ಫ್ಯೂಚರ್ ತಂತ್ರಜ್ಞಾನದ ಜೀವನ! ಮುಂದಿನ ಜಗತ್ತು ಹೇಗೆ ಇರಲಿದೆ.

ಭವಿಷ್ಯದ ತಂತ್ರಜ್ಞಾನದ ಟ್ರೆಂಡ್‌ಗಳು (AI, Jobs, Apps) ಮುಂದಿನ ಜಗತ್ತು ಹೇಗಿರಲಿದೆ ಬನ್ನಿ ನೋಡೋಣ

ಇಂದು ನಾವು ಬದುಕುತ್ತಿರುವ ಜಗತ್ತು ದಿನದಿಂದ ದಿನಕ್ಕೆ ಹಾಗೂ ಎಲ್ಲಾ ಕೆಲಸಗಳಿಗೂ ಒಂದಲ್ಲ ಒಂದು ತಂತ್ರಜ್ಞಾನ ಬಳಸುತ್ತ ತಂತ್ರಜ್ಞಾನದಿಂದ ತುಂಬಿಕೊಳ್ಳುತ್ತಿದೆ. ಸ್ಮಾರ್ಟ್‌ಫೋನ್, ಇಂಟರ್‌ನೆಟ್, ಆ್ಯಪ್‌ಗಳು, ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಇವುಗಳೆಲ್ಲಾ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿವೆ. ಮುಂದಿನ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ವಿಶೇಷವಾಗಿ AI, ಉದ್ಯೋಗಗಳು (Jobs) ಮತ್ತು ಮೊಬೈಲ್ ಅಪ್ಲಿಕೇಶನ್ ಗಳ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಆಗಲಿವೆ. ಈ ಲೇಖನದಲ್ಲಿ ನಾವು ಭವಿಷ್ಯದ ತಂತ್ರಜ್ಞಾನದ (Future technology) ಟ್ರೆಂಡ್‌ಗಳ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI)

ಇದು ಒಂದು ಫ್ಯೂಚರ್ ಅಲ್ಲಿ ಇರುವ ಬುದ್ಧಿವಂತ ತಂತ್ರಜ್ಞಾನ ಇದು ಕಂಪ್ಯೂಟರ್ ಅಥವಾ ಒಂದು ಬುದ್ಧಿವಂತ ಸಾಫ್ಟ್ ವೇರ್ ಮನುಷ್ಯನಂತೆ ಯೋಚಿಸುವ ಹಾಗೂ ಯೋಚಿಸಿ ಅದಕ್ಕೆ ತಕ್ಕಂತೆ ನಿರ್ಧಾರ ಮಾಡುವ ಒಂದು ಪವರ್ ಫುಲ್ ಸಾಮಾರ್ಥ್ಯ ಇರುವ ಒಂದು ತಂತ್ರಜ್ಞಾನ ಅಂತಾನೆ ಹೇಳಬಹುದು. ಇಂದಿನ ದಿನಗಳಲ್ಲಿ ನಾವು ಬಳಸುತ್ತಿರುವ, ಗೂಗಲ್ ಅಸಿಸ್ಟೆನ್ಸ್ (Google asistance), ಚಾಟ್ ಬಟ್ಸ್ (Chotbot), ವಾಯ್ಸ್ ಸರ್ಚ್ (Voice Search, ಇವುಗಳೆಲ್ಲ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಇದಕ್ಕೆ ಉದಾಹರಣೆ.

ಮುಂದಿನ ದಿನಗಳಲ್ಲಿ AI ಅನ್ನುವ ಈ ತಂತ್ರಜ್ಞಾನ ಇನ್ನಷ್ಟು ಶಕ್ತಿಶಾಲಿಯಾಗಲಿದೆ. ಶಾಲೆ, ಆಸ್ಪತ್ರೆ, ಬ್ಯಾಂಕ್, ರೈತಿಕೆ, ವ್ಯವಹಾರ – ಎಲ್ಲ ಕ್ಷೇತ್ರಗಳಲ್ಲಿ AI ಅನ್ನುವುದು ಪ್ರಮುಖ ಪಾತ್ರವಹಿಸಲಿದೆ. ಉದಾಹರಣೆಗೆ, ಆಸ್ಪತ್ರೆಗಳಲ್ಲಿ ರೋಗ ಗಳನ್ನು ಬೇಗ ಗುರುತಿಸಲು ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವುದು ಸಹಾಯ ಮಾಡುತ್ತದೆ. ರೈತರಿಗೆ ಹವಾಮಾನ ಹೇಗಿದೆ ವಾತಾವರಣದ ಹಾಗೂ ಹೋಗುಗಳ ಬಗ್ಗೆ ಮಾಹಿತಿ ನೀಡಿ ಬೆಳೆ ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಮುಖ್ಯವಾಗಿ ಈ AI ತಂತ್ರಜ್ಞಾನ ವನ್ನು ಬಳಸುವ ಕ್ಷೇತ್ರಗಳು

1. ಆನ್ ಲೈನ್ ಅಲ್ಲಿ ಶಾಪಿಂಗ್ ಶಿಫಾರಸ್ಸು (shopping recommend) ಮಾಡುವ ಸಿಸ್ಟಮ್ ಅಲ್ಲಿ ಬಳಸುತ್ತಾರೆ

2. ಯೂಟ್ಯೂಬ್ ಮತ್ತು ನೆಟ್ ಫ್ಲಿಕ್ (Netflix) ಗಳಲ್ಲಿ ವಿಡಿಯೋ ಗಳನ್ನು ಬಳಕೆ ದಾರರಿಗೆ ಸಜೆಸ್ಟ್ ಮಾಡಲು ಬಳಸಲಾಗುತ್ತದೆ.

3. ಆನ್ ಲೈನ್ ಅಲ್ಲಿ ಗ್ರಾಹಕರ ದೂರನ್ನು ಕೇಳಲು ಮತ್ತು ಅದನ್ನು ಬಗೆ ಹರಿಸಲು ಈ ತಂತ್ರಜ್ಞಾನವನ್ನು ಬಳಸುತ್ತಾರೆ.

4. Self driving cars ಗಳಲ್ಲಿ ಆಟೋಮ್ಯಾಟಿಕ್ ಆಗಿ ಚಲಿಸುವ ಕಾರು ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಭವಿಷ್ಯದಲ್ಲಿ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಸುಲಭಗೊಳಿಸಿ. ಸಮಯವನ್ನು ಉಳಿಸುತ್ತದೆ ಮತ್ತು ಹೆಚ್ಚಿನ ನಿಖರವಾದ ಫಲಿತಾಂಶಗಳನ್ನು ಕೊಡುತ್ತದೆ.

ಆಫೀಸ್ ಗಳಲ್ಲಿ ಇದು ಒಂದು ಹೊಸ ಜಾಬ್ ಗಳಾಗಿ ರೂಪುಗೊಳ್ಳಬಹುದು. ತಂತ್ರಜ್ಞಾನ ಬೆಳವಣಿಗೆಯಿಂದ ಉದ್ಯೋಗ ಕ್ಷೇತ್ರದಲ್ಲೂ ದೊಡ್ಡ ಬದಲಾವಣೆ ಆಗುತ್ತಿದೆ. ಕೆಲವು ಹಳೆಯ ಕೆಲಸಗಳು ಕಡಿಮೆಯಾಗಬಹುದು, ಆದರೆ ಹೊಸ ರೀತಿಯ ಕೆಲಸಗಳು ಹೆಚ್ಚಾಗುತ್ತವೆ. ಉದಾಹರಣೆಗೆ, ಮೊದಲು ಕೈಯಿಂದ ಮನುಷ್ಯರು ಮಾಡುತ್ತಿದ್ದ ಕೆಲಸಗಳನ್ನು  ಈ ತಂತ್ರಜ್ಞಾನವನ್ನು  ಬಳಸಿಕೊಂಡು ಮಾಡುತ್ತಿದ್ದಾರೆ.

ಈ ತಂತ್ರಜ್ಞಾನ ವನ್ನು ಬಳಸಿ ಕೆಲಸ ಮಾಡಲು ಹೆಚ್ಚಿನ ಬೇಡಿಕೆ ಇರುವ ಕೆಲಸಗಳು

  • AI ಎಂಜಿನಿಯರ್
  • ಡಾಟಾ ಅನಾಲಿಸ್ಟ್
  • ಅಪ್ಲಿಕೇಶನ್ ಅಬಿವೃದ್ದಿ ಪಡಿಸಲು (App Devoloper)
  • ಡಿಜಿಟಲ್ ಮಾರ್ಕೆಟಿಂಗ್ ಸ್ಪೆಷಲಿಸ್ಟ್
  • ಕಂಟೆಂಟ್ ಕ್ರಿಯೇಟ್ ಮಾಡುವುದು.

ಈ AI ಬಂದ ಮೇಲೆ ಕೆಲವರು ಕೆಲಸಗಳು ಕಳೆದು ಕೊಳ್ಳುತ್ತೇವೆ ಎಂದು ಭಯಪಡುತ್ತಾರೆ. ಆದರೆ ಸತ್ಯ ಏನೆಂದರೆ, ಹೊಸ ತಂತ್ರಜ್ಞಾನ ಬಂದಾಗ ಹೊಸ ಅವಕಾಶ ಗಳನ್ನು ಸೃಷ್ಟಿಸುತ್ತದೆ ಆ ಅವಕಾಶ ವನ್ನು ಉದ್ಯೋಗದ ರೀತಿಯಲ್ಲಿ ನಾವು ಬಳಸಬೇಕು. ಉದಾಹರಣೆಗೆ, YouTube, Blogging, Freelancing  ಇವುಗಳೆಲ್ಲಾ ಇತ್ತೀಚೆಗೆ ಹುಟ್ಟಿದ ಉದ್ಯೋಗಗಳು ಇವುಗಳನ್ನು ಈ AI ತಂತ್ರಜ್ಞಾನ ವನ್ನು ಬಳಸಿ ಇನ್ನು ಉತ್ತಮವಾಗಿ ನಾವು ಮಾಡಬಹುದು.

ವಿದ್ಯಾರ್ಥಿಗಳು ಮತ್ತು ಯುವಕರು ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಸಂಬಂಧಿತ ಕೌಶಲ್ಯಗಳನ್ನು (Skill) ಅನ್ನು ಕಲಿಯುವುದು ತುಂಬಾ ಮುಖ್ಯ. ಯಾಕೆಂದರೆ ಕೋಡಿಂಗ್, AI ಟೂಲ್ಸ್, ಆನ್ ಲೈನ್ ಮಾರ್ಕೆಟಿಂಗ್, ವಿಡಿಯೋ ಎಡಿಟಿಂಗ್ – ಇವುಗಳನ್ನು ನೀವು ಕಲಿತರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗದ ಮತ್ತು ಹೆಚ್ಚಿನ ಆದಾಯದ ಅವಕಾಶ ವನ್ನು ಪಡೆಯಬಹುದು.

ಮೊಬೈಲ್ ಅಪ್ಲಿಕೇಶನ್ ಗಳು

ಇಂದಿನ ಕಾಲದಲ್ಲಿ ಎಲ್ಲ ಕೆಲಸಗಳಿಗೂ ಒಂದು ಡೆಡಿಕೇಟೆಡ್ ಅಪ್ಲಿಕೇಶನ್ ಗಳು ಇದೆ. ಹಣ ಕಳುಹಿಸಲು UPI apps, ಓದಲು ಎಜುಕೇಷನ್ ಅಪ್ಲಿಕೇಶನ್, ಆರೋಗ್ಯ ನೋಡಿಕೊಳ್ಳಲು ಹೆಲ್ತ್ ಅಪ್ಲಿಕೇಶನ್ ಗಳು, ಕೆಲಸ ಮಾಡಲು productivity ಅಪ್ಲಿಕೇಶನ್ ಗಳು ಇವೆಲ್ಲಾ ನಮ್ಮ ದಿನನಿತ್ಯದ ಬದುಕನ್ನು ಸುಲಭ ಮಾಡಿವೆ.

ಭವಿಷ್ಯದಲ್ಲಿ ಈ ಅಪ್ಲಿಕೇಶನ್ ಗಳು ಇನ್ನಷ್ಟು ಸ್ಮಾರ್ಟ್ ಆಗಲಿವೆ. AI ತಂತ್ರಜ್ಞಾನದಿಂದ ಅಪ್ಲಿಕೇಶನ್ ಗಳು ನಮ್ಮ ಅಭ್ಯಾಸಗಳನ್ನು ಅರ್ಥಮಾಡಿಕೊಂಡು ಮತ್ತು ನಮಗೆ ಬೇಕಾದ ಮಾಹಿತಿಯನ್ನು ತಕ್ಷಣ ಒದಗಿಸುತ್ತದೆ. ಉದಾಹರಣೆಗೆ

• ಹೆಲ್ತ್ ಅಪ್ಲಿಕೇಶನ್ ಗಳು ನಮ್ಮ ಆರೋಗ್ಯದ ಮಾಹಿತಿಯನ್ನು ನೋಡಿಕೊಂಡು ನಮಗೆ ಸಲಹೆ ಗಳನ್ನು ನೀಡುತ್ತವೆ

• study ಅಪ್ಲಿಕೇಶನ್ ಗಳು ವಿಧ್ಯಾರ್ಥಿಗಳ ಮಟ್ಟಕ್ಕೆ ಅನುಗುಣವಾದ ಪಾಠಗಳನ್ನು ಸೂಚಿಸುತ್ತದೆ. 

• ಫೈನಾನ್ಸ್ ಅಪ್ಲಿಕೇಶನ್ ಗಳು. ಹಣವನ್ನು ಹೇಗೆ ಉಳಿಸಬೇಕು ಮತ್ತು ಅದನ್ನು ಯಾವ ತರ ಇನ್ವೆಸ್ಟ್ ಮಾಡಬೇಕು ಅಂತ ಸೂಚಿಸುತ್ತದೆ.

ವರ್ಕ್ ಫ್ರಮ್ ಹೋಂ ಮತ್ತು ಆನ್ ಲೈನ್ ಕೆಲಸಗಳು

ಕೋವಿಡ್ ನಂತರ ವರ್ಕ್ ಫ್ರಮ್ ಹೋಮ್ ಅನ್ನುವುದು ತುಂಬ ಹೆಚ್ಚಾಗಿದೆ. ಮನೆಯಲ್ಲಿ ಕೂತು ಮಾಡುವ ಕೆಲಸದ ಬಗ್ಗೆ ಹಲವರು ಆಸಕ್ತಿಯನ್ನು ಹೊಂದಿದ್ದಾರೆ. ಈ ನಡುವೆ ಬಹುತೇಕ ಕಂಪನಿಗಳು ಆನ್ ಲೈನ್ ಮೂಲಕ ಕೆಲಸ ಮಾಡುವ ಅವಕಾಶ ಗಳನ್ನು ನೀಡುತ್ತಿದೆ. ಇದು ಭವಿಷ್ಯದಲ್ಲಿ ಇನ್ನೂ ಹೆಚ್ಚು ಆಗಬಹುದು ಆಗಾಗಿ ಈ AI ಟೂಲ್ಸ್ ಗಳನ್ನು ಬಳಸಿ ಕೆಲಸ ಮಾಡುವ ಕೌಶಲ್ಯ (Skill) ಕಲಿತರೆ ಮುಂದೆ ನಿಮಗೆ ತುಂಬ ಉದ್ಯೋಗದ ಅವಕಾಶಗಳನ್ನು ಇದು ಒದಗಿಸುತ್ತದೆ.

ಆನ್ಲೈನ್ ಅಲ್ಲಿ ಕೆಲಸ ಮಾಡಿ ಹಣ ಗಳಿಸಬಹುದಾದ ಕೆಲವು ಮಾರ್ಗಗಳು

• ಬ್ಲಾಗಿಂಗ್ (Blogging)

• ಯೂಟ್ಯೂಬ್ ಚಾನೆಲ್ ಶುರು ಮಾಡಬಹುದು

• ಫ್ರೀ ಲ್ಯಾನ್ಸಿಂಗ್ (Freelance)

• ಅಫಿಲಿಯೆಟ್ ಮಾರ್ಕೆಟಿಂಗ್ ಪ್ರೋಗ್ರಾಮ್

ಈ ಎಲ್ಲಾ ಕೆಲಸ ಗಳನ್ನು ನೀವು ಕುಳಿತಲ್ಲಿಯೇ ಎಲ್ಲಿ ಬೇಕಾದರೂ ಆನ್ ಲೈನ್ ಮೂಲಕ ಕೆಲಸ ಮಾಡಿ ಹಣ ಗಳಿಸಬಹುದು ಇದಕ್ಕೆ ಒಂದು ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಇದ್ದರೆ ಸಾಕು.

ಆಟೋಮೇಷನ್ ಮಷೀನ್ ಗಳು ಮಾಡುವ ಕೆಲಸಗಳು

ಭವಿಷ್ಯದಲ್ಲಿ ಅನೇಕ ಕೆಲಸಗಳನ್ನು ಮಷೀನ್ ಗಳು ಮತ್ತು ರೋಬೋಟ್‌ಗಳು ಮಾಡಲಿವೆ. ಕಾರ್ಖಾನೆ ಗಳಲ್ಲಿ ಈಗಾಗಲೇ ಆಟೋಮೇಷನ್ (Automation) ಶುರುವಾಗಿದೆ. ಇದು ಕೆಲಸವನ್ನು ವೇಗ ಮತ್ತು ಕಡಿಮೆ ವೆಚ್ಚದಲ್ಲಿ ಮಾಡಿ ಮುಗಿಸುತ್ತವೆ.

ಇದರಿಂದ ಮನುಷ್ಯರಿಗೆ ಕೆಲಸ ಇಲ್ಲದಂತೆ ಆಗುವುದಿಲ್ಲ . ಅದರ ಬದಲು ಮಷೀನ್ ಗಳನ್ನು ನಿಯಂತ್ರಿಸುವ ಉದ್ಯೋಗಗಳು ಸೃಷ್ಟಿ ಗೊಳ್ಳುತ್ತವೆ. ಅದಕ್ಕಾಗಿ ನೀವು ಈ ಕೌಶಲ್ಯ ಗಳನ್ನು ಕಲಿತಿಕೊಂಡರೆ ಭವಿಷ್ಯ ದಲ್ಲಿ ಉತ್ತಮ ವಾದ ಅವಕಾಶ ಗಳು ಸಿಗುತ್ತವೆ.

ಸ್ಮಾರ್ಟ್ ಹೋಮ್ಸ್ ಮತ್ತು ಸ್ಮಾರ್ಟ್ ನಗರಗಳು(cities)

ಮುಂದಿನ ದಿನಗಳಲ್ಲಿ ಮನೆಗಳು ಕೂಡ ಸ್ಮಾರ್ಟ್ ಆಗಲಿವೆ. ಮೊಬೈಲ್ ಮೂಲಕ ಈ AI ತಂತ್ರಜ್ಞಾನ ವನ್ನು ಬಳಸಿ ಈ ಲೈಟ್, ಫ್ಯಾನ್, ಕ್ಯಾಮೆರಾ, ಡೋರ್ ಲಾಕ್ ಎಲ್ಲವನ್ನೂ ನಿರ್ವಹಿಸಬಹುದು. ಈಗಾಗಲೇ ಕೆಲವು ನಗರಗಳಲ್ಲಿ Smart City ಯೋಜನೆಗಳು ನಡೆಯುತ್ತಿವೆ.

ಸ್ಮಾರ್ಟ್ ಟೆಕ್ನಾಲಜಿ ಯನ್ನು ಬಳಸಿ 1. ಟ್ರಾಫಿಕ್ ಅನ್ನು ನಿಯಂತ್ರಣ ಮಾಡಬಹುದು, 2. ಭದ್ರತೆಯನ್ನು ಹೆಚ್ಚಿಸಬಹುದು ಹಾಗೂ ವಿದ್ಯುತ್ ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡುವ ಕೆಲಸವನ್ನು ಮಾಡಬಹುದು.

AI ಟೂಲ್ಸ್ ಕಂಟೆಂಟ್ ಕ್ರಿಯೇಟ್ ಮಾಡುವುದಕ್ಕೆ ಸುಲಭವಾದ ವಿಧಾನ

ಇತ್ತೀಚೆಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎನ್ನುವುದು ತುಂಬಾ ಜನಪ್ರಿಯವಾಗಿವೆ. ಬರವಣಿಗೆಯಲ್ಲಿ, ಫೋಟೋ ಎಡಿಟಿಂಗ್, ಬ್ಲಾಗಿಂಗ್, ವಿಡಿಯೋ ಕ್ರಿಯೇಷನ್ ಈ ಎಲ್ಲದರಲ್ಲೂ AI ಸಹಾಯ ಪಡೆದು ಉತ್ತಮವಾಗಿ ಕೆಲಸ ನಿರ್ವಹಿಸಬಹುದು. Blogger, YouTuber, Digital Marketer ಇವರಿಗೆ ಇದು ತುಂಬಾ ಉಪಯುಕ್ತ. ಉದಾಹರಣೆಗೆ

•AI ಸಹಾಯ ಪಡೆದು ಬ್ಲಾಗ್ ಪೋಸ್ಟ್ ಗಳನ್ನು ಬರೆಯಬಹುದು

•Thumbnail ಡಿಸೈನ್ ಮಾಡಬಹುದು

•ವಿಡಿಯೋ ಸ್ಕ್ರಿಪ್ಟ್ ಅನ್ನು ರೆಡಿ ಮಾಡಬಹುದು

•SEO ಐಡಿಯಾ ಗಳನ್ನು ಪಡೆಯಬಹುದು

ಇವುಗಳಿಂದ ಸಮಯ ಉಳಿಯುತ್ತದೆ ನಿಮ್ಮ ಕೆಲಸವನ್ನು ವೇಗವಾಗಿ ಮತ್ತು ಅತ್ಯುತ್ತಮವಾಗಿ ಮಾಡಬಹುದು.

ಭವಿಷ್ಯಕ್ಕಾಗಿ ಯಾವ ಕೌಶಲ್ಯ ಗಳನ್ನು ಕಲಿಯಬೇಕು

ಮುಂದಿನ ತಂತ್ರಜ್ಞಾನ ಜಗತ್ತಿನಲ್ಲಿ ಯಶಸ್ಸು ಪಡೆಯಲು ಹೊಸ ಕೌಶಲ್ಯಗಳನ್ನು ಕಲಿಯಬೇಕು. ವಿಶೇಷವಾಗಿ ವಿಧ್ಯಾರ್ಥಿಗಳು ಯುವಕರು ಈ ವಿಷಯಗಳ ಬಗ್ಗೆ ಗಮನ ಕೊಡುವುದು ಉತ್ತಮ

  • ಬೇಸಿಕ್ ಕಂಪ್ಯೂಟರ್ ಜ್ಞಾನ
  • ಇಂಟರ್ ನೆಟ್ ಅನ್ನು ಸಮರ್ಪಕವಾಗಿ ಬಳಸುವುದು
  • AI ಟೂಲ್ಸ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದು
  • ಇಂಗ್ಲಿಷ್ ಕಮ್ಯುನಿಕೇಷನ್ ಸ್ಕಿಲ್
  • ಡಿಜಿಟಲ್ ಕೌಶಲ್ಯಗಳು (Skills)

ಇವುಗಳನ್ನು ಕಲಿತರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ. ಮತ್ತು ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬಹುದು.

ಕೊನೆಯದಾಗಿ ಹೇಳಬೇಕೆಂದರೆ

ಭವಿಷ್ಯದಲ್ಲಿ ಜಗತ್ತು ಸಂಪೂರ್ಣವಾಗಿ ತಂತ್ರಜ್ಞಾನದಿಂದ ರೂಪುಗೊಂಡಿರುತ್ತದೆ AI, ಅಪ್ಲಿಕೇಶನ್ ಮತ್ತು ಆನ್ ಲೈನ್ ಕೆಲಸಗಳು, ನಮ್ಮ ಜೀವನವನ್ನು ಇನ್ನಷ್ಟು ಸುಲಭ ಮಾಡಲಿವೆ. ಕೆಲ ಕೆಲಸಗಳು ಕಡಿಮೆಯಾಗಬಹುದು, ಆದರೆ ಹೊಸ ಕೆಲಸಗಳು ಹುಟ್ಟುತ್ತವೆ. ಆದ್ದರಿಂದ ಜಗತ್ತು ಬದಲಾದ ಹಾಗೆ ನಾವು ನಮ್ಮ ಕೌಶಲ್ಯ ಗಳನ್ನು ಅಭಿವೃದ್ಧಿ ಮಾಡಿಕೊಳ್ಳುತ್ತ ಅದಕ್ಕೆ ಹೊಂದುಕೊಳ್ಳಬೇಕು!


ಇಂದೇ ತಂತ್ರಜ್ಞಾನ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದರೆ, ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಿರ್ಮಿಸಿ ಕೊಳ್ಳಬಹುದು. AI, Apps ಮತ್ತು Digital skills ಕಲಿತವರು ಭವಿಷ್ಯದಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಾರೆ. ಇದು ನಮ್ಮ ಜೀವನದ ಹೊಸ ಯುಗವಾಗಿ ಬದಲಾಗುತ್ತೆ ಅದೆ ತಂತ್ರಜ್ಞಾನ ಯುಗ.

Leave a Comment