ಕಡಿಮೆ ಹಣದಲ್ಲಿ ಫುಡ್ ಟ್ರಕ್ ಪ್ರಾರಂಭಿಸಲು ರಾಜ್ಯ ಸರ್ಕಾರದಿಂದ 3 ಲಕ್ಷದ ಸಬ್ಸಿಡಿ ಪಡೆಯಲು ಹೀಗೆ ಮಾಡಿ

ನೀವು ಹೊಸದಾಗಿ ಬಿಸಿನೆಸ್ ಶುರು ಮಾಡಬೇಕು ಅಂತ ಇದೀರಾ ಅದರಲ್ಲೂ ನೀವು ಹೋಟೆಲ್ ಬಿಸಿನೆಸ್ ಶುರು ಮಾಡಬೇಕು ಅಂತ ಇದಿರಾ? ಆದರೆ ನಿಮ್ಮ ಬಳಿ ಶುರು ಮಾಡಲು ಹಣವಿಲ್ಲವ ಹಾಗಿದ್ದರೆ ಬನ್ನಿ ನಿಮಗಾಗಿ ಸರ್ಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ ಅದು ಏನು ಎಂದು ತಿಳಿದುಕೊಳ್ಳೋಣ

ತುಂಬಾ ಜನಕ್ಕೆ ಹೋಟೆಲ್ ಬಿಸಿನೆಸ್ ಶುರು ಮಾಡಬೇಕು ಅನ್ನೋ ಆಸೆ ಇರುತ್ತದೆ ಆದರೆ ಹಣವಿಲ್ಲದೆ ಸುಮ್ಮನಿರುತ್ತಾರೆ ಅಂಥವರಿಗೆ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ ಏನಪ್ಪಾ ಅಂದರೆ? ನೀವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಬದಲು ನಿಮ್ಮದೇ ಆದಂತ ಮಾಡರ್ನ್ ಆಗಿರುವ ಒಂದು ಸಂಚಾರಿ ಕ್ಯಾಂಟೀನ್ ಅನ್ನು ಶುರು ಮಾಡಬಹುದು ಅದು ಕೂಡ ಒಂದು ಎಲೆಕ್ಟ್ರಿಕ್ ಗೂಡ್ಸ್ ವೆಹಿಕಲ್ ನ ಮೂಲಕ ಅದಕ್ಕೆ ಸರ್ಕಾರ ನಿಮಗೆ ಸುಮಾರು 3 ಲಕ್ಷ ಹಣವನ್ನು ಸಬ್ಸಿಡಿ ಮೂಲಕ ಕೊಡುತ್ತಿದೆ. ಬನ್ನಿ ಹಾಗಿದ್ದರೆ ಏನು ಯೋಜನೆ ಇದು ಹೇಗೆ ಇದಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಈ ಲೇಖನಿ ಮೂಲಕ ತಿಳಿಸಿಕೊಡ್ತೀನಿ.

ಆಹಾರ ವಾಹಿನಿ

ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿರುವ ಈ ಯೋಜನೆಯ ಹೆಸರು ಬಂದು ಆಹಾರ ವಾಹಿನಿ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಹಾಗೂ ಹೋಟೆಲ್ ಬಿಸಿನೆಸ್ ಗಳಿಗೆ ಈ ನಡುವೆ ಹೆಚ್ಚಿನ ಬೇಡಿಕೆ ಇದೆಯಲ್ಲ ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಜ್ಯ ಸರ್ಕಾರ ಈ ಯೋಜನೆ ಯನ್ನು ತಂದಿದೆ. ಆಹಾರ ವಾಹಿನಿ ಯೋಜನೆಯ ಮೂಲಕ ಸಾರ್ವಜನಿಕರಿಗೆ ಆಹಾರ ಪೂರೈಸಲು ಅಂದರೆ ಹೋಟೆಲ್ ಬಿಸಿನೆಸ್ ಶುರು ಮಾಡಲು ಸರ್ಕಾರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವ ಸಂಚಾರಿ ಕ್ಯಾಂಟೀನ್ ಅಥವಾ ಮೊಬೈಲ್ ಕ್ಯಾಂಟೀನ್ ಶುರು ಮಾಡಲು ನಾಲ್ಕು ಚಕ್ರವುಳ್ಳ ಒಂದು ಎಲೆಕ್ಟ್ರಿಕ್ ಗೂಡ್ಸ್ ವೆಹಿಕಲ್ ರೀತಿ ವಿನ್ಯಾಸಗೊಳಿಸಿ, ವಿತರಣೆ ಮಾಡುತ್ತಾ ಇದಾರೆ. ಈ ಯೋಜನೆಯ ಪ್ರಮುಖ ಆಕರ್ಷಣೆ ಅಂದರೆ ವಾಹನ ಖರೀದಿ ಮಾಡಲು ಸರ್ಕಾರದ ವತಿಯಿಂದ 3 ಲಕ್ಷಗಳ ಸಬ್ಸಿಡಿ ಅನ್ನು ನೀಡುತ್ತಿರುವುದು. ಇದರಿಂದ ನೀವು ಹೊಸದಾಗಿ ಶುರು ಮಾಡಬೇಕು ಅನ್ಕೊಂಡಿರುವ ಆಹಾರ ಉದ್ಯಮಕ್ಕೆ ಹಣದ ತೊಂದರೆ ಇರುವವರಿಗೆ ಇದರಿಂದ ಸಹಾಯವಾಗುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಇವಾಗ ಇದಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹೇಗೆ ಸಲ್ಲಿಸಬಹುದು ಎಂದರೆ ಪ್ರತಿ ಸಮುದಾಯಕ್ಕೂ ಅವರದೆ ಆದ ಪ್ರತ್ಯೇಕ ಅಭಿವೃದ್ಧಿ ನಿಗಮ ಅಂತ ಇರುತ್ತದೆ ಅಲ್ಲವೇ, ಆ ಸಮುದಾಯದ ನಿಗಮದ ಮೂಲಕವೇ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ  ಬನ್ನಿ ಆ ಸಮುದಾಯಗಳ ಬಗ್ಗೆ ತಿಳಿಯೋಣ

ಯಾವ ಯಾವ ಸಮುದಾಯದವರು ಅರ್ಹರು

  • ವಿಶ್ವಕರ್ಮ ಸಮುದಾಯ ನಿಗಮ
  • ಮಡಿವಾಳ ಸಮುದಾಯ ನಿಗಮ
  • ಕಾಡುಗೊಲ್ಲ ಸಮುದಾಯ ನಿಗಮ
  • ಸವಿತಾ ಸಮಾಜ ನಿಗಮ
  • ವೀರಶೈವ ಲಿಂಗಾಯತ ನಿಗಮ
  • ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ
  • ಅಲೆಮಾರಿ/ ಅರೆ ಅಲೆಮಾರಿ ನಿಗಮ
  • ಮರಾಠ ಸಮುದಾಯ ನಿಗಮ
  • ಇತರೆ ಹಿಂದುಳಿದ ವರ್ಗಗಳ ನಿಗಮ

ಈ ಮೇಲೆ ತಿಳಿಸಿದ ನಿಗಮಗಳನ್ನು ಹೊರತುಪಡಿಸಿ ಉಳಿದ ಹಿಂದುಳಿದ ವರ್ಗದವರು ಅಂದರೆ ಡಿ ದೇವರಾಜು ಅರಸು ನಿಗಮದಡಿ (ಪ್ರವರ್ಗ-1, 2ಎ, 3ಎ, 3ಬಿ) ಇವರು ಅರ್ಜಿ ಸಲ್ಲಿಸಬಹುದು. ಬನ್ನಿ ಈ ಯೋಜನೆಗೆ ಒಳಪಟ್ಟಿರುವ ಹಲವು ನಗರಗಳು, ವಿಧಾನಸಭಾ ಕ್ಷೇತ್ರಗಳ ಬಗ್ಗೆ ತಿಳಿಯೋಣ.

ಬೆಂಗಳೂರು ವಿಧಾನಸಭಾ ಕ್ಷೇತ್ರಗಳು

  • ಯಲಹಂಕ
  • ಮಲ್ಲೇಶ್ವರಂ
  • ಕೆ ಆರ್ ಪುರಂ
  • ಹೆಬ್ಬಾಳ
  • ಮಹದೇವಪುರ
  • ಜಯನಗರ
  • ಬಸವನಗುಡಿ
  • ರಾಜಾಜಿನಗರ
  • ಶಿವಾಜಿ ನಗರ
  • ಯಶವಂತಪುರ
  • ಬೆಂಗಳೂರು ದಕ್ಷಿಣ

ಈ ಎಲ್ಲ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳು ಈ ಒಂದು ಯೋಜನೆಗೆ ಒಳಪಟ್ಟಿದೆ

ವಿವಿಧ ನಗರ ವಿಧಾನಸಭಾ ಕ್ಷೇತ್ರಗಳು

ಆನೇಕಲ್, ಕನಕಪುರ, ತುಮಕೂರು ನಗರ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ಮೈಸೂರು, ಉಡುಪಿ, ಮಂಗಳೂರು ನಗರ ಉತ್ತರ – ದಕ್ಷಿಣ, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹುಬ್ಬಳ್ಳಿ – ಧಾರವಾಡ, ಕಾರವಾರ, ಹಾವೇರಿ, ಕಲಬುರಗಿ, ಯಾದಗಿರಿ, ಬಳ್ಳಾರಿ, ಬೀದರ್, ರಾಯಚೂರು, ಕೊಪ್ಪಳ, ವಿಜಯನಗರ,

ಈ ಎಲ್ಲಾ ಕ್ಷೇತ್ರಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

  • ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಒಳಗೆ ಇರಬೇಕು
  • ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಅಧಿಕವಾಗಿರಬಾರದು
  • ಮೇಲೆ ಹೇಳಿರುವ ಸಮುದಾಯದ ವ್ಯಕ್ತಿ ಆಗಿರಬೇಕು
  • ಅರ್ಜಿ ಸಲ್ಲಿಸುವವರು ಕರ್ನಾಟಕದ ನಿವಾಸಿ ಆಗಿರಬೇಕು ಮತ್ತು ಈ ಹಿಂದೆ ಈ ನಿಗಮಗಳ ಯಾವುದೆ ಯೋಜನೆಯಲ್ಲಿಯೂ ಸೌಲಭ್ಯ ಪಡೆದಿರಬಾರದು. ಹಿಂದೆ ನೀವು ಈ ಯೋಜನೆಗೆ ಅರ್ಜಿ ಹಾಕಿ ಸೌಲಭ್ಯ ಪಡೆದು ಮತ್ತೆ ಅರ್ಜಿ ಹಾಕಿದರೆ ನಿಮಗೆ ಇದು ಸಿಕ್ಕುವುದಿಲ್ಲ.

ಬನ್ನಿ ಹಾಗಿದ್ದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿದುಕೊಳ್ಳೋಣ

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

  • ನೀವೇ ನಿಮ್ಮ ಸ್ವಂತ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಸೇವಾ ಸಿಂಧು (Seva Sindhu) ವೆಬ್ ಸೈಟ್ ಗೆ ಲಾಗ್ ಇನ್ ಆಗಿ ಅರ್ಜಿ ಸಲ್ಲಿಸ ಬಹುದಾಗಿದೆ
  • ಅರ್ಜಿಗಳನ್ನು ಗ್ರಾಮ ಒನ್ / ಬೆಂಗಳೂರು ಒನ್ / ಕರ್ನಾಟಕ ಒನ್/ ಈ ಒಂದು ಕೇಂದ್ರಗಳಲ್ಲೂ ಕೂಡ ನೀವು ಅರ್ಜಿ ಸಲ್ಲಿಸಬಹುದು
  • ನೀವು ಅರ್ಜಿಯನ್ನು ಸಲ್ಲಿಸುವಾಗ ಆಧಾರ್ ಗೆ ಜೋಡಿಸಿರುವ ಚಾಲ್ತಿ ಯಲ್ಲಿರುವ ಬ್ಯಾಂಕ್ ಖಾತೆ (Active Bank Account) ಇರಬೇಕು ಅದನ್ನೆ ಕನೆಕ್ಟ್ ಮಾಡಬೇಕು.
  • ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಹಾಗೂ ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ಇರುವ ಹೆಸರು ಗಳು ಒಂದೆ ರೀತಿಯಾಗಿರಬೇಕು, ಹೆಸರು ಶ್ರೀ/ ಶ್ರೀಮತಿ/ ಕುಮಾರಿ ಹೀಗೆ ಇದ್ ಯಾವುದರಲ್ಲೂ ಏನು ವ್ಯತ್ಯಾಸ ಇರಬಾರದು ಇದ್ದರೆ ನಿಮಗೆ ಅರ್ಜಿ ಸಲ್ಲಿಸಲು ಹಾಗುವುದಿಲ್ಲ

ಹಾಗಿದ್ದರೆ ಬನ್ನಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುದೆಂದು ತಿಳಿದುಕೊಳ್ಳೋಣ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಹನ ಚಾಲನಾ ಪರವಾನಗಿ (Driving licence), ನಿವಾಸ ದೃಢೀಕರಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬುಕ್ ಹಾಗೂ ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇರಲೇಬೇಕು ಏಕೆಂದರೆ ನೀವು ಸಂಚಾರಿ ಕ್ಯಾಂಟೀನ್ ಮಾಡುತ್ತಿರುವುದರಿಂದ ಗಾಡಿ ಓಡಿಸೋಕೆ ನಿಮಗೆ ಬರಲೇಬೇಕಾದರಿಂದ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಬೇಕೇ ಬೇಕು.

ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ

ನೀವು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ವನ್ನು ನೀವು ತಿಳಿಯಲೇಬೇಕು ನೀವು ಈ ಕೂಡಲೇ ಅರ್ಜಿ ಸಲ್ಲಿಸಿದರು ಉತ್ತಮ ಏಕೆಂದರೆ, ಪ್ರತಿಯೊಂದು ಸಮುದಾಯಗಳಿಗೂ ಅರ್ಜಿ ಸಲ್ಲಿಸಲು ಅದರದ್ದೇ ಆದ ಕೊನೆ ದಿನಾಂಕವನ್ನು ನಿಗದಿ ಪಡಿಸಲಾಗಿರುತ್ತದೆ. ಬಹುತೇಕ ಆ ದಿನಾಂಕಗಳು ಹೀಗೆ ಇರುತ್ತದೆ 2026 ಮಾರ್ಚ್ 6, 7, 8, 9ನೇ ತಾರೀಕು ಅರ್ಜಿಯನ್ನು ಸಲ್ಲಿಸಬಹುದು. ಉದಾಹರಣೆಗೆ 

  • ಡಿ ದೇವರಾಜು ಅರಸು ನಿಗಮದವರು: 2026 ಮಾರ್ಚ್ 04
  • ಮರಾಠ ನಿಗಮ: 2026 ಮಾರ್ಚ್ 05
  • ಮಡಿವಾಳ/ ಅಲೆಮಾರಿ / ಕಾಡುಗೊಲ್ಲ ನಿಗಮಗಳು: 2026 ಮಾರ್ಚ್ 06
  • ವಿಶ್ವಕರ್ಮ / ಸವಿತಾ ಸಮಾಜ ನಿಗಮಗಳು: 2026 ಮಾರ್ಚ್ 07
  • ವೀರಶೈವ ಲಿಂಗಾಯತ ನಿಗಮ: 2026 ಮಾರ್ಚ್ 08

ಈ ರೀತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇರುತ್ತದೆ ಹಾಗಾಗಿ ನೀವು ಇದನ್ನು ಪರಿಶೀಲಿಸಬೇಕು ಎಂದರೆ ಆ ಅಧಿಕೃತ ವೆಬ್ ಸೈಟ್ ನಲ್ಲಿಯೇ ಹೋಗಿ ನೀವು ಪರಿಶೀಲಿಸ ಬೇಕಾಗುತ್ತದೆ , ನೀವು ವೆಬ್ ಸೈಟ್ ಗಳಿಗೆ ಹೋಗಿ ಪರಿಶೀಲಿಸುವುದು ಉತ್ತಮ ಏಕೆಂದರೆ ಅಲ್ಲಿಯೇ ನಿಮಗೆ ಎಲ್ಲಾ ಅಪ್ಡೇಟ್ ಗಳು ಆಗ್ತಿರುತ್ತೆ. ಮಾರ್ಚ್ ಅಲ್ಲಿಯೇ ನಿಮಗೆ ಕೊನೆಯ ದಿನಾಂಕ ಬರಬಹುದು. ಬನ್ನಿ ಇದರ ಆಯ್ಕೆ ಪ್ರಕ್ರಿಯೆ ಹೇಗೆ ಎಂದು ತಿಳಿಯೋಣ

ಆಯ್ಕೆಯ ಪ್ರಕ್ರಿಯೆ ಹೇಗೆ?

ಇದರಲ್ಲಿ ಆಯ್ಕೆ ಮಾಡುವಾಗ ಈ ಯೋಜನೆಯ ಅನುಷ್ಠಾನಗೊಳಿಸುವ ನಿಗಮ ಆಗಿರಬಹುದು ಇದರಲ್ಲಿಯ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಒಂದು ಸೆಲೆಕ್ಷನ್ ಕಮಿಟಿ ಆ ಮೂಲಕ ಆಯ್ಕೆ ಮಾಡುತ್ತಾರೆ ಈಗಾಗಲೇ ಇದರಲ್ಲಿ ತುಂಬ ಜನ ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ನೀವು ಈ ಸಂಚಾರಿ ಕ್ಯಾಂಟೀನ್ ನ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಕೊನೆಯದಾಗಿ ಹೇಳುವುದು ಏನೆಂದರೆ

ಕೊನೆಯದಾಗಿ ಹೇಳುವುದು ಮೊಬೈಲ್ ಕ್ಯಾಂಟೀನ್ ಅಥವಾ ಸಂಚಾರಿ ಕ್ಯಾಂಟೀನ್ ಪ್ರಾರಂಭಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಸಿಗುವುದಿಲ್ಲ ಅನ್ನಿಸುತ್ತದೆ. ಹಾಗಾಗಿ ಮಾರ್ಚ್ ತಿಂಗಳಿನಲ್ಲೇ ಕೊನೆ ದಿನಾಂಕ ಇರುವುದರಿಂದ ಇವತ್ತೇ ಅರ್ಜಿ ಹಾಕಿ ಆಗೇ ನಿಮ್ಮ ಸ್ನೇಹಿತರು ಯಾರಾದರೂ ಈ ಹೋಟೆಲ್ ಉದ್ಯಮ ಮಾಡಬೇಕು ಅನ್ನುವವರಿಗೆ ಕೂಡ ಈ ವಿಷಯವನ್ನು ತಿಳಿಸಿ ಅವರು ಇದರ ಪ್ರಯೋಜನವನ್ನು ಪಡೆಯಲಿ.

ಏಕೆಂದರೆ ನೀವು ಈಗ ಬೆಂಗಳೂರಿನ ಯಾವುದೇ ಭಾಗಕ್ಕೆ ಹೋದರೂ ನೀವು ಈ ಮೊಬೈಲ್ ಕ್ಯಾಂಟೀನ್ ಅನ್ನು ನೋಡಬಹುದು ತುಂಬ ಸುಲಭವಾಗಿ ನೀವು ಇದರಲ್ಲಿ ಆಹಾರ ತಯಾರು ಮಾಡಬಹುದು ಈ ವಾಹನದಲ್ಲಿಯೇ ನಿಮಗೆ ತುಂಬ ಸೌಲಭ್ಯಗಳು ನಿಮಗೆ ಸಿಗುತ್ತವೆ ಹಾಗೆ ನೀವು ಬರಿ ತಿಂಡಿ ಊಟ ಅಸ್ಟೇ ಅಲ್ಲದೆ, ಈ ಕೇಕ್ ಗಳು ಈ ಸ್ವೀಟ್ ಚಾಟ್ಸ್ ಗಳು ಅಥವಾ ಚಾಟ್ಸ್ ಸೆಂಟರ್ ಆಗಿ ಇದರ ಮೂಲಕ ಉದ್ಯಮ ಪ್ರಾರಂಭ ಮಾಡಬಹುದು ಇದಕ್ಕೆ ಸರ್ಕಾರ ದಿಂದ ಕೂಡ ಆರ್ಥಿಕ ಸಹಾಯದ ರೂಪದಲ್ಲಿ ನಿಮಗೆ 3 ಲಕ್ಷದ ವರೆಗೂ ಸಬ್ಸಿಡಿ ಕೊಡುತ್ತಿದೆ ಇದರ ಪ್ರಯೋಜನವನ್ನು ಪಡೆದು ನೀವು ನಿಮ್ಮ ಸ್ವಂತವಾದ ಬಿಸಿನೆಸ್ ಅನ್ನು ಶುರು ಮಾಡಿ!

Leave a Comment