2026 ರಲ್ಲಿ ಬರುತ್ತಿರುವ Upcoming Cars in India  ಕನ್ನಡದಲ್ಲಿ ಸಂಪೂರ್ಣ ವಿವರ

ನೀವು ಈ 2026 ರ ವರ್ಷದಲ್ಲಿ SUV ವಿಭಾಗದಲ್ಲಿ ಹೊಸ ಕಾರನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಹಾಗಿದ್ದರೆ ಈ ಮೂರು ತಿಂಗಳಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಯಾಗುತ್ತಿರುವ ಕಾರುಗಳ ವಿವರ ಇಲ್ಲಿದೆ ನೋಡಿ!

1.ಹುಂಡೈ ಕ್ರೆಟಾ (Hundai Creta)

ಹುಂಡೈಕ್ರೆಟ ಮಿಡ್ ಸೈಜ್ SUV ಯ ರಾಜ ಅಂತಾನೇ ಕರಿಯ ಬಹುದಾದ ಈ ಹುಂಡೈಕ್ರೆಟ ವನ್ನು . ಹೊಸ ಅವತಾರದಲ್ಲಿ ಹುಂಡೈ ಕ್ರೆಟಾ 2026 ರ ಮಾರ್ಚ್ ಅಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದು ಅಂತ ಹೇಳಲಾಗುತ್ತಿದೆ. ಮೊದಲಿಗೆ ಇದರ ಬೆಲೆ ಬಂದು ₹11 ಲಕ್ಷದಿಂದ ₹20 ಲಕ್ಷದವರೆಗೆ ಅಂದಾಜು ಇರಬಹುದು ಎಂದು ಹೇಳಲಾಗುತ್ತಿದೆ, ಇನ್ನು ಇಂಜಿನ್ ಅಂತ ನೋಡೋದಾದರೆ ಇದರಲ್ಲಿ ನಿಮಗೆ 1.5 ಲೀಟರ್ ನ್ಯಾಚುರಲ್ ಎಸ್ಪಿರೇಟೆಡ್ ಪವರ್ ಫುಲ್ ಪೆಟ್ರೋಲ್ ಇಂಜಿನ್ ಇದೆ. ಜೊತೆಗೆ ನಿಮಗೆ 1.5ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಮೈಲೇಜ್ ಪ್ರಿಯರಿಗಾಗಿ ಅಂತಾನೆ 1.5 ಲೀಟರ್ ಡೀಸೆಲ್ ಇಂಜಿನ್ ಕೂಡ ಇರಲಿದ. ಇನ್ನು ಇದರ ವಿಶೇಷತೆ ಏನೇನು ಅಂತ ನೋಡೋದಾದರೆ ಇದರ ಪ್ರಮುಖ ಆಕರ್ಷಣೆ ಎಂದರೆ ಈ ಬ್ರಾಂಡ್ ಹುಂಡೈ ಹೊಸ ಪ್ಯಾರಾಮೆಟ್ರಿಕ್ ಗ್ರಿಲ್ ಜೊತೆಗೆ ಬರ್ತಾ ಇದೆ ಇದು ಕಾರಿಗೆ ಒಂದು ಅಗ್ರೆಸ್ಸಿವ್ ಮಾಡರ್ನ್ ಲುಕ್ ಅನ್ನು ಕೊಡುತ್ತಿದೆ. ಇನ್ನು ಒಳಭಾಗದಲ್ಲಿ ಇನ್ಫೋಟೇನ್ಮೆಂಟ್ ವಿಥ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಸಿಗುತ್ತಿದೆ ಅದು ಕೂಡ ಡ್ಯುಯಲ್ ಟೋನ್ ಸೆಟ್ ಅಪ್ ಅಲ್ಲಿ ಇದೆ. ಇನ್ನು ಈ ಕಾರ್ ಯಾರಿಗೆ ಸೂಕ್ತ ಎಂದರೆ ಒಂದು ಸ್ಟೈಲಿಶ್ ಜೊತೆಗೆ ಉತ್ತಮ ಫೀಚರ್ಸ್ ಅನ್ನು ಒಳಗೊಂಡಿರುವಂತಹ ಜೊತೆಗೆ ರೀಸೆಲ್ ವ್ಯಾಲ್ಯೂ ಇರುವ ಕಾರನ್ನು ಖರೀದಿ ಮಾಡಬೇಕು ಅನ್ನುವವರಿಗೆ ಇದೊಂದು ಬೆಸ್ಟ್ ಕಾರ್ ಅಂತಾನೆ ಹೇಳಬಹುದು.

2. ಟೊಯೊಟಾ ರೇವ್4 (TOYOTA RAV4)

ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾರಾಟವಾಗುವ SUV ಗಳಲ್ಲಿ ಒಂದು ಈ ಟೊಯೊಟಾ ರೇವ್4 (TOYOTO RAV4) ಇನ್ನು ಇದು 2026 ರ ನವೆಂಬರ್ ಅಲ್ಲಿ ಮಾರುಕಟ್ಟೆಗೆ ಬರಬಹುದು ಅಂತ ಹೇಳಲಾಗುತ್ತಿದೆ. ಇನ್ನು ಇದರ ಬೆಲೆ ಬಂದು ಅಂದಾಜು ₹30 ಲಕ್ಷದಿಂದ ₹40 ಲಕ್ಷ ಅಂತ ಹೇಳಲಾಗುತ್ತಿದೆ ಯಾಕೆಂದರೆ ಇದು ಬರುವಾಗಲೆ ಕಂಪ್ಲೀಟ್ ಬಿಲ್ಡ್ ಯೂನಿಟ್ ಅದಕ್ಕಾಗಿ ಇದರ ಆರಂಭಿಕ ಬೆಲೆಯೆ ಇಷ್ಟು ದೊಡ್ಡ ಮಟ್ಟದಲ್ಲಿ ಇರುತ್ತದೆ. ಇನ್ನು ಇದರ ಇಂಜಿನ್ ಬಗ್ಗೆ ನೋಡುವುದಾದರೆ ಶಕ್ತಿ ಶಾಲಿಯಾದ 2.5 ಲೀಟರ್ ಹೈ ಬ್ರೀಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇನ್ನು ಇದರ ಸೇಫ್ಟಿ ಫೀಚರ್ಸ್ ನೋಡುವುದಾದರೆ ಅಡಾಫ್ಟಿವ್ ಕ್ರೂಸ್ ಕಂಟ್ರೋಲ್ ಜೊತೆಗೆ ಪ್ಲಸ್ ಲೈನ್ ಡಿಪಾರ್ಚರ್ ಅಲರ್ಟ್ ಕೂಡ ಇರುತ್ತದೆ, ಅಡ್ವಾನ್ಸ್ ಸೇಫ್ಟಿ ಫೀಚರ್ಸ್ ಕೂಡ ಈ ಟೊಯೊಟಾ ದ SUV ಕಾರ್ ನಲ್ಲಿ ಇದೆ, ಇನ್ನು ಇದು ಹೈ ಅಂಡ್ ಲಕ್ಷುರಿ ಬೇಕು ಅನ್ನಿಸುತ್ತೆ ಹಾಗೂ ಟೊಯೊಟಾ ಅಂತಹ ನಂಬಿಕರ್ಹ ಬ್ರ್ಯಾಂಡ್ ಬೇಕು ಅನ್ನೋರಿಗೆ ಈ ಒಂದು ಕಾರು ಸೂಕ್ತವಾದ ಆಯ್ಕೆ.

3.ನಿಸ್ಸಾನ್ ಗ್ರಾವಿಟಿ (Nissan Gravity)

Nissan ಈ ಒಂದು ಕಂಪನಿಯು ಭಾರತದ ಕಾರ್ ಮಾರುಕಟ್ಟೆಯಲ್ಲಿ ಬಧ್ರವಾದ ಸ್ಥಾನ ವನ್ನು ಪಡೆಯುತ್ತಿದೆ, ಈಗ ನಿಸ್ಸಾನ್ ಗ್ರಾವಿಟಿ (Nissan Gravity) ಅನ್ನುವ ಹೊಸ ಹೆಸರಿನಲ್ಲಿ suv ಯಲ್ಲಿ ಬರ್ತಾ ಇದೆ, ಇನ್ನು ಇದು ಫೆಬ್ರವರಿ ಅಥವಾ ಮಾರ್ಚ್ 2026 ರಲ್ಲಿ ಬಿಡುಗಡೆಯಾಗಬಹುದು, ಇನ್ನು ಇದರ ಬೆಲೆಯನ್ನು ನೋಡುವುದಾದರೆ ಸುಮಾರು ₹9 ಲಕ್ಷದಿಂದ ₹15 ಲಕ್ಷದವರೆಗೆ ಇರಬಹುದು ಒಳ್ಳೆಯ ಕಾಂಪಿಟೇಟಿವ್ ಬೆಲೆ ಅಂತಾನೆ ಹೇಳಬಹುದು, ಇನ್ನು ಇಂಜಿನ್ ಬಗ್ಗೆ ನೋಡುವುದಾದರೆ 1.3ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 1.0ಲೀಟರ್ ನ್ಯಾಚುರಲ್ ಎಸ್ಪಿರೇಟೆಡ್ ಎಂಜಿನ್ ಕೂಡ ಲಭ್ಯವಿದೆ, ಇನ್ನು ಇದರ ವಿಶೇಷತೆ ಬಗ್ಗೆ ಹೇಳುವುದಾದರೆ ಬೋಲ್ಡ್ ವಿ ಮೋಷನ್ ಗ್ರಿಲ್ ಜೊತೆಗೆ ಪ್ರ್ಯಾರನೋಮಿಕ್ ಸನ್ ರೂಫ್ ಕೂಡ ಇದರಲ್ಲಿ ಇದೆ, ಇದು ತನ್ನದೇ ಆದಂತಹ ಯುನಿಕ್ ಆದ ಅಗಲ ವದಂತಹ ಬಾಡಿ ಡಿಸೈನ್ ಅನ್ನು ಹೊಂದಿದೆ. ಇನ್ನು ಕಡಿಮೆ ಬೆಲೆಯಲ್ಲಿ ಒಂದು ಪ್ರೀಮಿಯರ್ ಲುಕ್ ಬೇಕು ಅನ್ನುವವರಿಗೆ ಇದೊಂದು ಸೂಕ್ತವಾದ ಆಯ್ಕೆ.

4.ಹೋಂಡಾ CR – V

ಹೋಂಡಾ ಕಂಪನಿಯ ಪ್ರಿಯರಿಗೆ ಇದು ಒಂದು ಸಿಹಿ ಸುದ್ದಿ ಅಂತಾನೆ ಹೇಳಬಹುದು ಯಾಕೆಂದರೆ ಹೋಂಡಾ CR -V ಒಂದು ಹೊಸ ಹೈ ಬ್ರೀಡ್ ರೂಪದಲ್ಲಿ ಬರುತ್ತಿದೆ, ಇದು ಮಾರ್ಚ್ 2026 ರಲ್ಲಿ ಮಾರುಕಟ್ಟೆಗೆ ಬರುತ್ತಿದೆ, ಇನ್ನು ಇದರ ಅಂದಾಜು ಬೆಲೆ ಬಂದು ₹25 ಲಕ್ಷದಿಂದ ₹35 ಲಕ್ಷದವರೆಗೂ ಇರುತ್ತದೆ, ಇದರ ಇಂಜಿನ್ ನೋಡುವುದಾದರೆ 2.0 ಲೀಟರ್ ನ ಅಟ್ಕಿನ್ಸನ್ ಸೈಕಲ್ ಕಂಟ್ರೋಲ್ ಇರುವ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಇರುವ ಎಂಜಿನ್ ಕೂಡ ಬರುತ್ತಿದೆ, ಇನ್ನು ಇದರ ವಿಶೇಷತೆ ಏನು ಎಂದರೆ ಇದರ ಇಂಟೀರಿಯರ್ ಅಪ್ ಗ್ರೇಡ್ ಮಾಡಲಾಗಿದೆ, ಹೋಂಡಾ ಸೆನ್ಸಿಂಗ್ ಟೆಕ್ನಾಲಜಿ ಜೊತೆಗೆ ಸೇಫ್ಟಿ ನೋಡುವುದಾದರೆ ಉತ್ತಮವಾದ ಫೀಚರ್ ಅಲ್ಲಿ ಇದೆ, ಇನ್ನು ಸಿಟಿ ಒಳಗೆ ಸ್ಮೂತ್ ಆಗಿ ಕಂಫರ್ಟಬಲ್ ಆಗಿ ಒಂದು ಲಕ್ಷುರಿ ಲುಕ್ ಬೇಕು ಅನ್ನುವವರಿಗೆ ಇದು ಸೂಕ್ತವಾದ ಆಯ್ಕೆ.

5. ಮಹೀಂದ್ರ ಸ್ಕಾರ್ಪಿಯೋ- N ಫೇಸ್ ಲಿಫ್ಟ್ (SCORPIO – N FACELIFT)

ಈ ಮಹೀಂದ್ರ ಕಂಪನಿಯು SUV ಗಳಗೆ ಅಪ್ಪ ಅಂತಾನೆ ಹೇಳಬಹುದು ಇದು ಭಾರತೀಯ SUV ಮಾರುಕಟ್ಟೆ ಯಲ್ಲಿ ಬಿಗ್ ಡ್ಯಾಡಿ ಅಂತಾನೆ ಹೇಳಬಹುದು, ಇದು ಏಪ್ರಿಲ್ 2026 ರಲ್ಲಿ ಮಾರುಕಟ್ಟೆಗೆ ಬರುತ್ತಿದೆ ಇದರ ಬೆಲೆ ಅಂದಾಜು ₹15 ಲಕ್ಷದಿಂದ ₹28 ಲಕ್ಷದ ವರೆಗೆ ಇರಬಹುದು, ಇದರ ವಿಶೇಷತೆ ಅಂದರೆ ಅಲಾಯ್ ವೀಲ್ಸ್ ಜೊತೆಗೆ ಫಾರ್ವರ್ಡ್ ಕಲ್ಯೂಷನ್ ವಾರ್ನಿಂಗ್ ನಂತಹ ಏರ್ ಡಾಸ್ ಫೀಚರ್ ಜೊತೆಗೆ ಇದು ಸ್ಕಾರ್ಪಿಯೋ ರೂಪದಲ್ಲಿ ಬರುತ್ತಿದೆ, ನೀವು ಆಫ್ ರೋಡ್ ಟ್ರಾವೆಲ್ ಮಾಡುವವರು ಆಗಿದ್ದರೆ ಹಾಗೂ ಸಿಟಿ ಯಲ್ಲಿ ಓಡಾಡುವಾಗ ಒಂದು ಗತ್ತಿನಲ್ಲಿ ಇರಬೇಕು ಅನ್ನುವವರಿಗೆ ಇದು ಸೂಕ್ತವಾದ ಆಯ್ಕೆ.

6.ಹುಂಡೈ ಪ್ಯಾಲಿಸೈಡ್ (HYUNDAI PALISADE)

ಇನ್ನು ಈ ಹುಂಡೈ ಒಂದು ಫ್ಲ್ಯಾಗ್ ಶಿಪ್ ಮಾಡೆಲ್ SUV ಇದು ಸೈಜ್ ಅಲ್ಲಿ ದೊಡ್ಡದಾಗಿ ಇರುತ್ತದೆ ಹಾಗೂ ಫೀಚರ್ಸ್ ಅಲ್ಲಿ ಕೂಡ ಗ್ರ್ಯಾಂಡ್ ಆಗಿ ಇರುತ್ತದೆ, ಇನ್ನು ಇದು ಏಪ್ರಿಲ್ 2026 ರಲ್ಲಿ ಮಾರುಕಟ್ಟೆಗೆ ಬರುತ್ತಿದೆ, ಇನ್ನು ಇದರ ಬೆಲೆ ಅಂದಾಜು ₹40 ಲಕ್ಷದಿಂದ ₹55 ಲಕ್ಷದ ವರೆಗೂ ಬರಬಹುದು, ಇನ್ನು ಇಂಜಿನ್ ವಿಷಯಕ್ಕೆ ಬರುವುದಾದರೆ 3.8 ಲೀಟರ್ V6 ಪೆಟ್ರೋಲ್ ಎಂಜಿನ್ ಜೊತೆಗೆ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಜೊತೆಗೆ ಬರುತ್ತಿದೆ, ಇನ್ನು ಇದರ ವಿಶೇಷತೆ ಈಗ ಇದರಲ್ಲಿ 7 ಮತ್ತು 8 ಸೀಟರ್ ವ್ಯವಸ್ಥೆ ಯೊಂದಿಗೆ ಕೂಡ ಬರುವ ಸಾಧ್ಯತೆ ಇದೆ, ಹಾಗೂ 12 ಸ್ಪೀಕರ್ ಹೊಂದಿರುವಂತಹ ಹಾರ್ಮನ್ ಕಾರ್ಡೆನ್ ಆಡಿಯೋ ಸಿಸ್ಟಮ್ ಕೂಡ ಇದರಲ್ಲಿ ಕೊಡ್ತಾ ಇದಾರೆ ಇದು ಒಂದು ಹೈ ಲೈಟ್ ಅಂತಾನೂ ಹೇಳಬಹುದು, ಇನ್ನು ನಿಮ್ಮದು ತುಂಬು ಕುಟುಂಬ ಆಗಿದ್ದಾರೆ ಹಾಗೂ ಪ್ರಯಾಣದಲ್ಲಿ ಒಂದು ಲಕ್ಷುರಿ ಅನುಭವ ಬೇಕು ಎಂದರೆ ಈ ಒಂದು ಕಾರು ಅತ್ಯುತ್ತಮವಾದ ಆಯ್ಕೆ

7. ಟೊಯೊಟಾ ಹೈ ರೈಡರ್ (TOYOTO HYRYDER)

ಈ ಒಂದು ಅತ್ಯುತ್ತಮವಾದ ಒನ್ ಆಫ್ ದಿ ಬೆಸ್ಟ್ ಕಾರು ಅಂತಾನೆ ಹೇಳಬಹುದು ಯಾಕೆಂದರೆ ಮೈಲೇಜ್ ವಿಷಯಕ್ಕೆ ಬಂದರೆ ಮೈಲೇಜ್ ಮಾಂತ್ರಿಕ ಅಂತಾನೆ ಹೇಳಬಹುದಾದ ಈ ಹೈಡರ್ ಈಗ ದೊಡ್ಡ ರೂಪದಲ್ಲಿ ಬರುತ್ತಿದೆ, ಇದು 2026 ರ ಮಾರ್ಚ್ ಅಲ್ಲಿ ಲಾಂಚ್ ಆಗಬಹುದು, ಇನ್ನು ಇದರ ಅಂದಾಜು ಬೆಲೆ ₹13 ಲಕ್ಷದಿಂದ 22 ಲಕ್ಷದ ವರೆಗೆ ಇರಲಿದೆ, ಇನ್ನು ಇದರ ಇಂಜಿನ್ ವಿಶೇಷತೆ ಈಗಾಗಲೇ ಇರುವ 5 ಸೀಟರ್ ಹೈಡರ್ ಗಿಂತ ಉತ್ತಮವಾದ ಕಮ್ಮಿ ಇಂದನವನ್ನು ಬಳಸುವ ಒಂದು ಹೈಬ್ರೀಡ್ ಎಂಜಿನ್ ಜೊತೆಗೆ ಬರುತ್ತಿದೆ, ಇನ್ನು ಉತ್ತಮ ಮೈಲೇಜ್ ಯೊಂದಿಗೆ ಹೆಚ್ಚಿನ ಸೇಫ್ಟಿ ಬೇಕು ಎನ್ನುವ ಹಾಗೂ ಮಧ್ಯಮ ವರ್ಗದ ಕುಟುಂಬ ಏನಿದೆ ಅಂತೋರಿಗೆ ಇದು ಸೂಕ್ತವಾದ ಆಯ್ಕೆ

8. ಸುಜುಕಿ ಇ ವಿಟಾರಾ (SUZUKI E VITARA)

ಎಲೆಕ್ಟ್ರಿಕ್ ಮಾರುಕಟ್ಟೆಗೆ ಈ ಮಾರುತಿ ಸುಜುಕಿ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ. ಇದು ಏಪ್ರಿಲ್ 2026 ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ, ಇನ್ನು ಇದರ ಬೆಲೆ ಬಂದು ₹18 ಲಕ್ಷದಿಂದ ₹25 ಲಕ್ಷದ ರೇಂಜ್ ಅಲ್ಲಿ ಇರುತ್ತದೆ, ಇನ್ನು ಇದರ ವಿಶೇಷತೆ ನೀವು ಒಮ್ಮೆ ಇದನ್ನು ಚಾರ್ಜ್ ಮಾಡಿದರೆ ಸಾಕು 400 km ಅಥವಾ 550 km ವರೆಗು ಬರುತ್ತದೆ. ಹಾಗೂ ಇದು ಮಾರುತಿಯ ಮೊದಲ EV ಅಂತ ಹೇಳಬಹುದು ಜೊತೆಗೆ ನಿಮಗೆ ಮಿನಿ ಮಲ್ಟಿ ಸ್ಟಿಕ್ ಡಿಸೈನ್ ಜೊತೆಗೆ ಅತ್ಯುತ್ತಮವಾದ ಕನೆಕ್ಟೆಡ್ ಕಾರ್ ಟೆಕ್ನಾಲಜಿ ಇದರಲ್ಲಿ ಇರುತ್ತದೆ, ಇನ್ನು ಮಾರುತಿ ಕಂಪನಿಯನ್ನು ಇಷ್ಟ ಪಡುವವರು ಅವರ ಮೊದಲ EV ಕಾರ್ ಅನ್ನು ಖರೀದಿಸಬಹುದು

9.ಕಿಯಾ ಸೊರೆಂಟೊ (KIA SORENTO)

ಇನ್ನು ಈ ಕಿಯಾ ಸೊರೆಂಟೊ ಪ್ರೀಮಿಯಂ ಲುಕ್ ಅಲ್ಲಿರುವ ಒಂದು 7 ಸೀಟರ್ SUV, ಇನ್ನು ಇದು ಮಾರ್ಚ್ 2026 ರಲ್ಲಿ ಬಿಡುಗಡೆ ಆಗಬಹುದು, ಮತ್ತು ಇದರ ಬೆಲೆ ಬಂದು ₹28 ಲಕ್ಷದಿಂದ ₹35 ಲಕ್ಷದ ವರೆಗೂ ಇರುತ್ತದೆ, ಇನ್ನು ಇದು ಕಿಯಾ ಸ್ಟೈಲಿಸ್ಟ್ ಡಿಸೈನ್ ಜೊತೆಗೆ 12.3 ಇಂಚಿನ ದೊಡ್ಡ ಸ್ಕ್ರೀನ್ ಇದರ ಒಂದು ಅಟ್ರಾಕ್ಟಿವ್ ಆಗಿರುತ್ತೆ ಇದರಲ್ಲಿ ನಿಮಗೆ ವೆಂಟಿಲೇಟೆಡ್ ಸೀಟ್ಸ್ ಮತ್ತು ಹೀಟೆಡ್ ಸೀಟ್ ಕೂಡ ಬರುತ್ತಿದೆ, ಇನ್ನು ನಿಮಗೆ ಸ್ಟೈಲಿಸ್ಟ್ ಅತ್ಯಾಧುನಿಕ ಫೀಚರ್ಸ್ ಇರುವ ಒಂದು ಪ್ರೀಮಿಯಂ SUV ಫೀಲ್ ಆಗಬೇಕು ಅನ್ನುವವರಿಗೆ ಸೂಪರ್ ಆದ ಆಯ್ಕೆ ಈ ಕಾರು.

ಕೊನೆಯದಾಗಿ ಹೇಳುವುದು ಏನೆಂದರೆ

2026 ರ ಈ ಮೂರು ತಿಂಗಳಲ್ಲಿ ನೀವು ಕಾರುಗಳನ್ನು ಖರೀದಿಸಬೇಕು ಎಂದರೆ ಇದು ನಿಮಗೆ ಉತ್ತಮವಾದ ಸಮಯ ಇಲ್ಲಿ ಹೇಳಿರುವ 9 ಕಾರುಗಳು ಕೂಡ ಬೇರೆ ಬೇರೆ ರೀತಿಯ ಫೀಚರ್ಸ್ ಗಳಿರುವ ಕಾರುಗಳು ನಿಮಗೆ ಯಾವ ಬಳಕೆಗೆ ಬೇಕು ಎಂದು ಆಯ್ಕೆ ಮಾಡಿ ತೆಗೆದುಕೊಳ್ಳಬಹುದು.

Leave a Comment