2026 ಅಲ್ಲಿ ಹೊಸ ಸ್ಮಾರ್ಟ್ ಫೋನ್ ತಗೋಬೇಕು ಅನ್ಕೊಂಡಿದ್ದೀರಾ ಮಾರುಕಟ್ಟೆ ಯಲ್ಲಿ ಇರುವ ಸಾವಿರಾರು ಸ್ಮಾರ್ಟ್ ಫೋನ್ ಗಳಲ್ಲಿ ಸರಿಯಾದ ಸ್ಮಾರ್ಟ್ ಅನ್ನು ಆಯ್ಕೆ ಮಾಡುವುದು ಕಷ್ಟವೇ ಸರಿ. ಅದರಿಂದ ನಿಮ್ಮ ಅಗತ್ಯಕ್ಕೆ , ಬಳಕೆ, ಮತ್ತು ನಿಮ್ಮ ಬಜೆಟ್ ಅನ್ನು ಯಾವ ಸ್ಮಾರ್ಟ್ ಫೋನ್ ಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸುವ ಸಂಪೂರ್ಣ ಗೈಡ್ (Guide) ಇಲ್ಲಿದೆ ನೋಡಿ
2026 letest smartphone buying creteria
2026 ರಲ್ಲಿ ಸ್ಮಾರ್ಟ್ ಫೋನ್ ಗಳು ತುಂಬ ಅಪ್ ಗ್ರೇಡ್ (Upgrade) ಆಗಿವೆ. AI ಕ್ಯಾಮೆರಾ, ದೊಡ್ಡ ಬ್ಯಾಟರಿ, 5G/6G ರೆಡಿ ಚಿಪ್ ಗಳು, foldable design, ಮತ್ತು ಹೈ ಪರ್ಫಾರ್ಮೆನ್ಸ್ (high Performance) ಪ್ರೊಸೆಸರ್ ಗಳು ಈಗ ಸಾಮಾನ್ಯವಾಗಿದೆ. ಆದರಿಂದ ಫೋನ್ ಖರೀದಿಸುವ ಮುನ್ನ ಈ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
1.ಮೊದಲು ನಿಮ್ಮ ಬಜೆಟ್ ಅನ್ನು ಫಿಕ್ಸ್ ಮಾಡಿಕೊಳ್ಳಿ
ನೀವು ಹೊಸ ಸ್ಮಾರ್ಟ್ ಫೋನ್ ತಗೊಳುವ ಮೊದಲು ನಿಮ್ಮ ಬಜೆಟ್ ಎಷ್ಟು ನಿಮ್ಮ ಅವಶ್ಯಕತೆ ಏನು ಎಷ್ಟು ಹಣ ಖರ್ಚು ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಿ!
ನಿಮ್ಮ ಬಜೆಟ್ 10.000 ಯಿಂದ 15.000 ಇದ್ದರೆ ಈ ಬಜೆಟ್ ಅಲ್ಲಿ ನಿಮಗೆ ಒಂದು ಬೇಸಿಕ್ ಬಳಕೆಗೆ ಉತ್ತಮವಾದ ಸ್ಮಾರ್ಟ್ ಫೋನ್ ದೊರೆಯುತ್ತದೆ. ವಾಟ್ಸ್ ಅಪ್, ಇನ್ಸ್ಟಾಗ್ರಾಮ್, ಕಾಲ್, ಈ ತರ ಬಳಕೆಗೆ.
ನಿಮ್ಮ ಬಜೆಟ್ 15.000 ಯಿಂದ 25.000 ಈ ಬಜೆಟ್ ಆಗಿದ್ದರೆ ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಬಳಕೆಗೆ ಉತ್ತಮವಾದ ಫೋನ್ ಅನ್ನು ಆಯ್ಕೆ ಮಾಡಬಹುದು.
ನಿಮ್ಮ ಬಜೆಟ್ 25000 ಯಿಂದ 40000 ಆಗಿದ್ದರೆ ಒಳ್ಳೆ ಕ್ಯಾಮೆರಾ ಮತ್ತು ಗೇಮಿಂಗ್ ಮಾಡುವುದಕ್ಕೆ ಒಳ್ಳೆ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು.

40,000 ಮೇಲ್ಪಟ್ಟು ನಿಮ್ಮ ಬಜೆಟ್ ಇದ್ದರೆ ಒಂದು ಒಳ್ಳೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಇರುವ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡಬಹುದು.
2026 ರಲ್ಲಿ ನಿಮಗೆ ಎಲ್ಲ ಬಜೆಟ್ ಅಲ್ಲು ಒಳ್ಳೆಯ ತರಹದ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ.
2. ಪ್ರೊಸೆಸರ್ (Performance) ಇದು ಬಹಳ ಮುಖ್ಯ
ನೀವು ನಿಮ್ಮ ಮೊಬೈಲ್ ಅನ್ನು ಬಳಸಬೇಕಾದರೆ ಅದು ವೇಗವಾಗಿ ಕೆಲಸ ಮಾಡಲಿಲ್ಲ ಅಂದರೆ ಕಿರಿಕಿರಿ ಅನಿಸುತ್ತದೆ ಅದಕ್ಕಾಗಿ ಸ್ಪೀಡ್ ಆಗಿ ಕೆಲಸ ಮಾಡುವ ಮೊಬೈಲ್ ಗಳನ್ನು ಆಯ್ಕೆ ಮಾಡುವುದು ಉತ್ತಮ. ಹಾಗೆ ಮೊಬೈಲ್ ಗಳ ಸ್ಪೀಡ್ ಪ್ರೊಸೆಸರ್ ಗಳ ಮೇಲೆ ಅವಲಂಬಿತವಾಗಿರುತ್ತದೆ ಅದಕ್ಕಾಗಿ ಮೊಬೈಲ್ ಕೊಳ್ಳುವಾಗ ಈ ಮುಖ್ಯವಾಗಿ ಈ ಪ್ರೊಸೆಸರ್ ಮೇಲೆ ಗಮನ ಇಡಬೇಕಾಗುತ್ತದೆ. ಈಗ ಬನ್ನಿ 2026 ರಲ್ಲಿಯ ಜನಪ್ರಿಯ ಪ್ರೊಸೆಸರ್ ಗಳ ಬಗ್ಗೆ ತಿಳಿದುಕೊಳ್ಳೋಣ
2026 ರಲ್ಲಿ ಜನಪ್ರಿಯ ಪ್ರೊಸೆಸರ್ ಗಳು
1. ಸ್ನ್ಯಾಪ್ ಡ್ರಾಗನ್ (Snapdragon 8) ಸೀರೀಸ್ – ಈ ಒಂದು ಸೀರೀಸ್ ನ ಪ್ರೊಸೆಸರ್ ಹೈ ಪರ್ಫಾರ್ಮೆನ್ಸ್ ಕೊಡುತ್ತದೆ
2. ಮೀಡಿಯಾ ಟೆಕ್ ಡೈಮೆನ್ಸಿಟಿ (MediaTech Dimensity) – ನೀವು ಅತಿಯಾಗಿ ಮೊಬೈಲ್ ಗಳನ್ನು ಬಳಸುತ್ತೀರ ಎಂದರೆ ಬ್ಯಾಟರಿ ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದರೆ ಈ ಒಂದು ಪ್ರೊಸೆಸರ್ ಉತ್ತಮವಾದ ಆಯ್ಕೆ
3. ಆಪಲ್ ಎ ಸರಣಿ (Apple A-Series) – ಸ್ಮೂತ್ iOS ಎಕ್ಸ್ಪೀರಿಯನ್ಸ್
ಫ್ಲ್ಯಾಗ್ ಶಿಪ್ ಫೋನ್ ಗಳಲ್ಲಿ Snapdragon 8 Elite ಅಥವಾ A19 ಚಿಪ್ ಗಳು ಅತ್ಯಂತ ವೇಗವಾಗಿ ಪರ್ಫಾರ್ಮೆನ್ಸ್ ಕೊಡುತ್ತವೆ. ನೀವು ಗೇಮಿಂಗ್ ಗಮನದಲ್ಲಿಟ್ಟು ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಎಂದರೆ ಹೈ ಎಂಡ್ ಪ್ರೊಸೆಸರ್ ಅನ್ನು ಆಯ್ಕೆ ಮಾಡಬೇಕಾಗುತ್ತೇ.

3. RAM & Storage ಎಷ್ಟು ಇರಬೇಕು?
ನೀವು ಹೊಸ ಸ್ಮಾರ್ಟ್ ಫೋನ್ ಅನ್ನು ತಗೊಳೋವಾಗ RAM ಮತ್ತು ಸ್ಟೋರೇಜ್ ಅನ್ನೋದು ಪ್ರಮುಖ ಪಾತ್ರ ವಹಿಸುತ್ತದೆ ಆಗಾಗಿ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
2026 ರಲ್ಲಿ ಕನಿಷ್ಠ ಅಂದರು
6GB RAM – ರೆಗ್ಯುಲರ್ ಆಗಿ ಬಳಕೆ ಮಾಡುವವರಿಗೆ
8GB RAM – ವಿದ್ಯಾರ್ಥಿಗಳು ಮತ್ತು ಮಲ್ಟಿ ಟಾಸ್ಕಿಂಗ್ ಗೆ ಬಳಕೆ ಮಾಡುವವರಿಗೆ
12GB RAM – ನೀವು ಗೇಮಿಂಗ್ ಗೋಸ್ಕರ ಅಥವಾ ಎಡಿಟಿಂಗ್ ಗೋಸ್ಕರ ಮೊಬೈಲ್ ಖರೀದಿ ಮಾಡಬೇಕು ಎಂದರೆ ಕನಿಷ್ಠ ಈ RAM ಆದರೂ ಹೊಂದಿರಬೇಕು.
“ಸ್ಟೋರೇಜ್“
ದಿನನಿತ್ಯ ನೀವು ಸಾಮಾನ್ಯವಾಗಿ ಬಳಸುತ್ತೀರ ಎಂದರೆ 128 GB ಇದ್ದರೆ ಸಾಕು.
ನೀವು ಇನ್ನೂ ಸ್ವಲ್ಪ ಅಧಿಕವಾಗಿ ಬಳಸುತ್ತೀರ ಎಂದರೆ 258 GB ಕೂಡ ಒಳ್ಳೆಯ ಆಯ್ಕೆ
ನೀವು ವಿಡಿಯೋ ಕ್ರಿಯೇಟರ್ ಹಾಗೂ ವಿಡಿಯೋ ಎಡಿಟರ್ ಆಗಿದ್ದರೆ 512 GB ಅವಶ್ಯ ವಾದ ಆಯ್ಕೆ
4. ಕ್ಯಾಮರಾ ಹೇಗೆ ಆಯ್ಕೆ ಮಾಡಬೇಕು
ಇಂದು ಸ್ಮಾರ್ಟ್ ಫೋನ್ ತಗೊಳಬೇಕಾದರೆ ಮೊಬೈಲ್ ಕ್ಯಾಮೆರಾ ತುಂಬಾ ಪ್ರಮುಖವಾದದ್ದು. ಯಾರೆ ಹೊಸ ಸ್ಮಾರ್ಟ್ ಫೋನ್ ತಗೋಬೇಕು ಅನ್ನುವವರು ಮೊದಲು ಕ್ಯಾಮರಾ ಬಗ್ಗೆ ತಿಳಿದುಕೊಳ್ಳುತ್ತಾರೆ ಬನ್ನಿ ಈಗ ನಿಮ್ಮ ಅಗತ್ಯಕ್ಕೆ ಕ್ಯಾಮರಾ ಯಾವ ತರ ಇರಬೇಕು ಎಂದು ತಿಳಿದುಕೊಳ್ಳೋಣ.
ನೀವು ನಾರ್ಮಲ್ ಆಗಿ ಫೋಟೋ ತೆಗೆಯುವುದು ಯಾವಾಗಲಾದರೂ ಫೋಟೋ ತೆಗೆಯುವುದಕ್ಕೆ ಬಳಸುವವರು ನೀವು ಆಗಿದ್ದರೆ 50MP ಕ್ಯಾಮೆರಾ ಇದ್ದರೆ ಸಾಕು.
ನೀವು ಹೆಚ್ಚಾಗಿ ಫೋಟೋಗಳನ್ನು ತೆಗೆಯುತ್ತೀರಿ ಹಾಗೂ ಫೋಟೋಗ್ರಫಿ ಲವರ್ಸ್ ಆಗಿದ್ದರೆ ನಿಮಗೆ ಅಗತ್ಯವಾಗಿ 100MP / 200MP ಕ್ಯಾಮೆರಾದ ಅವಶ್ಯಕತೆ ಇರುತ್ತದೆ ನೀವು ಇದರ ಬಗ್ಗೆ ಗಮನ ಕೊಡಬೇಕಾಗುತ್ತದೆ.
ಹೈ ಎಂಡ್ ಫೋನ್ ಗಳಲ್ಲಿ ನೀವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಇದರಲ್ಲಿ 200MP ಕ್ಯಾಮೆರಾ ಫೋಟೋಗ್ರಫಿ , ಲೋ ಲೈಟ್ ವಿಡಿಯೋ ಶೂಟಿಂಗ್ ಸಪೋರ್ಟ್ ಕೂಡ ಇರುತ್ತದೆ.

5.ಬ್ಯಾಟರಿ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು
ಈಗ ಯಾವುದೇ ಒಂದು ಸ್ಮಾರ್ಟ್ ಫೋನ್ ತಗೋ ಬೇಕಾದರೆ ಅದರ ಬ್ಯಾಟರಿ ಅತ್ಯಂತ ಅವಶ್ಯಕ ಬನ್ನಿ ಈಗ ನಿಮ್ಮ ಬಳಕೆಗೆ ತಕ್ಕಂತೆ ಯಾವ ಬ್ಯಾಟರಿಯನ್ನು ಆಯ್ಕೆ ಮಾಡಬೇಕೆಂದು ತಿಳಿದುಕೊಳ್ಳೋಣ
5000mAh ಇದು ನೀವು ಸಾಮಾನ್ಯವಾಗಿ ಬಳಸುತ್ತೀರಿ ಹೆಚ್ಚಿಗೆ ಮೊಬೈಲ್ ನ ಅವಶ್ಯಕತೆ ಇಲ್ಲ ಎಂದರೆ ಈ ಬ್ಯಾಟರಿ ಸಾಕು
6000mAh ಇದು ನೀವು ತುಂಬಾ ಬಳಸುತ್ತೀರಾ ಅತಿ ಹೆಚ್ಚಿನ ಫೋನ್ ಬಳಕೆ ಇದೆ ದಿನ ನಿತ್ಯ ನಿಮಗೆ ಎಂದರೆ ಈ ಬ್ಯಾಟರಿ ಉತ್ತಮ
7000mAh ನೀವು ಗೇಮಿಂಗ್ ಪ್ರಿಯರಾಗಿದ್ದರೆ ಗೇಮಿಂಗ್ ಗಮನದಲ್ಲಿಟ್ಟು ಫೋನ್ ಖರೀದಿ ಮಾಡುವವರು ನೀವಾಗಿದ್ದರೆ ಈ ಒಂದು ಬ್ಯಾಟರಿ ಬ್ಯಾಕ್ ಅಪ್ ಅವಶ್ಯಕ.
ಕೆಲವು ಹೊಸ ಫೋನ್ ಗಳಲ್ಲಿ 7000mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಕೂಡ ಲಭ್ಯವಿದೆ.
6. ಡಿಸ್ ಪ್ಲೇ (Display) ಗುಣಮಟ್ಟವನ್ನು ಗಮನದಲ್ಲಿಡಬೇಕು
2026 ರಲ್ಲಿ ಹೆಚ್ಚಿನ ಫೋನ್ ಗಳಲ್ಲಿ • AMOLED Display • 120Hz Refresh Rate • 1.5K / 2K Resolution, ಈ ಡಿಸ್ ಪ್ಲೇ ಗಳನ್ನು ನೀವು ಕಾಣಬಹುದು. ಇವುಗಳಿಂದ ವಿಡಿಯೋ ಗೇಮಿಂಗ್ ಮತ್ತು ಸ್ಕ್ರೋಲ್ ಮಾಡಲು ಸ್ಮೂತ್ ಆಗಿರುತ್ತದೆ.
7. 5G & ಫ್ಯೂಚರ್ ರೆಡಿ ತಂತ್ರಜ್ಞಾನ
ಈಗಿನ ಕಾಲದಲ್ಲಿ 5G ತಂತ್ರಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವುದು ಬಹು ಮುಖ್ಯವಾಗಿದೆ. 5G ಇವಾಗ ಎಲ್ಲಾ ಮೊಬೈಲ್ ಅಲ್ಲು ಸಾಮಾನ್ಯವಾಗಿದೆ. AI ಫೀಚರ್ಸ್ ಹೆಚ್ಚಾಗಿದೆ. ಫೋಲ್ಡಬಲ್ ಮೊಬೈಲ್ ಗಳು ಇವಾಗಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹೊಸ ಸ್ಮಾರ್ಟ್ ಫೋನ್ ಗಳು AI ಕ್ಯಾಮೆರಾ ಮತ್ತು ಸ್ಮಾರ್ಟ್ ಫೀಚರ್ಸ್ ಗಳ ಮೇಲೆ ಹೆಚ್ಚು ಗಮನ ಕೊಡುತ್ತವೆ.

8. 2026 ರಲ್ಲಿ ಜನಪ್ರಿಯ ಸ್ಮಾರ್ಟ್ ಫೋನ್ ಗಳು
ಬನ್ನಿ ಈಗ 2026 ರಲ್ಲಿ ಬಿಡುಗಡೆ ಗೊಂಡಿರುವ ಹೆಚ್ಚು ಜನರು ಖರೀದಿ ಮಾಡುತ್ತಿರುವ ಕೆಲವು ಜನಪ್ರಿಯ ಹೊಸ ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿದುಕೊಳ್ಳೋಣ.
• Samsung galaxy S25 ultra – 200MP ಕ್ಯಾಮೆರಾ ಇದು ಫೋಟೋ ಗ್ರಾಫಿ ಲವರ್ಸ್ ಗಳಿಗಾಗಿ ಉತ್ತಮ
• I phone 17 series – ಪವರ್ ಫುಲ್ AI ಚಿಪ್ ಅನ್ನು ಒಳಗೊಂಡಿದೆ.
• onePlus 13 – ಫಾಸ್ಟ್ ಪರ್ಫಾರ್ಮೆನ್ಸ್
• Google pixel Series – ಉತ್ತಮವಾದ AI ಕ್ಯಾಮೆರಾ ಒಳಗೊಂಡಿವೆ
• iQOO 15 – ಗೇಮಿಂಗ್ ಗೆ ಉತ್ತಮವಾದ ಸ್ಮಾರ್ಟ್ ಫೋನ್
ಇ ಫೋನ್ ಗಳಲ್ಲಿ ದೊಡ್ಡ Display, ದೊಡ್ಡದಾದ ಬ್ಯಾಟರಿ, ಮತ್ತು ಹೈ ಎಂಡ್ ಕ್ಯಾಮೆರಾ ಸಪೋರ್ಟ್ ಇದೆ. ಇದು ಹೆಚ್ಚಿನ ಜನರು ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳಾಗಿವೆ
ಯಾವ ಬಳಕೆಗೆ ಯಾವ ಫೋನ್ ತಗೋಬೇಕು ಎಂದು ತಿಳಿಯೋಣ ಬನ್ನಿ
1. ವಿಧ್ಯಾರ್ಥಿಗಳಿಗೆ (Students)
•15k ಯಿಂದ 25K ಈ ಬೆಲೆಯ ಸ್ಮಾರ್ಟ್ ಫೋನ್ ಸಾಕು.
2. ಫೋಟೋಗ್ರಫಿ ಲವರ್ಸ್ ಗೆ
•50MP ಅಥವಾ 108MP ಕ್ಯಾಮೆರಾ ಇರುವ ಮೊಬೈಲ್ ಸೂಕ್ತವಾದ ಆಯ್ಕೆ
3. ಗೇಮಿಂಗ್ ಬಳಕೆದಾರರಿಗೆ
•snapdragon 8 series + 12GB RAM ಈ 2 ಇರುವ ಸ್ಮಾರ್ಟ್ ಫೋನ್ ಗಳ ಮೇಲೆ ನೀವು ಗಮನವಯಿಸಬೇಕು
4. ಆಫೀಸ್ ಗೆ ಬಳಕೆ ಮಾಡುವವರಿಗೆ
•ನೀವು ಆಫೀಸ್ ಗಳಲ್ಲಿ ಮೊಬೈಲ್ ಬಳಸುತ್ತೀರ ಎಂದರೆ ಬ್ಯಾಟರಿ ಮತ್ತು ಸ್ಟೋರೇಜ್ ಗೆ ಪ್ರಾಮುಖ್ಯತೆ ಇರುವ ಸ್ಮಾರ್ಟ್ಪೋನ್ ಅನ್ನು ಖರೀದಿಸಬೇಕಾಗುತ್ತೆ.
ಫೋನ್ ಖರೀದಿಸುವಾಗ ಮಾಡುವ ತಪ್ಪುಗಳು
ಫೋನ್ ಖರೀದಿಸುವಾಗ ಸಾಮಾನ್ಯ ವಾಗಿ ಈ ತಪ್ಪುಗಳನ್ನು ಮಾಡುತ್ತಾರೆ.
• ಕೇವಲ ಬ್ರ್ಯಾಂಡ್ ನೋಡಿ ಫೋನ್ ಖರೀದಿಸುವುದು
• ಕ್ಯಾಮೆರಾ MP ನೋಡಿ ಆಯ್ಕೆ ಮಾಡುವುದು
• ಕಡಿಮೆ RAM ಫೋನ್ ತೆಗೆದುಕೊಳ್ಳುವುದು
ಕೊನೆಯದಾಗಿ ಹೇಳುವುದು ಎಂದರೆ
ಈಗ ನೀವು ಫೋನ್ ಖರೀದಿಮಾಡುವುದು ಸುಲಭವಾಗಿಲ್ಲ ಏಕೆಂದರೆ ಮಾರುಕಟ್ಟೆ ಯಲ್ಲಿ ಸಾವಿರಾರು ಬ್ರ್ಯಾಂಡ್ ನ ಫೋನ್ ಗಳು ಲಭ್ಯವಿದೆ ಆದರೆ ನಿಮ್ಮ ಬಜೆಟ್, ಪ್ರೊಸೆಸರ್, ಬ್ಯಾಟರಿ, ಕ್ಯಾಮೆರಾ, ಮತ್ತು RAM ನೋಡಿ ಖರೀದಿ ಮೇಲೆ ಹೇಳಿರುವ ಎಲ್ಲಾ ವನ್ನು ಗಮನದಲ್ಲಿಟ್ಟು ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಖರೀದಿ ಮಾಡಿ