ನಮಸ್ಕಾರ ಗೆಳೆಯರೇ ಇಂದಿನ ಡಿಜಿಟಲ್ ಯುಗದಲ್ಲಿ ಮಾನವನ ಬುದ್ಧಿ ಶಕ್ತಿ ಗಿಂತ ಈ ಆರ್ಟಿಫಿಷಲ್ ಇಂಟಲಿಜೆನ್ಸ್ AI ಎನ್ನುವುದು ಪ್ರಮುಖ ಪಾತ್ರ ವಹಿಸುತ್ತಿದೆ ನೀವು ಈ ನಡುವೆ ನೋಡಿರಬಹುದು ಪ್ರತಿಯೊಂದು ಕ್ಷೇತ್ರದಲ್ಲೂ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎನ್ನುವುದು ಬಳಕೆಯಲ್ಲಿದೆ ಇದು ಬಂದ ಮೇಲೆ ಮಾನವನ ಕೆಲಸ ಅತಿ ಸುಲಭ ಎನಿಸಿ ಕೊಂಡಿದೆ ಅದಕ್ಕಾಗಿ ಈಗ ಎಲ್ಲ ಕ್ಷೇತ್ರದಲ್ಲೂ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ AI ಎನ್ನುವುದು ತುಂಬಾ ಬಳಕೆ ಯಲ್ಲಿದೆ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎನ್ನುವುದು ಈಗ ಶಿಕ್ಷಣ ಕ್ಷೇತ್ರದಲ್ಲೂ ಬಹುದೊಡ್ಡ ಬದಲಾವಣೆ ತರುತ್ತಿದೆ ಆದ್ದರಿಂದ ಬನ್ನಿ ವಿದ್ಯಾರ್ಥಿ ಗಳಿಗೆ ಹೆಚ್ಚು ಉಪಯುಕ್ತವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ AI ಟೂಲ್ಸ್ (Tools) ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ!
ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ AI ಅನ್ನು ವಿದ್ಯಾರ್ಥಿ ಗಳು ತಮ್ಮ ಹೋಂ ವರ್ಕ್ (Home Work), ನೋಟ್ಸ್ (Notes), ತಯಾರಿಕೆ ಪ್ರಾಜೆಕ್ಟ್ (project), ಪ್ರೆಸೆಂಟೇಷನ್ಸ್ (Presentations), ಕೋಡಿಂಗ್ (Coding), ಎಕ್ಸಾಮ್ ಪ್ರಿಪರೇಷನ್ (Exam Prepartion), ಈ ಎಲ್ಲಾ ಕೆಲಸ ಗಳಿಗೂ ಉಪಯುಕ್ತವಾಗಿ ಬಳಸಿ ಕೊಳ್ಳಬಹುದು ಬನ್ನಿ ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (Artificial inteligence) ಎಂದರೆ ಏನೆಂದು ತಿಳಿದು ಕೊಳ್ಳೋಣ
ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI Tools) ಎಂದರೇನು
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್ಸ್ (AI Tools) ಎಂದರೆ ಮನುಷ್ಯನಂತೆ ಯೋಚಿಸಿ ಕಲಿತು ಕೆಲಸ ಮಾಡಲು ಸಹಾಯ ಮಾಡುವ ಸಾಫ್ಟ್ ವೇರ್ (Soft wear) ಅಥವಾ ವೆಬ್ ಅಪ್ಲಿಕೇಶನ್ ಗಳು. ವಿದ್ಯಾರ್ಥಿ ಗಳು ಇದನ್ನು ಬಳಸಿ ಸಮಯ ಉಳಿಸಿಕೊಂಡು ಉತ್ತಮವಾಗಿ ಕಲಿಯಬಹುದು. ಬನ್ನಿ ಈಗ ಉತ್ತಮವಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಟೂಲ್ಸ್ (AI Tools) ಗಳ ಬಗ್ಗೆ ತಿಳಿದುಕೊಳ್ಳೋಣ!
1.ಚಾಟ್ ಜಿ ಪಿ ಟಿ (Chat gpt)
ಈ ಒಂದು AI ಟೂಲ್ ಈ ನಡುವೆ ಅತ್ಯಂತ ಬಳಕೆಯಲ್ಲಿರುವ ಒಂದು ಉತ್ತಮವಾದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ನಿಮ್ಮ ಪ್ರಶ್ನೆ ಗಳಿಗೆ ಉತ್ತರಿಸುವ ಒಂದು ಉತ್ತಮ ವಾದ ಟೂಲ್ ಚಾಟ್ ಜಿಪಿಟಿ (Chat gpt) ವಿದ್ಯಾರ್ಥಿ ಗಳಿಗಾಗಿ ಅತ್ಯಂತ ಜನಪ್ರಿಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್ (AI Tool) ನಿಮ್ಮ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಪಡೆಯುವುದಕ್ಕೆ ಇದು ಅತ್ಯುತ್ತಮವಾದ AI tool ಇದರ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಯಾವುದೇ ವಿಷಯ ಗಳ ಬಗ್ಗೆ ಇದು ವಿವರವಾಗಿ ಉತ್ತರಿಸುತ್ತದೆ ಹಾಗೂ ನೋಟ್ಸ್ (Notes) ಬರೆಯುವುದಕ್ಕೆ ಅಸೈನ್ ಮೆಂಟ್ ಮತ್ತು ಪ್ರಾಜೆಕ್ಟ್ ಗಳ (Assignment &Project ideas) ಬಗ್ಗೆ ಐಡಿಯಾ ಗಳನ್ನು ಕೊಡುತ್ತದೆ. ಕೋಡಿಂಗ್ (Coding help) ಗೆ ಸಹಾಯಕವಾಗಿದೆ. ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದಿಸಿ ಕೊಡುತ್ತದೆ. ಹೀಗೆ ಹಲವಾರು ಸಹಾಯವನ್ನು ಈ ಚಾಟ್ ಜಿ ಪಿ ಟಿ ಇಂದ ಪಡೆಯಬಹುದು!
ಶಾಲೆ ಹಾಗೂ ಕಾಲೇಜ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ಆಯ್ಕೆ ಅಂತಾನೆ ಹೇಳಬಹುದು!

2. ಗ್ರಾಮೆರ್ಲಿ (Grammerly)
ನೀವು ಇಂಗ್ಲೀಷ್ ಬರೆಯುವುದರಲ್ಲಿ ತಪ್ಪು ಗಳು ಆಗುತ್ತಿದ್ದರೆ ಅದನ್ನು ಸರಿಪಡಿಸುವುದಕ್ಕೆ ಈ ಒಂದು ಗ್ರಾಮಿರ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ನಿಮಗೆ ಒಂದು ಉತ್ತಮ ಆಯ್ಕೆಯಾಗಿದೆ ಇದರ ಉಪಯೋಗ ಗಳನ್ನು ತಿಳಿದು ಕೊಳ್ಳೋಣ ಬನ್ನಿ ವ್ಯಾಕರಣ ಮತ್ತು ಸ್ಪೆಲ್ಲಿಂಗ್ (Grammer & Spelling) ಮಿಸ್ಟೇಕ್ annu ಸರಿಪಡಿಸುವುದಕ್ಕೆ ಸಹಾಯಕ ವಾಗಿದೆ. ನಿಮ್ಮ ವಾಕ್ಯ ಸುಧಾರಣೆಗು (sentence improvement) ಇದು ಉಪಯುಕ್ತ ವಾಗಿದೆ. ಪ್ರಬಂಧಗಳು (Essey), ಇ ಮೇಲ್ (E Mail), ಅಸೈನ್ ಮೆಂಟ್ (Assignment), ಬರೆಯುವುದಕ್ಕೆ ಒಂದು ಉತ್ತಮ ಮತ್ತು ಸಹಾಯಕವಾಗಿರುವ ಒಂದು ಆರ್ಟಿಫಿಶಿಯಲ್ ಇಂಟಲಿಜೆಂಟ್ ಟೂಲ್ (AI Tool).
ಪ್ರಬಂಧ ಗಳು ಹಾಗೂ ಇ ಮೇಲ್ ಮತ್ತು ಅಸೈನ್ ಮೆಂಟ್ ಗಳನ್ನು ಬರೆಯಲು ಒಂದು ಉತ್ತಮವಾದ ಆಯ್ಕೆ!

3. ಗೂಗಲ್ ಜಮಿನಿ (Google Gemini)
ಇದು ಗೂಗಲ್ ಕಂಪನಿಯ ಆರ್ಟಿಫಿಶಿಯಲ್ ಟೂಲ್ (AI Tool) ಆಗಿರುವ ಈ ಜೆಮಿನಿ AI ಟೂಲ್ ರಿಸರ್ಚ್ ಹಾಗೂ ಅಧ್ಯಯನ ಮಾಡುವುದಕ್ಕೆ ವಿದ್ಯಾರ್ಥಿ ಗಳಿಗೆ ಒಂದು ಅತ್ಯುತ್ತಮವಾದ AI ಟೂಲ್. ಬನ್ನಿ ಇದರ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ. ಸಂಶೋಧನೆ ಮಾಡುವುದಕ್ಕೆ (Research) ಇದು ಸಹಾಯಕವಾಗಿದೆ . ಸಂಕೀರ್ಣ ವಿಷಯಗಳ ಬಗ್ಗೆ ಇದು ಸಂಕ್ಷಿಪ್ತವಾಗಿ ವಿವರಣೆ (Complex Topic Explanation) ನೀಡಲು ಇದು ಸಹಾಯಕವಾಗಿದೆ. ಪ್ರಚಲಿತ ವಿದ್ಯಮಾನ ಗಳ (Current affairs) ಬಗ್ಗೆ ಅದರ ಕಾರಣಗಳ ಬಗ್ಗೆ ಇದು ಸಂಕ್ಷಿಪ್ತವಾಗಿ ತಿಳಿಸಿ ಕೊಡುತ್ತದೆ.
ಸಂಶೋಧನೆಯ ವಿದ್ಯಾರ್ಥಿ ಗಳಿಗೆ ಒಂದು ಉತ್ತಮವಾದ ಆಯ್ಕೆ!

4.Canva AI
ಈ ಒಂದು ಆರ್ಟಿಫಿಷಿಯಲಿ ಇಂಟಲಿಜೆನ್ಸ್ ಟೂಲ್ ಒಂದು ಪೋಸ್ಟರ್ ವಿನ್ಯಾಸ ಮಾಡಲು ಪ್ರಾಜೆಕ್ಟ್ (Project) ಮತ್ತು ಸೆಮಿನಾರ್ ಸ್ಲೈಡ್ ತಯಾರಿಸಲು ನೀವು ಕ್ಯಾನ್ವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಮೂಲಕ ರೆಡಿ ಇರುವ ಟೆಂಪ್ಲೆಟ್ ಗಳು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಇದು ರೆಡಿಮೇಡ್ ಬ್ಯಾನರ್ ಗಳನ್ನು ತಯಾರು ಮಾಡಲು ಇದು ಒಂದು ಸೂಪರ್ ಆಗಿರೋ ಟೂಲ್ ಬನ್ನಿ ಇದರ ಉಪಯೋಗ ಗಳನ್ನು ತಿಳಿದುಕೊಳ್ಳೋಣ ಸ್ವಂತವಾಗಿ ವಿನ್ಯಾಸ ಮಾಡಲು ಸಲಹೆಗಳನ್ನು ಕೊಡುತ್ತದೆ (auto design suggestions), ಪೋಸ್ಟರ್ಸ್ ಇನ್ಫೋಗ್ರಾಫಿಕ್ಸ್ ಹಾಗೂ resume ಮತ್ತು ಸರ್ಟಿಫಿಕೇಟ್ (Cirtficate) ವಿನ್ಯಾಸ ಮಾಡಲು ಒಂದು ಅತ್ಯುತ್ತಮ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI Tool) ಟೂಲ್.
ಕಾಲೇಜಿನ ಪ್ರಾಜೆಕ್ಟ್ ಗಳಿಗೆ ಉತ್ತಮವಾದ ಆಯ್ಕೆ!

5. ನೇಷನ್ ಎಐ (Nation AI)
ನೇಷನ್ ಎಐ (Nation A I) ಅಪ್ಲಿಕೇಶನ್ ಅನ್ನು ಬಳಸಿ ನಿಮ್ಮ ರೀಡಿಂಗ್ ಫಾರ್ ಮ್ಯಾಟ್ ಅನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಕೊಳ್ಳಬಹುದು. ಬನ್ನಿ ಇದರ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ. ನೋಟ್ಸ್ (Notes) ಗಳನ್ನು ಕೌಶಲ್ಯದ ರೀತಿ ಯಲ್ಲಿ ಮಾಡಬಹುದು, ಅಧ್ಯಯನ ವೇಳಾಪಟ್ಟಿಯನ್ನು (Study Timetable) ತಯಾರು ಮಾಡಬಹುದು, ಪರೀಕ್ಷಾ ಯೋಜನೆಗಳು (Exam Planning) ನೀವು ಬುದ್ಧಿವಂತಿಕೆ ಯಿಂದ ಮಾಡಬಹುದು, ಈ ರೀತಿ ನಿಮ್ಮ ದಿನ ನಿತ್ಯದ ಓದಿನ ನಿರ್ವಹಣೆ ಯನ್ನು ಬುದ್ಧಿವಂತಿಕೆಯಿಂದ ಹಂತ ಹಂತವಾಗಿ ಪ್ಲಾನ್ ಮಾಡಬಹುದು.
ದಿನನಿತ್ಯದ ಓದಿನ ನಿರ್ವಹಣೆಗೆ ಒಂದು ಉತ್ತಮದ ಆಯ್ಕೆ!
6. QuillBot (ಕ್ವಿಲ್ ಬಾಟ್)
ಈ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI Tool) ಇಂದ ನಿಮ್ಮ ದಿನನಿತ್ಯದ ನೋಟ್ಸ್ ಗಳನ್ನು ಹಾಗೂ ಲೇಖನಿ ಗಳನ್ನು (Article) ಗಳನ್ನು ಮತ್ತು ಅಸೈನ್ ಮೆಂಟ್ (Assignment) ಗಳನ್ನು ಸುಲಭವಾಗಿ ಪುನಃ ಬರೆಯಲು (Rewrite) ಈ ಒಂದು AI ಟೂಲ್ ವಿಧ್ಯಾರ್ಥಿಗಳಿಗೆ ಒಂದು ಉತ್ತಮವಾದ ಆಯ್ಕೆಯಾಗಿದೆ ಬನ್ನಿ ಇದರ ಇನ್ನು ಅನೇಕ ಉಪಯೋಗ ಗಳ ಬಗ್ಗೆ ತಿಳಿಯೋಣ. ಸಾರಾಂಶ (Summary) ಗಳನ್ನು ಬರೆಯಲು ನಂತರ ಬರೆದಿರುವ ಅಸೈನ್ಮೆಂಟ್ (Assignment), ಸಾರಾಂಶ (Summary) ಗಳಲ್ಲಿ ಅಕ್ಷರಗಳಲ್ಲಿ ತಪ್ಪುಗಳಿದ್ದರೆ ಸರಿ ಪಡಿಸುವುದಕ್ಕೆ ಈ ರೀತಿ ಎಲ್ಲಾ ವಿಭಾಗದಲ್ಲೂ ನಿಮಗೆ ಇದು ಸಹಾಯಕ ವಾಗಿದೆ.
ಅಸೈನ್ ಮೆಂಟ್ ಗಳನ್ನು ಬರೆಯುವುದಕ್ಕೆ ಒಂದು ಉತ್ತಮ ವಾದ ಆಯ್ಕೆ!
7.ವೋಲ್ಡ್ರಾಮ್ ಆಲ್ಫಾ (Wolfram Alpha)
ಈ ಒಂದು ಆರ್ಟಿಫಿಷಿಯಲಿ ಇಂಟಲಿಜೆನ್ಸ್ ಟೂಲ್ (AI Tool) ವಿದ್ಯಾರ್ಥಿ ಗಳಿಗೆ ಅಂತು ಒಂದು ಅತ್ಯುತ್ತಮವಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೂಲ್ ಅಂತಾನೆ ಹೇಳಬಹುದು ಯಾಕೆಂದರೆ ವಿದ್ಯಾರ್ಥಿ ಗಳಿಗೆ ಬಹು ಕಠಿಣವಾದಂತ ಗಣಿತ (Maths) ಹಾಗೂ ವಿಜ್ಞಾನ (Science) ಈ ವಿಷಯ ಗಳ ಪ್ರಾಬ್ಲಮ್ ಗಳಿಗೆ ಸೊಲ್ಯೂಷನ್ ಹುಡುಕಿ ಕೊಡುವ ಒಂದು ಉತ್ತಮವಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್ (AI Tool) ಇದರ ಇನ್ನೂ ಅನೇಕ ಉಪಯೋಗ ಗಳನ್ನು ತಿಳಿದುಕೊಳ್ಳೋಣ ಬನ್ನಿ. ಗಣಿತ ಹಾಗೂ ವಿಜ್ಞಾನ ಗಳ ವಿಷಯದಲ್ಲಿ ಇರುವ ಪ್ರಾಬ್ಲಮ್ ಗಳಿಗೆ ಹಂತ ಹಂತವಾಗಿ ನಿಮಗೆ ಪರಿಹಾರ ಗಳನ್ನು ಕೊಡುತ್ತದೆ (Step by step solution), ಸೂತ್ರಗಳ ವಿವರಣೆಗಾಗಿ (formula explanation) ಗಳಿಗೆ, ಗ್ರಾಫ್ ಮತ್ತು ಲೆಕ್ಕಾಚಾರ ಗಳನ್ನು (Graph & calculation) ಮಾಡುವುದಕ್ಕೆ ಇದು ಒಂದು ಉತ್ತಮವಾದ ಎಐ ಟೂಲ್ (AI Tool) ಅಂತಾನೆ ಹೇಳಬಹುದು.
ಗಣಿತ ಮತ್ತು ವಿಜ್ಞಾನ ಹಾಗೂ ಕೆಮಿಸ್ಟ್ರಿ (Chemistry) ವಿದ್ಯಾರ್ಥಿ ಗಳಿಗೆ ಒಂದು ಅತ್ಯುತ್ತಮವಾದ ಆಯ್ಕೆ!
ವಿದ್ಯಾರ್ಥಿ ಗಳಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI Tool) ಗಳನ್ನು ಬಳಸುವುದರಿಂದ ಆಗುವ ಲಾಭಗಳು!
ನಿಮ್ಮ ಸಮಯ ಉಳಿಸುತ್ತದೆ, ನಿಮ್ಮ ಎಜುಕೇಷನ್ ನ ಗುಣಮಟ್ಟವನ್ನು ಹೆಚ್ಚಿಸುತ್ತದೆ, ಓದುವುದರಲ್ಲಿ ನಿಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್ಸ್ (AI tools) ಗಳನ್ನು ನಿಮ್ಮ ಓದಿನ ಸಹಾಯಕ್ಕೆ ನಿರ್ವಹಣೆಗೆ ಮಾತ್ರ ಬಳಸಿ ಇದನ್ನೇ ಪೂರ್ತಿ ಆಗಿ ಕಾಪಿ ಮಾಡಬೇಡಿ ಇದರ ಮೂಲಕ ಸಹಾಯ ಪಡೆದು ನಿಮ್ಮ ಓದಿನ ಗುಣಮಟ್ಟವನ್ನು ಇನ್ನೂ ಉತ್ತಮಗೊಳಿಸಲು ಮಾತ್ರ ಇದನ್ನು ಉಪಯೋಗಿಸಿ.
ಕೊನೆಯದಾಗಿ ಹೇಳಬೇಕೆಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI tools) ಗಳು ವಿಧ್ಯಾರ್ಥಿ ಗಳ ಭವಿಷ್ಯಕ್ಕೆ ದೊಡ್ಡ ಸಹಾಯಕ ವಾಗಿದೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ನಿಮ್ಮ ಎಜುಕೇಷನ್ ಅಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಬಹುದು!