು ಸುಲಭವಾಗಿ ಪಡೆಯಬಹುದು.


ಡಿಜಿಟಲ್ ಇಂಡಿಯಾ ಕನಸನ್ನು ನಾವು ನನಸು ಮಾಡಲು ಇಂತಹ ಅಪ್ಲಿಕೇಶನ್ ಗಳನ್ನು ಬಳಸುವುದು ನಮ್ಮ ಜವಾಬ್ದಾರಿಯೂ ಆಗಿದೆ. ಇನ್ನು ನೀವು ಈ ಆ್ಯಪ್‌ ಗಳನ್ನು ಬಳಸಿಲ್ಲ ಅಂದರೆ, ಇಂದೇ ಪ್ಲೇಸ್ಟೋರ್‌ಗೆ ಹೋಗಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಅದರ ಪ್ರಯೋಜನ ಗಳನ್ನು ಪಡೆದುಕೊಳ್ಳಿ.

Leave a Comment