2026 ಕರ್ನಾಟಕ ಬಜೆಟ್ ವಿಶೇಷತೆಗಳು||Karnataka Budget 2026

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಬಜೆಟ್ ಮಂಡನೆ ಆಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸತತ 17ನೇ ಬಾರಿಯ ದಾಖಲೆಯ ಬಜೆಟ್ ಮಂಡನೆ ಮಾಡಿದ್ದಾರೆ ಕರ್ನಾಟಕದಲ್ಲಿ ದೇವರಾಜ ಅರಸು ಅವರ ನಂತರ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದಾರೆ ಅನ್ನುವುದರ ಜೊತೆಗೆ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಎನ್ನುವ ಖ್ಯಾತಿ ಕೂಡ ಸಿದ್ದರಾಮಯ್ಯ ರವರದ್ದಾಗಿದೆ. ಈ ಬಾರಿಯ ಬಜೆಟ್ ಅಲ್ಲಿ ಸಾಮಾಜಿಕ ನ್ಯಾಯ ಅಭಿವೃದ್ಧಿ GST ಸುಧಾರಣೆಯ ಕಾರಣಕ್ಕೆ ರಾಜ್ಯಕ್ಕೆ ಉಂಟಾಗುತ್ತಿರುವ ಆರ್ಥಿಕ ಕೊರತೆಯನ್ನು ತುಂಬಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಹಾಗೆ ಈ ಬಾರಿಯೂ ಕೂಡ ಸರ್ಕಾರದ ಎಲ್ಲಾ ಯೋಜನೆಗೂ ಹಣ ಬೇಕಾಗುವಂತೆ ಸರ್ಕಾರದ ಸಾಲ 1.32 ಲಕ್ಷ ಕೋಟಿಯನ್ನು ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಆಗಿದ್ದರೆ ಈ ಬಾರಿಯ ರಾಜ್ಯ ಬಜೆಟ್ ವಿಶೇಷತೆಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ!

ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವವರ ಪಟ್ಟಿ

ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಎನ್ನುವ ಕೀರ್ತಿ ನಮ್ಮ ಸಿದ್ದರಾಮಯ್ಯನವರದು ಈ ಬಾರಿಯ ಬಜೆಟ್ ಮಂಡನೆ ಮಾಡುವದರ ಮೂಲಕ 17 ಬಾರಿ ಬಜೆಟ್ ಮಂಡನೆ ಮಾಡಿರುವ ಸಾಧನೆ ನಮ್ಮ ಮುಖ್ಯಮಂತ್ರಿ ಅವರದಾಗಿದೆ ಈ ದಾಖಲೆಯನ್ನು ಮುರಿಯಲು ಬೇರೆ ಮುಖ್ಯಮಂತ್ರಿಗೆ ಸಾಕಷ್ಟು ವರ್ಷಗಳೇ ಬೇಕಾಗಬಹುದು. ಹಾಗೆ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವವರ ಪಟ್ಟಿಯನ್ನು ನೋಡುವುದಾದರೆ ಸಿದ್ದರಾಮಯ್ಯನವರ ನಂತರ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆಯವರು ಇದ್ದಾರೆ ಅವರು ಒಟ್ಟು 13 ಬಜೆಟ್ ಗಳನ್ನು ಮಂಡನೆ ಮಾಡಿದ್ರು ಇದು 2023ರವರೆಗೆ ದಾಖಲೆಯಾಗಿ ಉಳಿದಿತ್ತು ಇನ್ನೂ 2021ರಲ್ಲಿ ತಮ್ಮ 8ನೇ ಬಜೆಟ್ ಮಂಡನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಈ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

2026-27ನೇ ಸಾಲಿನ ಬಜೆಟ್ ಮುಖ್ಯಾಂಶಗಳು

                  ಕರ್ನಾಟಕ ಬಜೆಟ್ 2026-27

               ಒಟ್ಟು ಬಜೆಟ್: ₹4,48,004 ಕೋಟಿ

      ರಾಜ್ಯದ ಆದಾಯ ಅಂದಾಜು: ₹3,38,000 ಕೋಟಿ

ಹಾಗಾಗಿ ರಾಜ್ಯದ ಆದಾಯಕ್ಕಿಂತ ಖರ್ಚು ಜಾಸ್ತಿ ಇರುವ ಕಾರಣ ಉಳಿದ ಹಣವನ್ನು ಸಾಲದ ರೂಪದಲ್ಲಿ ಪಡೆಯುತ್ತಾರೆ ಇನ್ನೂ ಈ ಬಾರಿಯ ಸಾಲ ರಾಜ್ಯದ ನಿವ್ವಳ ಲಾಭದ ಶೇಕಡಾ 2.9 ರಷ್ಟು ಆಗಲಿದೆ, ಇದುವರೆಗೆ ಕರ್ನಾಟಕ ರಾಜ್ಯದ ಒಟ್ಟು ಸಾಲ ಎಷ್ಟು ಎನ್ನುವುದನ್ನು ನೋಡುವುದಾದರೆ ₹8,24,389 ಕೋಟಿಗಳು ಸಾಲ ಇದೆ ಇದು ನಮ್ಮ ರಾಜ್ಯದ ಲಾಭಕ್ಕಿಂತ 24.94% ರಷ್ಟು ನಾವು ಸಾಲವನ್ನು ಹೊಂದಿದ್ದೇವೆ

ರಾಜ್ಯದ ಬಜೆಟ್ ಅಲ್ಲಿ ಈ ಭಾರಿಯ ಆದಾಯದ ಮೂಲಗಳು

ರಾಜ್ಯಕ್ಕೆ ದೊಡ್ಡ ಆದಾಯದ ಮೂಲ ಎಂದರೆ ಅದು TAX ಅಂದರೆ ತೆರಿಗೆಯ ಮೂಲಕ ದೊಡ್ಡ ಪ್ರಮಾಣದ ಆದಾಯ ರಾಜ್ಯಕ್ಕೆ ಬರುತ್ತಿದೆ ಇದನ್ನು ಆದಾಯದ ಶೇಕಡಾವಾರು ಪ್ರಮಾಣದಲ್ಲಿ ನೋಡುವುದಾದರೆ ಇದು ರಾಜ್ಯದ ಆದಾಯದ 49% ರಷ್ಟು ಬರುತ್ತಿದೆ ₹1,65,620 ಲಕ್ಷ ಕೋಟಿ ಅಷ್ಟು ಹಣ GST excise ಹಾಗೂ ಇನ್ನಿತರ ತೆರಿಗೆಗಳ ಮೂಲಕ ಸರ್ಕಾರ ಹಣಗಳಿಸುತ್ತಾ ಇದೆ ಹಾಗೆ 16ನೇ ಹಣಕಾಸು ಆಯೋಗದ ಪ್ರಕಾರ ಕೇಂದ್ರ ತೆರಿಗೆ ಆದಾಯದಿಂದ ₹47,320 ಸಾವಿರ ಕೋಟಿ ರೂಪಾಯಿ ಒಟ್ಟು ನಮ್ಮ ರಾಜ್ಯದ ಆದಾಯ ಏನಿದೆ ಅದರ ಶೇಕಡಾ 14% ಅಷ್ಟು ಕೇಂದ್ರ ತೆರಿಗೆಯ ಮೂಲಕ ಬರ್ತಾ ಇದೆ ಇನ್ನು ಕೇಂದ್ರದ ಅನುದಾನಗಳು ₹13520 ಸಾವಿರ ಕೋಟಿಗಳಷ್ಟು ಇರುತ್ತದೆ ಇದು ಶೇಕಡ 4% ಅಂತ ಹೇಳ್ತಾರೆ ರಾಜ್ಯದ ತೆರಿಗೆಯೇತರ ಆದಾಯಗಳು ಎಂದರೆ ಕಟ್ಟಡದ ಬಾಡಿಗೆಗಳು ಮೈನಿಂಗ್ ಇಂದ ಬರುವ ಆದಾಯಗಳು ಈ ತರಹದ ಆದಾಯಗಳು ಇದು ಕೂಡ 4% ರಷ್ಟು ಎಂದರೆ ₹13520 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗುತ್ತಿದೆ ಇದಲ್ಲದೆ ರಾಜ್ಯ ಸರ್ಕಾರ ಸಾಲಗಳ ಮೂಲಕ ₹1,32,000 ಸಾವಿರ ಕೋಟಿಗಳ ಮೂಲಕ ಸಂಗ್ರಹಣೆ ಮಾಡುತ್ತಿದೆ ಇದು ಒಟ್ಟು ಬಜೆಟ್ನ ಶೇಕಡಾ 29% ರಷ್ಟು ಆಗಿದೆ

ಹಣವನ್ನು ಎಲ್ಲಿ ಎಲ್ಲಿ ಖರ್ಚುಮಾಡುತ್ತಾರೆ

ಇನ್ನು ಈ ಹಣವನ್ನು ಸಾಲ ಮರುಪಾವತಿಗಾಗಿ ಅಂದರೆ ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಮಾಡಿರುವ ಸಾಲಗಳ ಮರುಪಾವತಿ ಮತ್ತು ಅದರ ಬಡ್ಡಿ ಕಟ್ಟುವ ಸಲುವಾಗಿ ₹89,601 ಸಾವಿರ ಕೋಟಿಯಷ್ಟು ಹಣ ಖರ್ಚಾಗುತ್ತೆ, ಹಾಗೂ ಇತರೆ ಸಾಮಾನ್ಯ ಖರ್ಚುಗಳು ಎಂದರೆ ವೇತನಗಳು (Salary) ಆಡಳಿತದ ಖರ್ಚುಗಳು ಇದಕ್ಕೆ ₹80,641 ಸಾವಿರ ಕೋಟಿ ಖರ್ಚು ಆಗುತ್ತೆ, ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳು ಅಂದರೆ ಈ ಉಚಿತ ಗ್ಯಾರಂಟಿಗಳು ಪಿಂಚಣಿಗಳು ಈ ತರಹದ ಖರ್ಚುಗಳಿಗೆ ₹67,201 ಸಾವಿರ ಕೋಟಿಗಳು ಖರ್ಚು ಮಾಡಿದರೆ, ಇನ್ನು ಈ ಕೈಗಾರಿಕೆ, ವಾಣಿಜ್ಯ, ಮುಂತಾದ ಆರ್ಥಿಕ ಸೇವೆಗಳಿಗೆ ಆಗುವ ಖರ್ಚು ₹62,721 ಕೋಟಿ ರೂಪಾಯಿಗಳು ಇನ್ನೂ ಗ್ರಾಮೀಣ ಅಭಿವೃದ್ದಿ ಕೃಷಿ, ನೀರಾವರಿ, ಮುಂತಾದ ಯೋಜನೆಗಳಿಗೆ ಈ ಬಾರಿ 13% ಅಂದ್ರೆ ₹58,241 ಸಾವಿರ ಕೋಟಿ ರೂಪಾಯಿಗಳಷ್ಟು ಮೀಸಲಿಡಲಾಗಿದೆ, ಶಿಕ್ಷಣಕ್ಕಾಗಿ ಶೇಕಡ 10% ಅಷ್ಟು ಮೀಸಲಿಟ್ಟಿದ್ದಾರೆ ₹44,800 ಸಾವಿರ ಕೋಟಿ ರೂಪಾಯಿಗಳನ್ನು ಶಾಲೆಗಳ ಅಭಿವೃದ್ಧಿ ವಿದ್ಯಾರ್ಥಿಗಳಿಗೆ ನೆರವು ವಿದ್ಯಾರ್ಥಿ ವೇತನಗಳು ಈ ಯೋಜನೆಗಳಿಗೆ ಮೀಸಲಿಡಲಾಗಿದೆ.

ಇನ್ನು ಆರೋಗ್ಯ ಇಲಾಖೆ ಅಂದರೆ ಆಸ್ಪತ್ರೆಗಳ ಅಭಿವೃದ್ಧಿ ಔಷಧಿಗಳು ಚಿಕಿತ್ಸೆ ಹೀಗೆ ಮುಂತಾದ ಖರ್ಚಿಗಾಗಿ ಶೇಕಡಾ 4% ರಷ್ಟು ಅಂದರೆ ₹17,920 ಸಾವಿರ ಕೋಟಿ ರೂಪಾಯಿಗಳಷ್ಟು ಮೀಸಲಿಡಲಾಗಿದೆ ಹಾಗೂ ಇತರೆ ಸಾಮಾಜಿಕ ಯೋಜನೆಗಳು, ಮಹಿಳಾ ಕಲ್ಯಾಣ, ಬಲಹೀನ ವರ್ಗಗಳ ಅಭಿವೃದ್ಧಿ ಈ ಯೋಜನೆಗಳಿಗಾಗಿ ₹13,440 ಸಾವಿರ ಕೋಟಿಗಳನ್ನು ಮೀಸಲಿಡಲಾಗಿದೆ. ಹಾಗೂ ನೀರು ಸರಬರಾಜು, ಸ್ವಚ್ಛತೆಯ ಕಾರ್ಯಕ್ರಮಗಳಿಗೆ ಕೂಡ ₹13,440 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಗ್ಯಾರಂಟಿಗಳಿಗೆ ಖರ್ಚಾಗುವ ಹಣ

ಇನ್ನು ಈ ಸರ್ಕಾರದ ಗ್ಯಾರಂಟಿಗಳಿಗೆ ಖರ್ಚಾಗುವ ಹಣವನ್ನು ನೋಡುವುದಾದರೆ ಗೃಹಲಕ್ಷ್ಮಿ ಯೋಜನೆ ಅಂದರೆ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿ ಗಳು ಏನು ಕೊಡಲಾಗುತ್ತಿದೆ ಅದಕ್ಕಾಗಿ ₹28,608 ಸಾವಿರ ಕೋಟಿಗಳಷ್ಟು ಹಣ ಖರ್ಚಾಗುತ್ತೆ, ಇನ್ನು ಶಕ್ತಿಯೋಜನೆ ಉದ್ಯೋಗ ಹಾಗೂ ಪಿಂಚಣಿ ಸೇರಿದ ಹಾಗೆ 5 ಗ್ಯಾರಂಟಿಗಳು ಯೋಜನೆಗಳಿಗಾಗಿ ₹51,034 ಸಾವಿರ ಕೋಟಿಗಳಷ್ಟು ಇಲ್ಲಿ ಖರ್ಚು ಮಾಡಲಾಗುತ್ತಿದೆ,

ರಾಜ್ಯ ಸರ್ಕಾರ ಸಾಲ ಪಡೆಯುವ ಮಾರ್ಗಗಳು

ಇನ್ನು ಖರ್ಚಿಗಿಂತ ಆದಾಯ ಏನು ಕಡಿಮೆ ಇದೆ ಅದನ್ನು ಸರಿದೂಗಿಸಲು ರಾಜ್ಯ ಸರ್ಕಾರ ₹1,32,000 ಸಾವಿರ ಕೋಟಿಗಳಷ್ಟು ಸಾಲ ಏನು ಮಾಡಲಾಗುತ್ತಿದೆ ಅದನ್ನು ಓಪನ್ ಮಾರ್ಕೆಟ್ ಬೋರ್ರೋಇಂಗ್ಸ್ ಇಂದ ₹1,22,340 ಸಾವಿರ ತರಲಾಗುತ್ತದೆ ಇನ್ನೂ ಕೇಂದ್ರ ಸರ್ಕಾರದಿಂದ ₹6,810 ಸಾವಿರ ಕೋಟಿಗಳನ್ನು ಸಾಲವಾಗಿ ಪಡೆಯುತ್ತಾರೆ ಹಾಗೆ LIC, NSSF, NCDC, RIDF, ಮುಂತಾದವುಗಳಿಂದ ₹2,850 ಸಾವಿರ ಕೋಟಿ ಗಳಷ್ಟು ಸಾಲ ಮಾಡಿದರೆ ಇತರ ಮೂಲಗಳಿಂದ ಸುಮಾರು ₹190 ಕೋಟಿ ರೂಪಾಯಿಗಳಷ್ಟು ಸಾಲವನ್ನು ಸರ್ಕಾರ ಈ ಬಾರಿ ಪಡೆದುಕೊಳ್ಳುತ್ತದೆ. ಇದರ ಒಟ್ಟು ಅಂದಾಜು ಮೊತ್ತ ₹1,32,000 ಕೋಟಿಗಳು

ಕೆರೆ ಜಲಾಶಯಗಳ ಅಭಿವೃದ್ಧಿ

ಇನ್ನು ಈ ಬಾರಿಯ ಬಜೆಟ್ ಅಲ್ಲಿ ವಿಶೇಷ ಎಂಬಂತೆ ಕೃಷ್ಣ ಮೇಲ್ದಂಡೆ ಯೋಜನೆಯ ಭೂಸ್ವಾದೀನ ಪ್ರಕ್ರಿಯೆಯನ್ನು ಆರಂಭ ಮಾಡುವುದಾಗಿ CM ಸಿದ್ದರಾಮಯ್ಯ ರವರು ಹೇಳಿದ್ದಾರೆ. ಅಲ್ಲಿ ಕುಷ್ಕಿ ಜಮೀನಿಗೆ ಪ್ರತಿ ಎಕರೆಗೆ ₹30 ಲಕ್ಷ ಮತ್ತು ತರಿ ಜಮೀನಿಗೆ ಪ್ರತಿ ಎಕರೆಗೆ ₹40 ಲಕ್ಷ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನಿಗದಿ ಪಡಿಸಲಾಗಿದೆ. ಇನ್ನು ತುಂಗಭದ್ರಾ ಜಲಾಶಯದ 33 ಹೊಸ ಗೇಟುಗಳ ಅಳವಡಿಕೆಯ ಬಗ್ಗೆ ಈ ಬಜೆಟ್ ಅಲ್ಲಿ ತಿಳಿಸಲಾಗಿದೆ. ಇನ್ನು ಟಿಬಿ ಡ್ಯಾಂನ ಸಾಮರ್ಥ್ಯವನ್ನು ಹೆಚ್ಚಿಸಲು ಸಮತೋಲನ ಜಲಾಶಯವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ, ಭದ್ರ ಮೇಲ್ದಂಡೆ ಯೋಜನೆಯಿಂದ 157 ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತೇ ಎಂದು ತಿಳಿಸಿದ್ದಾರೆ. ಇನ್ನು ಕೊರಟಗೆರೆ ತಾಲೂಕಿನಲ್ಲಿ 1.2 ಟಿಎಂಸಿ ಸಾಮರ್ಥ್ಯದ ಜಲಾಶಯ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ, ₹237 ಕೋಟಿ ರೂಪಾಯಿಗಳ ವೆಚ್ಚದಲ್ಲಿ 164 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕೂಡ ಇಲ್ಲಿ ಅನಾವರಣ ಗೊಳಿಸಲಾಗಿದೆ. ವೃಷಭಾವತಿ ವ್ಯಾಲಿಯಲ್ಲಿ ₹650 ಕೋಟಿ ರೂಪಾಯಿ ಖರ್ಚು ಮಾಡಿ 119 ಕೆರೆಗಳನ್ನು ಭರ್ತಿ ಮಾಡುವ ಯೋಜನೆಯನ್ನು ಮಾಡಿದ್ದಾರೆ

ರಾಜ್ಯದ ಒಳ ಅಭಿವೃದ್ಧಿಗೆ

ಇನ್ನು ಇಂಧನ ಇಲಾಖೆಗೆ ₹29,947 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಡಲಾಗುತ್ತಿದೆ ನಗರಾಭಿವೃದ್ದಿ ಮತ್ತು ವಸತಿ ಯೋಜನೆಗೆ ₹22,203 ಸಾವಿರ ಕೋಟಿ ರೂಪಾಯಿಗಳನ್ನು ಈ ಬಜೆಟ್ ಅಲ್ಲಿ ಸರ್ಕಾರ ಮೀಸಲಿಡುತ್ತಿದೆ, ಹಾಗೆ ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ₹23,100 ಕೋಟಿ ರೂಪಾಯಿಗಳು, ಕಂದಾಯ ಇಲಾಖೆಗೆ ₹19,843 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ ₹18,642 ಸಾವಿರ ಕೋಟಿ, ಲೋಕೋಪಯೋಗಿಗೆ ₹11,424 ಸಾವಿರ ಕೋಟಿ, ಆಹಾರ ಇಲಾಖೆಗೆ ₹7,942 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ, ಕೃಷಿ ಮತ್ತು ತೋಟಗಾರಿಕೆಗೆ ₹8,373 ಸಾವಿರ ಕೋಟಿ, ಪಶು ಸಂಗೋಪನೆ ಮೀನುಗಾರಿಕೆ ಇಲಾಖೆ ₹4,084 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಇನ್ನು ಇತರೆ ಇಲಾಖೆಗಳಿಗೆ ಒಟ್ಟು ₹1,72,757 ಸಾವಿರ ಕೋಟಿ ಅಷ್ಟು ಹಣವನ್ನು ಅನುದಾನದ ರೂಪದಲ್ಲಿ ನೀಡಲಾಗುತ್ತಿದೆ.

16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಹೌದು ಇದೆ ವೇಳೆ ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ಈ ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಮೊಬೈಲ್ ಬಳಕೆ ಹೆಚ್ಚು ದುಷ್ಪರಿಣಾಮಗಳನ್ನು ಬೀರೋದನ್ನು ತಡೆಯುವುದಕ್ಕಾಗಿ 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧ ಮಾಡಲಾಗುತ್ತಿದೆ, ಹಾಗೆ ವಿದ್ಯಾರ್ಥಿಗಳ ಒತ್ತಡವನ್ನು ನಿವಾರಿಸಿ ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸುವುದಕ್ಕಾಗಿ 204 BRC ಕೇಂದ್ರಗಳಲ್ಲಿ ಪ್ರತಿ ಕೇಂದ್ರದಲ್ಲೂ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಿರುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ ಇದು ಸೈಕಾಲಜಿ ಅಧ್ಯಯನ ಮಾಡಿರುವ ಅರ್ಹ ಸಲಹೆಗಾರರಿಗೆ ಉದ್ಯೋಗವನ್ನು ಸೃಷ್ಠಿ ಮಾಡಿದ ಹಾಗೆ ಆಗುತ್ತದೆ

ರೈತರಿಗಾಗಿ ವಸುಧಾಮೃತ ಯೋಜನೆ

ರೈತರಿಗೋಸ್ಕರ ಸರ್ಕಾರ ಈ ವಸುಧಾಮೃತ ಯೋಜನೆಯನ್ನು ಜಾರಿಗೆ ತರಲು ಚಿಂತನೆ ಮಾಡಿದೆ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ, ಮುಂದಿನ 3 ವರ್ಷಗಳಲ್ಲಿ ಸಸ್ಯ ಸಂಜೀವಿನಿ ಯೋಜನೆಯನ್ನು ಕೂಡ ಜಾರಿ ಮಾಡಲಾಗುತ್ತೆ ರೈತರಿಗೆ ಕೃಷಿಯ ಕುರಿತಾದ ಮಾಹಿತಿಯನ್ನು ತಲುಪಿಸಲು AI ತಂತ್ರಜ್ಞಾನ ಆದರಿತ ರೈತ ಕರೆಕೇಂದ್ರ ಆರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಪಶು ವೈದ್ಯಕೀಯ ಸಂಸ್ಥೆಗಳಿಗೆ 100 ಹೊಸ ಕಟ್ಟಡಗಳ ನಿರ್ಮಾಣ

ಹೌದು ಪಶು ವೈದ್ಯಕೀಯ ಸಂಸ್ಥೆಗಳಿಗೆ ಹೊಸ 100 ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಬೆಳಗಾವಿ, ಕಲಬುರ್ಗಿಗಳಲ್ಲಿ ಕುರಿ ಸಾಗಾಣಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ, ಹಸು ಎಮ್ಮೆಗಳನ್ನು  ಖರೀದಿಸಲು ಸುಮಾರು ₹40 ಕೋಟಿ ರೂಪಾಯಿಗಳ ಪ್ರೋತ್ಸಾಹ ಹಣವನ್ನು ಮೀಸಲಿಟ್ಟಿದ್ದಾರೆ

ಇನ್ನು ಅಡಿಕೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆ ನಿವಾರಣೆಗೆ ₹10 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಎಲೆ ಚುಕ್ಕಿ ಹಳದಿಚುಕ್ಕಿ ರೋಗ ನಿವಾರಣೆಗೆ ಹಾಗೂ ತೆಂಗು ಬೆಳೆಗಾರರ ಸಮಸ್ಯೆಯನ್ನು ನಿವಾರಿಸುವುದಕ್ಕೆ ₹10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯರವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿ

ಆರೋಗ್ಯ ಇಲಾಖೆಯ ಮೂಲ ಸೌಕರ್ಯ ಅಭಿವೃದ್ಧಿಗೆ ₹900 ಕೋಟಿ ರೂಪಾಯಿ ಹಣಗಳನ್ನು ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ trama ಕೇರ್ ಸೆಂಟರ್ ಗಳನ್ನು ತೆರೆಯಲಾಗುತ್ತದೆ ಐಸಿಯು ಉಪಕರಣಗಳನ್ನು ಉತ್ತಮಗೊಳಿಸಲು ₹45 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವುದಕ್ಕೆ ಪೌಷ್ಟಿಕ ಪುನಶ್ಚೇತನ ಕೇಂದ್ರವನ್ನು ತೆರೆಯಲಾಗುತ್ತದೆ 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್ನುಗಳು ಮಾರಣಾಂತಿಕ ರೋಗಿಗಳಿಗೆ ಕೇರಳ ಮಾದರಿ ಗೃಹಧಾರಿತ ಆರೈಕೆ ವ್ಯವಸ್ಥೆ ಹಾಗೆ ಇಸ್ಕಾನ್ ಮೂಲಕ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಆಹಾರ ಪೂರೈಕೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತೆ ಎಂದು ಬಜೆಟ್ಟಿನಲ್ಲಿ ಘೋಷಿಸಲಾಗಿದೆ ಹಾಗೆ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2500 ಹುದ್ದೆಗಳ ಶೀಘ್ರ ಬರ್ತಿಗೆ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ

Leave a Comment