ಬ್ಲಾಗಿಂಗ್ ಅಂದ್ರೆ ಏನು? ಕನ್ನಡದಲ್ಲಿ Blogging ಹೇಗೆ ಮಾಡಬೇಕು? (Beginner Guide)

ಬ್ಲಾಗಿಂಗ್ ಮಾಡಿ ನೀವು ಹಣ ಸಂಪಾದಿಸಬಹುದು ಎಂದು ನಿಮಗೆ ಗೊತ್ತೇ? ಹೌದು ಈಗಿನ ಡಿಜಿಟಲ್ ಯುಗದಲ್ಲಿ ಬ್ಲಾಗಿಂಗ್ ಎನ್ನುವುದು  ಆನ್ ಲೈನ್ ಅಲ್ಲಿ ಹಣ ಮಾಡುವುದಕ್ಕೆ ಒಂದು ಉತ್ತಮ ಆಯ್ಕೆ. ಹಲವರು ತಮ್ಮಲ್ಲಿರುವ ವಿಶೇಷ ಜ್ಞಾನ ಮತ್ತು ತಮ್ಮ ಹವ್ಯಾಸಗಳನ್ನು ಬರವಣಿಗೆ ಮೂಲಕ ಬರೆದು ಬ್ಲಾಗಿಂಗ್ ಮಾಡುತ್ತಾರೆ. ಕೆಲವರು ಕೇವಲ ಹವ್ಯಾಸಕ್ಕಾಗಿ ಬ್ಲಾಗಿಂಗ್ ಮಾಡಿದರೆ. ಇನ್ನು ಹಲವರು ಈ ಬ್ಲಾಗಿಂಗ್ ಮೂಲಕ ಹಣ ಸಂಪಾದಿಸಲು ಶುರು ಮಾಡುತ್ತಾರೆ. ನೀವು ಬ್ಲಾಗಿಂಗ್ ವಿಷಯದಲ್ಲಿ ಹೊಸಬರು ಆಗಿದ್ದರೆ ಬ್ಲಾಗಿಂಗ್ ಅಂದ್ರೆ ಏನು? ಕನ್ನಡದಲ್ಲಿ ಬ್ಲಾಗಿಂಗ್ ಹೇಗೆ ಮಾಡಬೇಕೆಂದು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಬ್ಲಾಗಿಂಗ್ ಅಂದ್ರೆ ಏನು?

ಈಗ ಬ್ಲಾಗಿಂಗ್ ಅಂದರೆ ಏನು ಎಂದು ತಿಳಿದುಕೊಳ್ಳೋಣ ಬನ್ನಿ ಬ್ಲಾಗಿಂಗ್ ಎಂದರೆ ನಿಮಗೆ ಬರವಣಿಗೆಯ ಹವ್ಯಾಸ ಇದ್ದರೆ ಸಾಕು ಆ ಹವ್ಯಾಸವನ್ನು ಬ್ಲಾಗ್ ಪೋಸ್ಟ್ ಗಳನ್ನು ರಚನೆ ಮಾಡುವ ಮೂಲಕ ಹಣ  ಸಂಪಾದನೆ ಮಾಡಬಹುದು ಬ್ಲಾಗಿಂಗ್ ಎಂದರೆ ನಿಮಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ಲೇಖನಿ ಬರೆದು ನಿಮ್ಮದೇ ಆದ ವೆಬ್ ಸೈಟ್ ಅನ್ನು ರಚಿಸಿ ಅದರಲ್ಲಿ ಪಬ್ಲಿಷ್ ಮಾಡಿ ಜಾಹೀರಾತುಗಳ ಮೂಲಕ ಹಣಗಳಿಸುವುದು. ಈಗ ಬ್ಲಾಗಿಂಗ್ ಏಕೆ ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ!

ಕನ್ನಡದಲ್ಲಿ ಬ್ಲಾಗಿಂಗ್ ಏಕೆ ಮಾಡಬೇಕು?

ಇಂದಿನ ದಿನಗಳಲ್ಲಿ ಲೋಕಲ್ ಭಾಷೆಯಲ್ಲಿ ಕಂಟೆಂಟ್ ನೋಡುವ ವೀಕ್ಷಕರ ಸಂಖ್ಯೆ ಜಾಸ್ತಿ ಇದೆ. ಅದರ ಬೇಡಿಕೆ ಕೂಡ ಇದೆ ಆದರೆ ಕನ್ನಡದಲ್ಲಿ ಒಳ್ಳೆ ಗುಣಮಟ್ಟದ ಬ್ಲಾಗಿಂಗ್ ಮಾಡುವ ವೆಬ್ ಸೈಟ್ ಗಳು ತುಂಬ ಕಡಿಮೆ ಇದೆ. ಆದರಿಂದ ಕನ್ನಡದಲ್ಲಿ ಬ್ಲಾಗ್ ಪ್ರಾರಂಭ ಮಾಡುವುದರಿಂದ ನಿಮಗೆ ಹೆಚ್ಚಿನ ಟ್ರಾಫಿಕ್ (Views) ಸಿಗುತ್ತದೆ, ಸ್ಪರ್ಧೆ (Compitation) ಕೂಡ ಕಡಿಮೆ ಇದೆ, ಗೂಗಲ್ ಜಾಹೀರಾತು ಮತ್ತು ಅಫಿಲಿಯೆಟ್ ಮಾರ್ಕೆಟಿಂಗ್ ಮೂಲಕ ಮೂಲಕ ಹಣವನ್ನು ಗಳಿಸಬಹುದು.

ಬ್ಲಾಗಿಂಗ್ ಶುರು ಮಾಡುವುದು ಹೇಗೆ

1.ಸರಿಯಾದ ವಿಷಯವನ್ನು(Niche)ಆಯ್ಕೆ ಮಾಡುವುದು

ಮೊದಲು ನಿಮಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿ ಕೊಳ್ಳಿ ಉದಾಹರಣೆಗೆ; ತಂತ್ರಜ್ಞಾನ (Technology), ಅಡುಗೆ (Cooking), ಆನ್ ಲೈನ್ ಅರ್ನಿಂಗ್ (Online earning), ಆರೋಗ್ಯ + ಫಿಟ್ ನೆಸ್ (Health&Fitness), ಮನೋರಂಜನೆ (Entertainment), ಹೀಗೆ ನಿಮಗೆ ಆಸಕ್ತಿ ಇರುವ ಅದರಲ್ಲೂ ನೀವು ಲೇಖನಿ ಬರೆಯಬಹುದಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು!

2.ಬ್ಲಾಗ್ ನ ಹೆಸರು ಮತ್ತು ಡೊಮೇನ್ (Domain) ಮತ್ತು ಹೋಸ್ಟಿಂಗ್(Hosting) ಅನ್ನು  ಖರೀದಿ ಮಾಡಿ

ನೀವು ನಿಮಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿದ ನಂತರ ಅದಕ್ಕೆ ಒಂದು ಹೆಸರು ಮತ್ತು ವೆಬ್ ಸೈಟ್ ಅನ್ನು ರಚಿಸಲು ನಿಮಗೆ ಈ ಡೊಮೇನ್ (Domain) ಹೋಸ್ಟಿಂಗ್ (Hosting) ಖರೀದಿ ಮಾಡಬೇಕಾಗುತ್ತೇ ಇದಕ್ಕೆ ಹಲವಾರು ಕಂಪನಿಗಳು ಇದಾವೆ
ಅದರಲ್ಲಿ ಉತ್ತಮವಾದ ಆಯ್ಕೆ ಎಂದರೆ Hostinger, ಮತ್ತು
Blue host, ಇದರಲ್ಲಿ ಬೆಸ್ಟ್ ಅಂದರೆ Hostinger ಇಲ್ಲಿ ನಿಮಗೆ ಉಚಿತ Domain ಕೂಡ ದೊರೆಯುತ್ತದೆ.


3.ವರ್ಲ್ಡ್ ಪ್ರೆಸ್ ಅಥವಾ ಬ್ಲಾಗರ್ ಅಪ್ಲಿಕೇಶನ್ ಅನ್ನು ಇನ್ ಸ್ಟಾಲ್ ಮಾಡಬೇಕು

ನಿಮ್ಮ ಮೊಬೈಲಿನ ಪ್ಲೇ ಸ್ಟೋರಿನಲ್ಲಿ ವರ್ಡ್ ಪ್ರೆಸ್ ಹಾಗೂ ಬ್ಲಾಗರ್ ಈ ಅಪ್ಲಿಕೇಶನ್ ಗಳು ಲಭ್ಯವಿರುತ್ತದೆ ಅದನ್ನು ಇನ್ ಸ್ಟಾಲ್ ಮಾಡಿ. ಇದರಲ್ಲಿ ನೀವು ಬ್ಲಾಗ್ ಗಳನ್ನು ರಚಿಸಲು ಇರುವ ಅಪ್ಲಿಕೇಶನ್ ಗಳು ಇದರಲ್ಲೇ ನೀವು ಬ್ಲಾಗ್ ಅನ್ನು ರಚಿಸಿ ಪಬ್ಲಿಷ್ ಮಾಡಬೇಕಾಗಿರುವುದು.

4.ಥೀಮ್ (Theme) ಮತ್ತು ಪ್ಲಗ್ಗಿನ್ ಅನ್ನು ಇನ್ ಸ್ಟಾಲ್ ಮಾಡುವುದು

ನೀವು ಡೊಮೇನ್ ಮತ್ತು ಹೋಸ್ಟಿಂಗ್ ಖರೀದಿ ಮಾಡಿ ,ವರ್ಲ್ಡ್ ಪ್ರೆಸ್
ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿದ ನಂತರ
ವರ್ಲ್ಡ್ ಪ್ರೆಸ್ ಅಪ್ಲಿಕೇಶನ್ ಅಲ್ಲಿ  ನೀವು ಬ್ಲಾಗ್ ರಚಿಸಲು ಥೀಮ್ ಮತ್ತು ಪ್ಲಗಿನ್ ಗಳನ್ನು ಇನ್ ಸ್ಟಾಲ್ ಮಾಡಬೇಕಾಗುತ್ತೇ. ಇಲ್ಲಿ ಥೀಮ್ ಎಂದರೆ ನೀವು ಬ್ಲಾಗ್ ರಚಿಸಲು ಸಿಗುವ ಫಾರ್ಮಾಟ್ ಗಳು ಉತ್ತಮ ವಾದ ಥೀಮ್ (Theme) ಎಂದರೆ astra ಅಥವಾ Generate press, ಪ್ಲಗ್ಗಿನ್ ಗಳು(Pluggin) ಎಂದರೆ ಸಾಫ್ಟ್ವೇರ್ ನ ಭಾಗಗಳು ಇವು ನಿಮ್ಮ ವೆಬ್ ಸೈಟಿನ ವೇಗ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ನಿಮಗೆ ಅಗತ್ಯವಿರುವ ಪ್ಲಗಿನ್ ಗಳೆಂದರೆ, Rank Math SEO, Google Site Kit, ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು

5.ಕನ್ನಡ ಕಂಟೆಂಟ್ ಬರೆಯಲು ಶುರು ಮಾಡಿ

ಮೇಲೆ ಹೇಳಿರುವ ಎಲ್ಲಾ ಹಂತಗಳನ್ನು ಮಾಡಿ ಮುಗಿಸಿದ ನಂತರ ನೀವು ಆಯ್ಕೆ ಮಾಡಿರುವ ವಿಷಯದ ಬಗ್ಗೆ  ಲೇಖನಿಗಳನ್ನು (Blog) ಗಳನ್ನು ಬರೆಯಲು ಶುರು ಮಾಡಿ 800 ಇಂದ 1000 ಪದಗಳಲ್ಲಿ ನಿಮ್ಮ ಲೇಖನಿ ಇರಲಿ ಹಾಗೂ ಕನ್ನಡ ವನ್ನು ಜಾಸ್ತಿ ಬಳಸಿ ಒರಿಜಿನಲ್ ಮತ್ತು ವಿಭಿನ್ನವಾದ ಕಂಟೆಂಟ್ ಆಗಿರಲಿ

6. ವಿಷಯವನ್ನು (Niche) ಆಯ್ಕೆ ಮಾಡುವಾಗ

ನೀವು ಬ್ಲಾಗ್ ಬರೆಯುವ ವಿಷಯವನ್ನು ಆಯ್ಕೆ ಮಾಡುವಾಗ ನಿಮಗೆ ಬ್ಲಾಗ್ ಬರೆಯಲು ಚನ್ನಾಗಿ ಬರುವಂತ ವಿಷಯವನ್ನು ಆಯ್ಕೆ ಮಾಡಿ ಅದು ವಿಶೇಷವಾಗಿ ಗೂಗಲ್ ಜಾಹೀರಾತು ಗೆ ಸೇರಿಸುವ ಸಮಯದಲ್ಲಿ ನಿಮ್ಮ ವೆಬ್ ಸೈಟಿನ ಬ್ಲಾಗ್ ಗಳು ಒಂದೇ ವಿಷಯದ ಮೇಲೆ ಇರಲಿ ಮಿಕ್ಸೆಡ್ (mixed) niche (ವಿಷಯಗಳ) ಮೇಲೆ ಬೇಡ ಗೂಗಲ್ ಜಾಹೀರಾತು ಸೇರಿಸಿದ ಮೇಲೆ ಬೇಕಾದರೆ ನೀವು ಬೇರೆ ವಿಷಯದ ಬಗ್ಗೆ ಬೇಕಿದ್ದರೆ ಬ್ಲಾಗ್ ಬರೆಯಬಹುದು ಆದಷ್ಟು ಒಂದೇ ವಿಷಯದ ಮೇಲೆ ಬ್ಲಾಗ್ ಇದ್ದರೆ ಉತ್ತಮ

7. ಒಳ್ಳೆಯ ಬ್ಲಾಗ್ ಪೋಸ್ಟ್ ಹೀಗಿರಬೇಕು

ನೀವು ಒಂದು ಉತ್ತಮ ಬ್ಲಾಗ್ (Article) ಅನ್ನು ಬರೆಯಲು ನೀವು ಒಂದು ಉತ್ತಮ ವಿಷಯವನ್ನು ಆಯ್ಕೆ ಮಾಡಿ ಮತ್ತು ಅದರಲ್ಲಿ ಕಡಿಮೆ ಎಂದರು 800 ರಿಂದ 1000 ಪದಗಳಲ್ಲಿ ಇರಲಿ, ಸರಳವಾದ ಕನ್ನಡ ವನ್ನು ಬಳಸಿ ಗೂಗಲ್ ಅಲ್ಲಿ ಅನುಕರಣೆ (Google Translate) ಮಾಡಿದ ಕನ್ನಡ ಬೇಡ, ಓದುಗರಿಗೆ ಉಪಯೋಗ ಇರುವ ಮಾಹಿತಿ ಆಗಿರಲಿ, ಶೀರ್ಷಿಕೆ (Headlines) ಗಳನ್ನು ಸರಿಯಾಗಿ ಬಳಸಿ, ಬೇರೆ ವೆಬ್ ಸೈಟ್ ಗಳಲ್ಲಿ ವಿಷಯವನ್ನು ನಕಲು (Copy) ಮಾಡಿ ನಿಮ್ಮ ವೆಬ್ ಸೈಟಿನಲ್ಲಿ ಪೋಸ್ಟ್ ಮಾಡಬೇಡಿ,

7. ಹಣ ಮಾಡುವ ವಿಧಾನಗಳು

ಬ್ಲಾಗ್ ಗಳನ್ನು ಬರೆದು ಪಬ್ಲಿಷ್ ಏನೋ ಮಾಡಿದ್ದೀರಾ ಈಗ ಇದರ  ಮೂಲಕ ಹಣ ಸಂಪಾದನೆ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ ನೀವು ಬ್ಲಾಗ್ ಮೂಲಕ ಹಲವಾರು ಮಾರ್ಗಗಳಲ್ಲಿ ಹಣ ಸಂಪಾದಿಸಬಹುದು ಮೊದಲನೆಯದು ಗೂಗಲ್ ಜಾಹೀರಾತಿಗೆ ಸೇರಿಸುವ (Google Adsense) ಮೂಲಕ ಹಣ ಸಂಪಾದನೆ ಮಾಡಬಹುದು. ಎರಡನೆಯದು ಅಫಿಲಿಯೆಟ್  ಮಾರ್ಕೆಟಿಂಗ್ ಪ್ರೋಗ್ರಾಮ್ (Affiliate Marketing Program) ಗಳ ಮೂಲಕ ಹಣ ಸಂಪಾದಿಸಬಹುದು ನೀವು ನಿಮ್ಮ ಬ್ಲಾಗ್ ನಲ್ಲಿ ಈ ಅಫಿಲಿಯೆಟ್ ಲಿಂಕ್ ಗಳನ್ನು ಸೇರಿಸಿ ಅದರ ಮೂಲಕ ಯಾರಾದರೂ ವಸ್ತುಗಳನ್ನು ಕೊಂಡುಕೊಂಡರೆ ನಿಮಗೆ ಕಮಿಷನ್ ಮೂಲಕ ಹಣ ಸಂಪಾದನೆ ಮಾಡಬಹುದು, ಮತ್ತು ಬ್ರಾಂಡ್ ಪ್ರಾಯೋಜಕತ್ವದ (Brand Sponsorship) ಮೂಲಕ ಹಣ ಸಂಪಾದನೆ ಮಾಡಬಹುದು.

8. ಹೊಸಬರು ಮಾಡುವ ತಪ್ಪುಗಳು

ಬ್ಲಾಗಿಂಗ್ ಪ್ರಾರಂಭ ಮಾಡಲು ಬರುವ ಹೊಸಬರು ಕೆಲವು ತಪ್ಪುಗಳನ್ನು ಮಾಡುತ್ತಾರೆ ಅವುಗಳು ಏನಂದರೆ, ಬೇಗ ಹಣ ಬರಬೇಕು ಎಂದು ನಿರೀಕ್ಷೆ (Expectation) ಮಾಡುತ್ತಾರೆ, ಮತ್ತು ಬೇರೆ ವೆಬ್ ಸೈಟ್ ಇಂದ ಕಂಟೆಂಟ್ ಗಳನ್ನು ನೇರವಾಗಿ ನಕಲು (Copy) ಮಾಡಿ ತಮ್ಮ ವೆಬ್ಸೈಟ್ ಅಲ್ಲಿ ಪೋಸ್ಟ್ ಮಾಡುವುದು, ದಿನ ನಿತ್ಯ ಲೇಖನಿ ಗಳನ್ನು ಪೋಸ್ಟ್ ಮಾಡದೆ ಇರುವುದು, SEO (search engine optimization) ಬಗ್ಗೆ ಗಮನ ಕೊಡದೆ ಇರುವುದು, ಬ್ಲಾಗಿಂಗ್ ಒಂದು ದೀರ್ಘಕಾಲಿಕ ವ್ಯವಹಾರ ತಾಳ್ಮೆಯಿಂದ ಇರುವುದು ತುಂಬಾ ಮುಖ್ಯ.

9. ಬ್ಲಾಗಿಂಗ್ ಅಲ್ಲಿ ಯಶಸ್ಸು ಪಡೆಯಲು ಮಾಡಬೇಕಾದ ಕೆಲಸಗಳು

1.ವಿಭಿನ್ನವಾದ ವಿಷಯದ ಬಗ್ಗೆ ನಿಮ್ಮ ಬ್ಲಾಗ್ ಇರಲಿ 2.ದಿನ ನಿತ್ಯ ಒಂದು ಪೋಸ್ಟ್ ಅನ್ನು ಹಾಕಬೇಕು ಅಥವಾ ವಾರಕ್ಕೆ 3 ಪೋಸ್ಟ್ ಆದರೂ ಹಾಕಲೇಬೇಕು, 2.SEO ಫ್ರೆಂಡ್ಲಿ ಟೈಟಲ್ ಅನ್ನು ಬಳಸಬೇಕು, 3.ಲೇಖನಿಯಲ್ಲಿ ಸರಿಯಾದ ಒಳ್ಳೆಯ ಚಿತ್ರಗಳನ್ನು (Images) ಅನ್ನು ಬಳಸಿ, 4.ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 5. ನಿರಂತರವಾಗಿ ಕಲಿತು ಬ್ಲಾಗ್ ಪೋಸ್ಟ್ ಗಳನ್ನು ಬರೆಯಿರಿ.

ಮೂರರಿಂದ ಆರು ತಿಂಗಳಲ್ಲಿ ಉತ್ತಮವಾದ ಟ್ರಾಫಿಕ್ ಬರಲು ಶುರುವಾಗುತ್ತದೆ.

ಕೊನೆಯದಾಗಿ ಹೇಳುವುದೇನೆಂದರೆ

ಬ್ಲಾಗಿಂಗ್ ಎಂದರೆ ಸುಮ್ಮನೆ ಬರೆಯುವುದಲ್ಲ. ಅದು ಒಂದು ಕೌಶಲ್ಯ (Skill) ಅದನ್ನು ಕಲಿತುಕೊಂಡು ಮಾಡಿದರೆ ನಿಮ್ಮ ಬ್ಲಾಗಿಂಗ್ ಅನ್ನು ಕ್ಯಾರಿಯರ್ ಕೂಡ ಮಾಡಿಕೊಳ್ಳಬಹುದು. ಕನ್ನಡದಲ್ಲಿ ಬ್ಲಾಗಿಂಗ್ ಪ್ರಾರಂಭಿಸಲು ಇದು ಒಳ್ಳೆಯ ಸಮಯ ಏಕೆಂದರೆ ಕಾಂಪಿಟೇಶನ್ ಕಮ್ಮಿ ಮತ್ತು ದಿನ ನಿತ್ಯ ಒಳ್ಳೆಯ ವಿಶಿಷ್ಟ ವಾದ ಕಂಟೆಂಟ್ ಬರೆಯುತ್ತ ಹೋದರೆ ಉತ್ತಮ ಆದಾಯವನ್ನು ಭವಿಷ್ಯದಲ್ಲಿ ಗಳಿಸಬಹುದು. ನೀವು ಬ್ಲಾಗಿಂಗ್ ಅಲ್ಲಿ ಹೊಸಬರಾಗಿದ್ದರು ಪರವಾಗಿಲ್ಲ ಕಲಿಯುತ್ತ ಬರೆಯುತ್ತ ಹೋಗಿ ನಿಮಗೆ ಭವಿಷ್ಯ ದಲ್ಲಿ ಉತ್ತಮ ಆದಾಯ ಪಡೆಯಬಹುದು.

3 thoughts on “ಬ್ಲಾಗಿಂಗ್ ಅಂದ್ರೆ ಏನು? ಕನ್ನಡದಲ್ಲಿ Blogging ಹೇಗೆ ಮಾಡಬೇಕು? (Beginner Guide)”

  1. ನಮ್ಮ ಅನಿಸಿಕೆಯನ್ನು ಇದರ ಮೂಲಕ ತಿಳಿಸಬಹುದಾ ಅಂದರೆ ನಮ್ಮ ಮನೆಯಲ್ಲಿ ವಿಷಯ ಆಗಿರಬಹುದು ನಾವು ಬೇರೆಯವರ ಪ್ರೀತಿ ತೋರಿಸುವ ಬಗ್ಗೆ ಆಗಿರಬಹುದು

    Reply

Leave a Comment