ಇಂದಿನ ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಷನ್ಸ್ ಮಾಡುವ ಕ್ಷೇತ್ರ ತುಂಬಾ ವೇಗವಾಗಿ ಬೆಳೆಯುತ್ತಿದೆ .Blog (ಲೇಖನಿ ಬರೆಯುವುದು), ಯೂಟ್ಯೂಬ್ (YouTube), ಇನ್ಸ್ಟಾಗ್ರಾಮ್ (Instagram), Website ಎಲ್ಲೆಡೆ ಕ್ವಾಲಿಟಿ ಕಂಟೆಂಟ್ ಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಪ್ರತಿದಿನ ಹೊಸ ಕಂಟೆಂಟ್ ಬರೆಯುವುದು ಎಲ್ಲರಿಗೂ ಸುಲಭದ ಕೆಲಸವಲ್ಲ .ಆದರೆ ಇದೇ ಸಂದರ್ಭದಲ್ಲಿ AI (Artificial inteligence) ಈ ಕೆಲಸವನ್ನು ಸುಲಭಗೊಳಿಸಿದೆ. ಕಂಟೆಂಟ್ ಬರೆಯುವವರಿಗೆ AI ಅನ್ನುವುದು ದೊಡ್ಡ ಸಹಾಯಕವಾಗಿ ಬಳಕೆಯಾಗುತ್ತಿದೆ.
AI ಟೂಲ್ಸ್ ಬಳಸಿಕೊಂಡು ಕಂಟೆಂಟ್ ಕ್ರಿಯೇಟ್ ಮಾಡುವುದರಿಂದ ಸಮಯ ಉಳಿಯುತ್ತದೆ, ಹಾಗೂ ನಿಮಗೆ ಯಾವುದೆ ಅನುಮಾನ ಇದ್ದರು ಇದರ ಸಹಾಯವನ್ನು ಪಡೆಯಬಹುದು ಮತ್ತು ಪರಿಣಾಮಕಾರಿಯಾಗಿ ಹಾಗೂ ಹೊಸ ಐಡಿಯಾ ಗಳೊಂದಿಗೆ ಪ್ರೊಫೆಷನಲ್ (Professional) ರೀತಿಯಲ್ಲಿ ಬರೆಯಲು ಸಹಾಯವಾಗುತ್ತದೆ. ಈ ಲೇಖನದಲ್ಲಿ (Blog) ಅಲ್ಲಿ AI ಟೂಲ್ಸ್ ಬಳಸಿಕೊಂಡು ಕಂಟೆಂಟ್ ಹೇಗೆ ಕ್ರಿಯೇಟ್ ಮಾಡಬೇಕು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ ಬನ್ನಿ!
AI (Artificial inteligence) ಟೂಲ್ಸ್ ಎಂದರೇನು?
AI (Artificial Intelligence) ಅಂದರೆ ಮಾನವ ಬುದ್ಧಿಯನ್ನು ಅನುಕರಿಸುವ ತಂತ್ರಜ್ಞಾನ. AI ಟೂಲ್ಸ್ ಗಳು ನಮಗೆ ಕಂಟೆಂಟ್ ಬರೆಯುವುದಕ್ಕೆ, ಎಡಿಟ್ ಮಾಡುವುದಕ್ಕೆ , ಐಡಿಯಾ ಗಳನ್ನು ಕೊಡುವುದಕ್ಕೆ, images ಕ್ರಿಯೇಟ್ ಮಾಡುವುದಕ್ಕೆ ಈ ತರಹದ ಮುಂತಾದ ಕೆಲಸಗಳನ್ನು ಸುಲಭವಾಗಿ ಮಾಡಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಬನ್ನಿ ಈಗ ಈ artificial intelligence ಅನ್ನು ಬಳಸಿಕೊಂಡು ಯಾವ ಯಾವ ಕೆಲಸಗಳನ್ನು ಸುಲಭವಾಗಿ ಮಾಡಬಹುದು ಎಂದು ತಿಳಿದುಕೊಳ್ಳೋಣ
ಲೇಖನಿ (Blog Post) ಗಳನ್ನು ಬರೆಯುವುದಕ್ಕೆ ನೀವು ಇದರ ಸಹಾಯವನ್ನು ಪಡೆದು ಸುಲಭವಾಗಿ ಉತ್ತಮವಾದ ಬ್ಲಾಗ್ ಗಳನ್ನು ರಚಿಸಬಹುದು, ಯೂಟ್ಯೂಬ್ (YouTube) ಸ್ಕ್ರಿಪ್ಟ್ ಬರೆಯೋಕೆ. ನೀವು ಯೂಟ್ಯೂಬ್ ಅಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವವರು ಆಗಿದ್ದರೆ ನಿಮ್ಮ ವಿಡಿಯೋಗಳಿಗೆ ಸ್ಕ್ರಿಪ್ಟ್ ಗಳನ್ನು ಬರೆಯಲು ಇದು ಸಹಾಯ ಮಾಡುತ್ತದೆ, ಇದರ ಮೂಲಕ ಚಿತ್ರಗಳು ಮತ್ತು thumbnail ಗಳನ್ನು ಇದರ ಮೂಲಕ ಸುಲಭವಾಗಿ ರಚಿಸಬಹುದು, ಮತ್ತು ನಿಮ್ಮ ಬ್ಲಾಗ್ ಗಳಿಗೆ SEO structure ಕಂಟೆಂಟ್ ಬರೆಯಲು ಇದು ಸಹಾಯಕವಾಗಿದೆ.
ಇವೆಲ್ಲವನ್ನೂ AI (Artificial inteligence) ಸಹಾಯವನ್ನು ಪಡೆದು ಉತ್ತಮವಾಗಿ ಬರೆಯಬಹುದು.

AI ಟೂಲ್ಸ್ ಬಳಸುವುದರಿಂದ ಇರುವ ಲಾಭಗಳು
Artificial intelligence ಇದನ್ನು ಬಳಸುವುದರಿಂದ ಇನ್ನೂ ಹಲವಾರು ಪ್ರಯೋಜನ ಗಳು ಇದೆ ಅವುಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ
1. ಸಮಯದ ಉಳಿತಾಯ
ಒಂದು ಬ್ಲಾಗ್ Post ಅನ್ನು ಬರೆಯಲು ಸಾಮಾನ್ಯವಾಗಿ 2 ರಿಂದ 3 ಗಂಟೆ ಸಮಯ ಬೇಕಾಗುತ್ತದೆ. ಆದರೆ AI ಟೂಲ್ಸ್ ಸಹಾಯವನ್ನು ಬಳಸಿಕೊಂಡು 20–30 ನಿಮಿಷದಲ್ಲಿ ಒಂದು ಡ್ರಾಫ್ಟ್ ಕಂಟೆಂಟ್ ರೆಡಿ ಮಾಡಿ ಕೊಡುತ್ತದೆ ನೀವು ಅದನ್ನು ಬಳಸಿ ನಿಮ್ಮ ಬ್ಲಾಗ್ ಅನ್ನು ಪರಿಣಾಮಕಾರಿ ಆಗಿ ಬರೆದು ನಿಮ್ಮ ಸಮಯವನ್ನು ಉಳಿತಾಯ ಮಾಡಬಹುದು.
2.ಹೊಸ ಐಡಿಯಾಗಳು ಸಿಗುತ್ತವೆ
ನೀವು ಕಂಟೆಂಟ್ ಗಳನ್ನು ಬರೆಯಲು ಶುರು ಮಾಡಿದಾಗ ನಿಮಗೆ ಯಾವ ವಿಷಯದ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡಬೇಕು ಅಂತ ಗೊತ್ತಾಗದೆ ಇದ್ದಾಗ ಈ ಒಂದು AI ಅನ್ನುವ ತಂತ್ರಜ್ಞಾನ ನಿಮಗೆ ಉತ್ತಮವಾದ ಐಡಿಯಾ ಗಳನ್ನು ನೀಡಿ ನೀವು ಕಂಟೆಂಟ್ ಬರೆಯಲು ಸಹಾಯವಾಗಿ ನಿಲ್ಲುತ್ತದೆ.

3. Begginer ಗಳಿಗೆ ಹೆಚ್ಚು ಉಪಯುಕ್ತ
ಹೊಸದಾಗಿ ಬ್ಲಾಗಿಂಗ್ ಶುರು ಮಾಡುವವರಿಗೆ ಇದು ತುಂಬ ಉಪಯುಕ್ತವಾದ ಸಾಧನವಾಗಿ ನಿಲ್ಲುತ್ತದೆ. ಇದರಿಂದ ಸಹಾಯ ಪಡೆದು ಬ್ಲಾಗ್ ಪೋಸ್ಟ್ ಗಳನ್ನು ಬರೆದು ಹಣವನ್ನು ಕೂಡ ಗಳಿಸಬಹುದು.
ಯಾವ ಯಾವ AI ಟೂಲ್ ಅನ್ನು ಯಾವ ವಿಷಯಕ್ಕೆ ಬಳಸಬಹುದು
ಈಗ 2026 ರಲ್ಲಿ ಯಾವ ಒಂದು AI ಟೂಲ್ ಯಾವ ಕೆಲಸಕ್ಕೆ ಉಪಯೋಗವಾಗುತ್ತದೆ. ಹಾಗೂ ಹಲವಾರು ಜನರು ಬಳಸುತ್ತಿರುವ ಜನಪ್ರಿಯ AI ಟೂಲ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
1. ಚಾಟ್ GPT- ಈ ಒಂದು AI ಟೂಲ್ ನಿಮಗೆ ಕಂಟೆಂಟ್ ಬರೆಯಲು ಮತ್ತು ಯಾವ ವಿಷಯದ ಬಗ್ಗೆ ನೀವು ಕಂಟೆಂಟ್ ಬರೆಯಬೇಕು ಎನ್ನುವುದನ್ನು ಇದರ ಸಹಾಯದ ಮೂಲಕ ಉತ್ತಮವಾಗಿ ಬರೆಯಬಹುದು.
2. ಜೆಮಿನಿ (Gemini) – ಈ ಒಂದು ತಂತ್ರಜ್ಞಾನ ಬಳಸಿಕೊಂಡು ಯಾವುದೆ ಒಂದು ವಿಷಯದ ಬಗ್ಗೆ ನಿಮಗೆ ಮಾಹಿತಿ ಬೇಕು ಎಂದರೆ ಇದರ ಮೂಲಕ ರಿಸರ್ಚ್ ಮಾಡಿ ತಿಳಿದುಕೊಳ್ಳಬಹುದು.
3. ಕ್ಯಾನ್ವಾ (Canva AI) – ಈ ಒಂದು AI ಟೂಲ್ ಇಂದ ನೀವು ನಿಮ್ಮ ವೆಬ್ ಸೈಟ್ ಗಳಿಗೆ ಟೆಂಪ್ಲೆಟ್ ಗಳನ್ನು ರಚಿಸಿಕೊಳ್ಳಬಹುದು ಹಾಗೂ ಇಮೇಜ್ ಗಳನ್ನು ರಚಿಸಬಹುದು.
4. ಗ್ರಾಮ್ಮರ್ಲಿ (Grammerly) – ಈ ಒಂದು ತಂತ್ರಜ್ಞಾನ ದಿಂದ ನೀವು ಬರೆದಿರುವ ಕಂಟೆಂಟ್ ಗಳಲ್ಲಿನ ಪದಗಳಲ್ಲಿನ ಗ್ರಾಮರ್ ಅನ್ನು ಸರಿಪಡಿಸಿ ನಿಮಗೆ ಕೊಡುತ್ತದೆ
ನೀವು ಬ್ಲಾಗಿಂಗ್ ಬರೆಯುವವರು ಹಾಗಿದ್ದರೆ ಈ ಒಂದು ಚಾಟ್ GPT ಅನ್ನುವ ಒಂದು ತಂತ್ರಜ್ಞಾನ ಇದ್ದರೆ ಸಾಕು ಬೇರೆ AI ಟೂಲ್ ಗಳ ಅವಶ್ಯಕತೆ ಇರುವುದಿಲ್ಲ.

ಈಗ AI ಟೂಲ್ ಬಳಸಿ ಕಂಟೆಂಟ್ ಕ್ರಿಯೇಟ್ ಮಾಡುವುದು ಹೇಗೆ ಎಂದು ಹಂತ ಹಂತವಾಗಿ ತಿಳಿಯೋಣ ಬನ್ನಿ
ಸ್ಟೆಪ್ (step) 1 – ಮೊದಲು ನೀವು ಯಾವ ವಿಷಯದ ಬಗ್ಗೆ ಕಂಟೆಂಟ್ ಬರೆಯಬೇಕೆಂದು ಎಂದು ನಿರ್ಧರಿಸಬೇಕು. ಉದಾಹರಣೆಗೆ , ಮೊಬೈಲ್ ಗಳ ರಿವ್ಯೂ ಬಗ್ಗೆ, ವಾಟ್ಸ್ ಅಪ್ ಅಲ್ಲಿರುವ ಕೆಲವು ಟ್ರಿಕ್ಸ್ ಗಳ ಬಗ್ಗೆ , ಟೆಕ್ ನ್ಯೂಸ್, AI ಟೂಲ್ಸ್ ಯಾವ ತರ ಬಳಸಬೇಕು, ಹೀಗೆ ನೀವು ಆಯ್ಕೆ ಮಾಡಿರುವ ವಿಷಯದ ಬಗ್ಗೆ ಚಾಟ್ GPT ಗೆ ಕೇಳಿದರೆ ಸಾಕು ನಿಮಗೆ ಹಲವಾರು ಐಡಿಯಾಸ್ ಗಳನ್ನು ಕೊಡುತ್ತದೆ. ಉದಾಹರಣೆಗೆ, ”ಕನ್ನಡ ಟೆಕ್ ಬ್ಲಾಗ್ ಬರೆಯಲು ಒಳ್ಳೆ ಟಾಪಿಕ್ಸ್ ಅನ್ನು ಹೇಳು” ಈ ರೀತಿ
ಹಂತ (Step) 2 – ಅದು ಕೊಡುವ ಐಡಿಯಾಗಳನ್ನು ಬಳಸಿಕೊಂಡು ನೀವು ಬ್ಲಾಗ್ ಪೋಸ್ಟ್ ಬರೆದು ಮುಗಿಸಿದ ಮೇಲೆ ಅದಕ್ಕೆ ಒಂದು ಒಳ್ಳೆ ಟೈಟಲ್ ಅನ್ನು ನೀವು ಹುಡುಕಬೇಕಾಗುತ್ತೆ. ಒಳ್ಳೆಯ ಆಕರ್ಷಕ ಟೈಟಲ್ ಇದ್ದರೆ ಓದುಗರನ್ನು ಬೇಗ ನಿಮ್ಮ ಬ್ಲಾಗ್ ಗಳಿಗೆ ಸೆಳೆಯಬಹುದು. ಅದಕ್ಕಾಗಿ ನೀವು ಚಾಟ್ GPT ಇಂದ ಸಹಾಯ ಪಡೆಯಬಹುದು. ನೀವು ಈ ರೀತಿ ಕೇಳಬಹುದು ಉದಾಹರಣೆಗೆ “ಮೊಬೈಲ್ ಸ್ಟೋರೇಜ್ ಫುಲ್ ಸಮಸ್ಯೆ ಯನ್ನು ಬಗೆಹರಿಸುವ ವಿಧಾನ” ಈ ಒಂದು ಕನ್ನಡ ಬ್ಲಾಗ್ ಗೆ ಒಂದು ಒಳ್ಳೆಯ ಟೈಟಲ್ ಹೇಳು ಹೀಗೆ ಹೇಳಿದರೆ ಆಕರ್ಷಕ ಟೈಟಲ್ ಗಳನ್ನ ಈ ಒಂದು AI ಟೂಲ್ ಒದಗಿಸುತ್ತದೆ ನೀವು ಅದರಲ್ಲಿ ನಿಮಗೆ ಇಷ್ಟವಾಗುವ ಟೈಟಲ್ ಅನ್ನು ನಿಮ್ಮ ಬ್ಲಾಗ್ ಗಳಿಗೆ ಬಳಸಬಹುದು.
ಹಂತ (Step) 3 – ನಿಮಗೆ google adsense ಗೆ SEO structure ಇರುವ ಕಂಟೆಂಟ್ ಬೇಕು ಎಂದರೆ ನೀವು ಹೋಗಿ ಹೀಗೆ ಕೇಳಬೇಕು
“ಬ್ಯಾಟರಿ ಯನ್ನು ಉಳಿಸಲು ಇರುವ ಟ್ರಿಕ್ಸ್ ಗಳು” ಇದರ ಬಗ್ಗೆ 1000 ಪದಗಳಲ್ಲಿ ಒಂದು ಬ್ಲಾಗ್ ರೆಡಿ ಮಾಡಿ ಕೊಡು ವಿತ್ SEO structure ಆಗ ಈ AI ಟೂಲ್ ಸಂಪೂರ್ಣ ಆರ್ಟಿಕಲ್ ಅನ್ನು ನಿಮಗೆ ತಯಾರು ಮಾಡಿ ಕೊಡುತ್ತದೆ.
ಹಂತ (Step) 4 – AI ಬರೆದಿರುವ ಹಾಗೆಯೇ ಸಂಪೂರ್ಣ ಕಾಪಿ ಪೇಸ್ಟ್ ಮಾಡಬೇಡಿ ಸ್ವಲ್ಪ ನಿಮ್ಮ ಸ್ಟೈಲ್ ನಲ್ಲಿ ಅದನ್ನು ಎಡಿಟ್ ಮಾಡಿ ಸರಳವಾದ ಕನ್ನಡ ವನ್ನು ಸೇರಿಸಿ ಅದರಿಂದ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ.

AI ಕಂಟೆಂಟ್ ಅನ್ನು ಕಾಪಿ ಪೇಸ್ಟ್ ಮಾಡುವದು ತೊಂದರೆನ
ಇದು ತುಂಬ ಜನರಿಗೆ ಈ ಅನುಮಾನ ಇರುತ್ತದೆ ನಾವು AI ಬರೆದು ಕೊಟ್ಟಿರುವ ಕಂಟೆಂಟ್ ಅನ್ನು ನೇರವಾಗಿ ಕಾಪಿ ಪೇಸ್ಟ್ ಮಾಡುವುದರಿಂದ ತೊಂದರೆ ಆಗುತ್ತದೆಯೇ ಗೂಗಲ್ Adsense ಅಪ್ರೂವಲ್ ಗೆ ಎಂದು ಆದರೆ ನೀವು ಅದನ್ನು ಸ್ವಲ್ಪ ಕೂಡ ಎಡಿಟ್ ಮಾಡದೆ ಅದರಲ್ಲಿ ಇರುವ ಹಾಗೆಯೇ ಕಾಪಿ ಪೇಸ್ಟ್ ಮಾಡುವುದರಿಂದ ಅದು ಮನುಷ್ಯ ಬರೆದಿರುವ ರೀತಿ ಇರುವುದಿಲ್ಲ ಓದುಗರಿಗೆ ಸರಿಯಾಗಿ ಅರ್ಥವಾಗುವುದಿಲ್ಲ ಅದಕ್ಕಾಗಿ ನೀವು ನಿಮ್ಮ ಸ್ಟೈಲ್ ಅಲ್ಲಿ ಸುಲಭವಾದ ಕನ್ನಡ ಪದಗಳನ್ನು ಅದಕ್ಕೆ ಸೇರಿಸಿ
AI ಟೂಲ್ಸ್ ಅನ್ನು ಬಳಸುವಾಗ ನೀವು ಈ ವಿಷಯವನ್ನು ಗಮನದಲ್ಲಿಡಿ
1.ಕಂಟೆಂಟ್ ಕ್ರಿಯೇಟ್ ಮಾಡಲು ನೀವು ಸಂಪೂರ್ಣ ನೀವು AI ಮೇಲೆಯೇ ಅವಲಂಬಿತ ವಾಗಬೇಡಿ ನಿಮ್ಮ ತಲೆಯನ್ನು ಕೂಡ ಉಪಯೋಗ ಮಾಡಿ
2. AI ಕೂಡ ಕೆಲವೊಮ್ಮೆ ತಪ್ಪು ಮಾಹಿತಿಯನ್ನು ನೀಡುತ್ತದೆ ಆದರಿಂದ ನೀವು ಒಮ್ಮೆ ಅದನ್ನು ಪರಿಶೀಲಿಸಿ ತಪ್ಪಿದ್ದರೆ ಸರಿ ಪಡಿಸಿ ನಿಮ್ಮ ಒಂದು ಸ್ಟೈಲ್ ಅಲ್ಲಿ ಎಡಿಟ್ ಮಾಡಿ
3. ನಿಮ್ಮ ವೈಯಕ್ತಿಕ ಅನುಭವವನ್ನು ಕೂಡ ನಿಮ್ಮ ಬ್ಲಾಗ್ ಪೋಸ್ಟ್ ಗೆ ಸೇರಿಸಿ ಆಗ ನಿಮ್ಮ ಬ್ಲಾಗ್ ಗೆ ಒಳ್ಳೆ ಬೆಲೆ ಸಿಗುತ್ತದೆ.
ಗೂಗಲ್ adsense ಗೆ AI ಕಂಟೆಂಟ್ ಇದ್ದರೆ ok ಇದಿಯ
ಇದು ಕೂಡ ತುಂಬ ಜನರಿಗೆ ಇರುವ ಅನುಮಾನಗಳು ಆದರೆ ಇದಕ್ಕೆ ಉತ್ತರ. ಹೌದು AI ಕಂಟೆಂಟ್ ಅನ್ನು ಬಳಸಬಹುದು ಆದರೆ ಕಂಟೆಂಟ್ ಗುಣಮಟ್ಟ ಚೆನ್ನಾಗಿರಬೇಕು, ಉಪಯುಕ್ತ ಮಾಹಿತಿ ಆಗಿರಬೇಕು, ಕಾಪಿ ಪೇಸ್ಟ್ ಆಗಿರಬಾರದು, ಹ್ಯೂಮನ್ ಎಡಿಟ್ ಇರಲೇಬೇಕು. ಗೂಗಲ್ ಗೆ ಗುಣಮಟ್ಟದ ಕಂಟೆಂಟ್ ಹಾಗಿರಬೇಕು ಅದು AI ಅಥವಾ ಮನುಷ್ಯ ಬರೆದಿರುವುದು ಅನ್ನುವುದು ಮುಖ್ಯವಲ್ಲ
ಕೊನೆಯದಾಗಿ ಹೇಳುವುದು ಏನೆಂದರೆ
AI ಟೂಲ್ಸ್ ಬಳಸಿ ಕಂಟೆಂಟ್ Create ಮಾಡುವುದು ಇಂದಿನ ಕಾಲದಲ್ಲಿ ತುಂಬಾ ಸುಲಭ ಮತ್ತು ಪರಿಣಾಮಕಾರಿಯಾದ ವಿಧಾನ. ಇದು ಸಮಯ ಉಳಿಸುತ್ತದೆ, ideas ಕೊಡುತ್ತದೆ ಮತ್ತು professional ಕ್ವಾಲಿಟಿ ಕಂಟೆಂಟ್ ಬರೆಯಲು ಸಹಾಯ ಮಾಡುತ್ತದೆ.
ಆದರೆ AI ಮೇಲೆ ಸಂಪೂರ್ಣವಾಗಿ ಡಿಪೆಂಡ್ ಆಗಬೇಡಿ. ನಿಮ್ಮ ಸ್ವಂತ ಐಡಿಯಾಸ್, ಅನುಭವ ಮತ್ತು editing ಸೇರಿಸಿದರೆ ಮಾತ್ರ ಕಂಟೆಂಟ್ unique ಆಗುತ್ತದೆ.
ನೀವು Blogging, YouTube, ಅಥವಾ Website ಮಾಡುತ್ತಿದ್ದರೆ ಇಂದೇ AI ಟೂಲ್ಸ್ ಬಳಸಲು ಶುರು ಮಾಡಿ. ಇದು ನಿಮ್ಮ ಬೆಳವಣಿಗೆಯ ವೇಗವನ್ನು ಹೆಚ್ಚು ಮಾಡುತ್ತದೆ.