Karnataka Police Recruitment in 2026 – ಕರ್ನಾಟಕ ಪೊಲೀಸ್ ನೇಮಕಾತಿ 2026 / ನಮಸ್ಕಾರ ಸ್ನೇಹಿತರೆ ನಿಮಗೆ ಖಾಕಿ ತೊಟ್ಟು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಇದೆಯೇ? ಹಾಗಿದ್ದರೆ ನಿಮಗೆ ಇಲ್ಲೊಂದು ಸಂತೋಷದ ಸುದ್ದಿ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹಾಗಿದ್ದರೆ ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಆಯ್ಕೆ ಮಾಡುವ ಪ್ರಕ್ರಿಯೆ ಹೇಗಿರಲಿದೆ ಅರ್ಜಿ ಸಲ್ಲಿಸುವುದು ಹೇಗೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ, ಈ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಯೋಣ ಬನ್ನಿ!
ಎಷ್ಟು ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಈಗ ಸುಮಾರು 4656 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಇದರಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಹಾಗೂ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳಿದ್ದು ನಮ್ಮ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ನಮ್ಮ ರಾಜ್ಯ ಸರ್ಕಾರ ನಿಮಗೆ ಕೊಟ್ಟಿದೆ. ಆದರೆ ನೀವು ಅರ್ಜಿಯನ್ನು ಆನ್ ಲೈನ್ ಮೂಲಕವೇ ಸಲ್ಲಿಸಬೇಕು. ಹಾಗಿದ್ದರೆ ಅರ್ಜಿಯನ್ನು ಆನ್ ಲೈನ್ ಅಲ್ಲಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಯಾವ ವಿಭಾಗದಲ್ಲಿ ಯಾವ ಹುದ್ದೆಗಳನ್ನು ಹಂಚಲಾಗಿದೆ ಎಂದು ತಿಳಿಯೋಣ.
ಯಾವ ಯಾವ ಹುದ್ದೆಗಳು ಖಾಲಿಯಿವೆ?
ಅರ್ಜಿ ಸಲ್ಲಿಸುವ ಮೊದಲು ಯಾವ ಯಾವ ಹುದ್ದೆಗಳು ಖಾಲಿ ಇದಾವೆ ಈ ಬಾರಿ ಕೇವಲ ಸಿವಿಲ್ ಪೊಲೀಸ್ ಮಾತ್ರವಲ್ಲದೆ ವಿವಿಧ ವಿಭಾಗ ಗಳಲ್ಲಿ ನೇಮಕಾತಿ ನಡೀತಾ ಇದೆ ಒಂದೊಂದಾಗಿ ತಿಳಿಯೋಣ ಬನ್ನಿ
ಹುದ್ದೆಯ ಹೆಸರು ಮತ್ತು ಆಹ್ವಾನ ಸಂಖ್ಯೆ
•ಸಬ್ – ಇನ್ ಸ್ಪೆಕ್ಟರ್ (PSI) = 20
•ಸಶಕ್ತ ಪೊಲೀಸ್ ಕಾನ್ಸ್ ಸ್ಟೇಬಲ್ (APC) = 1650
•ಸಿವಿಲ್ ಪೊಲೀಸ್ ಕಾನ್ಸ್ ಸ್ಟೇಬಲ್ (Civil) = 614
•KSRP ಕಾನ್ಸ್ ಸ್ಟೇಬಲ್ = 2032
•KSISF ಕಾನ್ಸ್ ಸ್ಟೇಬಲ್ = 340
•ಒಟ್ಟು ಹುದ್ದೆಗಳು = 4656
ಇಷ್ಟು ಹುದ್ದೆಗಳಲ್ಲಿ ನಿಮಗೆ ಯಾವ ಹುದ್ದೆ ಬೇಕು ಅನ್ನುವ ಆಕಾಂಕ್ಷೆ ಇದೆಯೋ ಅದಕ್ಕೆ ನೀವು ಅರ್ಜಿ ಸಲ್ಲಿಸಬಹುದು.
2 ವಿಭಾಗಗಳಲ್ಲಿ ಈ ಬಾರಿಯ ಹುದ್ದೆ ಅಂಚಿಕೆ
ಹೌದು ಸ್ನೇಹಿತರೆ ಈ ಬಾರಿ ಹುದ್ದೆಯನ್ನು 2 ವಿಭಾಗಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ ಅದು ಯಾವುದು ಎಂದರೆ
ಮೊದಲನೆಯದಾಗಿ ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಮೀಸಲಾದ ಸ್ಥಳೀಯ ವೃಂದದ ಹುದ್ದೆಗಳು ಮತ್ತು ಎರಡನೆಯದು ಉಳಿಕೆ ಮೂಲ ವೃಂದದ ಹುದ್ದೆಗಳು ಅಂದರೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರದ ಉಳಿದ ಜಿಲ್ಲೆಯ ಅಭ್ಯರ್ಥಿಗಳಿಗೆ ಈ ಎಲ್ಲಾ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ ಬನ್ನಿ ಈಗ ಎರಡು ವಿಭಾಗದ ಪ್ರದೇಶಗಳಿಗೆ ಯಾವ ಪ್ರದೇಶಕ್ಕೆ ಯಾವ ಹುದ್ದೆಯನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿಯೋಣ
ಕಲ್ಯಾಣ ಕರ್ನಾಟಕ ವಿಭಾಗಕ್ಕೆ
•ಡಿಟೆಕ್ಟಿವ್ ಸಬ್ ಇನ್ ಸ್ಪೆಕ್ಟರ್ (DSI) – 5 ಹುದ್ದೆ
•ಸಶಕ್ತ ಪೊಲೀಸ್ ಕಾನ್ ಸ್ಟೇಬಲ್ (APC) – 179 ಹುದ್ದೆ
•ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ (Civil PC) – 614 ಹುದ್ದೆ
•ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೇಬಲ್ (KSRP) – 532 ಹುದ್ದೆ
•ಪೊಲೀಸ್ ಕಾನ್ ಸ್ಟೇಬಲ್ (KSISF) – 340 ಹುದ್ದೆ
ಕಲ್ಯಾಣ ಕರ್ನಾಟಕ ಬಿಟ್ಟು ಉಳಿದ ವಿಭಾಗಕ್ಕೆ
•ಡಿಟೆಕ್ಟಿವ್ ಸಬ್ ಇನ್ ಸ್ಪೆಕ್ಟರ್ (DSI) – 15 ಹುದ್ದೆ
•ಸಶಕ್ತ ಪೊಲೀಸ್ ಕಾನ್ ಸ್ಟೇಬಲ್ (APC) – 1421 ಹುದ್ದೆ
•ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ (Civil PC) – 0ಹುದ್ದೆಗಳು
•ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೇಬಲ್ (KSRP) – 1500 ಹುದ್ದೆಗಳು
•ಪೊಲೀಸ್ ಕಾನ್ ಸ್ಟೇಬಲ್ (KSISF) – 0 ಹುದ್ದೆಗಳು
ಮತ್ತು ಕ್ರೀಡಾ ಕೋಟಾದಡಿ 50 ಹುದ್ದೆಗಳನ್ನು ಮೀಸಲಿಡಲಾಗಿದೆ ಇಷ್ಟು ಈ ಎಲ್ಲಾ ಪ್ರದೇಶಗಳಿಗೂ ಹಂಚಿಕೆಯಾಗಿರುವ ಹುದ್ದೆಗಳ ಮಾಹಿತಿ ಬನ್ನಿ ಈಗ ಇನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆಯಾಗಿರುವ ಹುದ್ದೆಗಳ ಬಗ್ಗೆ ತಿಳಿಯೋಣ!
ಸಶಕ್ತ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳು
ಸಶಕ್ತ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳನ್ನು ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಈ ಕೆಳಗಿನ ಪಟ್ಟಿಯಲ್ಲಿ ತಿಳಿದುಕೊಳ್ಳಿ
- ಬೆಂಗಳೂರು ನಗರ – 1031 | • ಉಡುಪಿ – 45
- ಮೈಸೂರು ನಗರ – 95 | • ಕಾರವಾರ – 55
- ಮಂಗಳೂರು ನಗರ – 15 | • ಧಾರವಾಡ – 15
- ಬೆಂಗಳೂರು ಜಿಲ್ಲೆ – 20 | • ವಿಜಯನಗರ – 80
- ಚಿಕ್ಕಬಳ್ಳಾಪುರ – 45 | • ಕಲಬುರಗಿ – 15
- ಮೈಸೂರು ಜಿಲ್ಲೆ – 40 | • ಬಳ್ಳಾರಿ – 22
- ಕೊಡಗು ಜಿಲ್ಲೆ – 35 | • ಮಂಗಳೂರು – 10
- ಮಂಡ್ಯ ಜಿಲ್ಲೆ – 45 | • ಚಿಕ್ಕಮಗಳೂರು – 20
- ಶಿವಮೊಗ್ಗ ಜಿಲ್ಲೆ – 45 | • KARP ಮಾಂಟೆಡ್ ಕಂಪನಿ – 32
- ಚಿತ್ರದುರ್ಗ ಜಿಲ್ಲೆ – 25
ಹೀಗೆ ವಿವಿಧ ಪ್ರದೇಶಕ್ಕೆ ಹಾಗೂ ವಿವಿಧ ಜಿಲ್ಲೆಗಳಿಗೆ ಸಶಕ್ತ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳನ್ನು ಹಂಚಲಾಗಿದೆ.
ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳು
- ಬೆಂಗಳೂರು ನಗರ – 130 | • ಕಲಬುರಗಿ ನಗರ – 49
- ರಾಯಚೂರು – 64 | • ಕಲಬುರ್ಗಿ ಜಿಲ್ಲೆ – 114
- ಕೊಪ್ಪಳ – 35 | • ಬೀದರ್ – 85
- ಯಾದಗಿರಿ – 27 | • ಬಳ್ಳಾರಿ – 40
- ವಿಜಯನಗರ – 66 | • ರೈಲ್ವೆ ಪೊಲೀಸ್ – 04
ಇಷ್ಟು ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳು ಇಂತಿಷ್ಟು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ! ಬನ್ನಿ ಹಾಗಿದ್ದರೆ ಇಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಇದಕ್ಕೆ ಬೇಕಿರುವ ಅರ್ಹತೆಗಳೇನು ಇವೆಲ್ಲವನ್ನೂ ತಿಳಿಯೋಣ ಬನ್ನಿ
ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿ
1.ವಿದ್ಯಾರ್ಹತೆ: ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಕನಿಷ್ಠ ಅಂದರು ಪಿಯುಸಿ (2nd PUC) ಅಥವಾ ತತ್ವಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಬ್ ಇನ್ ಸ್ಪೆಕ್ಟರ್ ಹುದ್ದೆಗಳಿಗೆ ಮಾನ್ಯ ಇರುವ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು.
2.ವಯಸ್ಸಿನ ಮಿತಿ: ಕನಿಷ್ಠ ಅಂದರು 18 ವರ್ಷ ತುಂಬಿರಬೇಕು, ಗರಿಷ್ಠ ವಯೋಮಿತಿ ಇರುವ ಅಭ್ಯರ್ಥಿಗಳು ಅವರವರ ವರ್ಗಕ್ಕೆ ಅನುಗುಣವಾಗಿ 25 ರಿಂದ 30 ವರ್ಷಗಳವರೆಗೆ ಇರಬೇಕು
3.ಅರ್ಜಿ ಶುಲ್ಕ: ಅರ್ಜಿ ಶುಲ್ಕದ ವಿವರಗಳು ಅದಿಸೂಚನೆಯಲ್ಲಿ ತಿಳಿಸಿದಂತೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಇನ್ನು ನೀವು ಅರ್ಜಿ ಸಲ್ಲಿಸಿದ ಮೇಲೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತದೆ ಆಯ್ಕೆ ಪ್ರಕ್ರಿಯೆ 4 ರೀತಿಯಲ್ಲಿ ನಡೆಯುತ್ತದೆ ಬನ್ನಿ ಈಗ ಅವುಗಳ ಬಗ್ಗೆ ತಿಳಿಯೋಣ
1. ಲಿಖಿತ ಪರೀಕ್ಷೆ (Written exam): ಅಭ್ಯರ್ಥಿಗಳ ಸಾಮಾನ್ಯ ಜ್ಞಾನ (General knowledge) ಮತ್ತು ಬೌದ್ಧಿಕ ಸಾಮರ್ಥ್ಯದ ಪರೀಕ್ಷೆ ಮಾಡುತ್ತಾರೆ.
2. ಸಹಿಷ್ಣುತೆ ಪರೀಕ್ಷೆ (Endurance Test): ಓಟ, ಉದ್ದ ಜಿಗಿತ, ಅಥವಾ ಎತ್ತರ ಜಿಗಿತ ಈ ರೀತಿಯ ದೈಹಿಕ ಸಾಮರ್ಥ್ಯದ ಪರೀಕ್ಷೆ ಮಾಡಲಾಗುತ್ತದೆ.
3. ದೈಹಿಕ ಗುಣಮಟ್ಟ ಪರೀಕ್ಷೆ (PST): ಎತ್ತರ ಮತ್ತು ಎದೆ ಅಳತೆಯ ಪ್ರಕ್ರಿಯೆ ನಡೆಯುತ್ತದೆ.
4. ಸಂದರ್ಶನ (Interview): ಇದರಲ್ಲಿ ಅಂತಿಮ ಹಂತದ ಅರ್ಹತೆ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ?
ಇಷ್ಟೆಲ್ಲಾ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ಆಸಕ್ತ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ ಅಂದರೆ Ksp-Recruitment.in ಇದರ ಮೂಲಕ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು ಬನ್ನಿ ಹಾಗಿದ್ದರೆ ಬನ್ನಿ ಯಾವಾಗ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವ ಆರಂಭದ ದಿನಾಂಕವನ್ನು ಇನ್ನೂ ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಕೂಡ ಅದಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ. ಇದರ ಮಾಹಿತಿಯನ್ನು ತಿಳಿಯಲು ನೀವು ಇಲಾಖೆಯ ಅಧಿಕೃತ ಜಾಲತಾಣವನ್ನು ನಿಯಮಿತವಾಗಿ ಗಮನಿಸುತ್ತಿರಬೇಕು ಎಂದು ಹೇಳಲಾಗಿದೆ. ಇದನ್ನು ದಿನ ನಿತ್ಯ ನೀವು ಗಮನಿಸುತ್ತಿರಬೇಕು ಇದರಿಂದ ಯಾವಾಗ ಇಲಾಖೆಯಿಂದ ಅದಿಸೂಚನೆಗಳನ್ನು ಯಾವಾಗ ಹೊರ ಬೀಳುತ್ತೆ ಹಾಗೂ ಯಾವಾಗ ಅಪ್ಲೈ ಮಾಡಬೇಕು ಇವೆಲ್ಲ ನಿಮಗೆ ಗೊತ್ತಾಗುತ್ತೆ ಆಗ ನೀವು ಅರ್ಜಿ ಸಲ್ಲಿಸಬಹುದು.
ಕೊನೆಯದಾಗಿ ಹೇಳುವುದು ಏನೆಂದರೆ
ನಿಮಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ನುವ ಆಸೆ ಇದ್ದರೆ ಮೇಲೆ ಹೇಳಿರುವ ಎಲ್ಲಾ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ದಿನಾಂಕ ಪ್ರಕಟಿಸುವ ವರೆಗೂ ಕಾಯಬೇಡಿ ಈಗಲೇ ಯಾವೆಲ್ಲಾ ದಾಖಲೆಗಳು ಬೇಕು ಅಂದರೆ ನಿಮ್ಮ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, (Cast and income cirtificate) ಸೇರಿದಂತೆ ಏನೇನು ದಾಖಲೆಗಳು ಬೇಕು ಅದೆಲ್ಲ ರೆಡಿ ಇದೆಯಾ ಅಂತ ಪರಿಶೀಲಿಸಿಕೊಳ್ಳಿ.
ಯಾಕೆ ಇದನ್ನು ಹೇಳುತ್ತಿರುವುದು ಯಾಕೆ ಅಂದರೆ ಎಷ್ಟೋ ಜನ ಕಷ್ಟ ಪಟ್ಟು ಪರೀಕ್ಷೆಗಳನ್ನು ಬರೆದಿರುತ್ತಾರೆ ಪಾಸ್ ಕೂಡ ಆಗ್ತಾರೆ ಆದರೆ ಈ ಎಲ್ಲಾ ದಾಖಲೆಗಳು (Documents) ಸರಿ ಇಲ್ಲ ಎಂಬ ಕಾರಣಕ್ಕೆ ಕೆಲಸ ಕಳೆದುಕೊಳ್ತಾರೆ. ಹಾಗಾಗಿ ಇವಾಗಲೇ ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡಿ ಇಟ್ಕೊಳ್ಳಿ. ಯಾವಾಗ ವೆಬ್ಸೈಟ್ ಅಲ್ಲಿ ಅದಿಸೂಚನೆ ಪ್ರಕಟವಾಗುತ್ತದೆ ಯಾವಾಗ ಅರ್ಜಿ ಸಲ್ಲಿಸುವ ದಿನಾಂಕ ಪ್ರಕಟ ವಾಗುತ್ತದೆಯೋ ತಕ್ಷಣ ಅಪ್ಲೈ ಮಾಡಿ ಈ ಮೂಲಕ ಪೊಲೀಸ್ ಇಲಾಖೆಯಲ್ಲಿ ಕೆಲಸಮಾಡಬೇಕೆಂಬ ಕನಸು ಇದೆಯೋ ಇದರ ಮೂಲಕ ನೀವು ಅದನ್ನು ನನನು ಮಾಡಿಕೊಳ್ಳಬಹುದು.