iPhone vs ಇತರೆ ಕಂಪನಿ ಮೊಬೈಲ್‌ಗಳು: ಯಾವುದು ನಿಜವಾಗಿಯೂ ಬೆಸ್ಟ್? 2026 ರಲ್ಲಿ

ಇಂದಿನ ಡಿಜಿಟಲ್ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳ ಫೋನ್‌ಗಳು ಲಭ್ಯವಿದೆ, ಅದರಲ್ಲೂ apple ಐ ಫೋನ್ (iPhone) ಒಂದು ಪ್ರೀಮಿಯಂ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಇನ್ನೊಂದು ಕಡೆ ಸ್ಯಾಮ್ಸಂಗ್, ಒನ್ ಪ್ಲಸ್ (One Plus), ವಿವೋ (Vivo), ಒಪ್ಪೋ (Oppo), Xiaomi ಮುಂತಾದ ಕಂಪನಿಗಳ ಫೋನ್‌ಗಳು ಕೂಡ ಉತ್ತಮ ಫೀಚರ್ಸ್ ಗಳೊಂದಿಗೆ ಕಡಿಮೆ ಬೆಲೆಯಲ್ಲಿ ಬರುತ್ತಿವೆ. ಆದರೂ iPhone ಅಷ್ಟು ದುಬಾರಿ ಇದ್ದರೂ ಜನ ಇದನ್ನು ಯಾಕೆ ಖರೀದಿಸುತ್ತಾರೆ, ಮತ್ತು ಇತರೆ ಕಂಪನಿಗಳ ಫೋನ್‌ಗಳು ಮತ್ತು ಐ ಫೋನ್ ಗಳ ನಡುವೆ ಏನು ವ್ಯತ್ಯಾಸ ಇದೆ? ಯಾವುದು ಉತ್ತಮ? ಎಂಬ ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಇರುತ್ತವೆ.

ಹಾಗಾಗಿ iPhone ಮತ್ತು ಇತರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ಸರಳವಾಗಿ ತಿಳಿಯೋಣ ಬನ್ನಿ!

1. ಬೆಲೆ ವ್ಯತ್ಯಾಸ

ಮೊದಲಿಗೆ ಬರುವುದು ಎಂದರೆ ಬೆಲೆಯ ವ್ಯತ್ಯಾಸ. iPhone ಫೋನ್‌ಗಳು ಸಾಮಾನ್ಯವಾಗಿ ದುಬಾರಿ ಇರುತ್ತವೆ. ಆಪಲ್ iPhone ಪ್ರೀಮಿಯಂ ಬ್ರ್ಯಾಂಡ್  ಆಗಿರುವುದರಿಂದ ಅದರ ಬೆಲೆ ಹೆಚ್ಚಿರುತ್ತದೆ. ಅದೆ ನೀವು ಇತರೆ ಬೇರೆ ಕಂಪನಿಗಳ ಮೊಬೈಲುಗಳು 8,000 ರಿಂದಲೇ ಆರಂಭವಾಗುತ್ತವೆ, ₹15,000 – ₹30,000 ರಲ್ಲಿ ಉತ್ತಮ ಫೋನ್‌ಗಳು ಸಿಕ್ಕರೆ, ₹60,000 ಮೇಲೆ ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳು ಕೂಡ ದೊರೆಯುತ್ತವೆ. ನಿಮ್ಮ ಬಜೆಟ್ ಕಮ್ಮಿ ಇದ್ದರೆ ಮಾಮೂಲಿ ಆಂಡ್ರಾಯ್ಡ್ ಮೊಬೈಲ್ ಗಳೆ ಉತ್ತಮ ಆಯ್ಕೆ. ಆದರೆ ನಿಮ್ಮ ಬಜೆಟ್ ಜಾಸ್ತಿ ಇದ್ದು ಪ್ರೀಮಿಯಂ ಬ್ರ್ಯಾಂಡ್ ವ್ಯಾಲ್ಯೂ ಅಲ್ಲಿ ಮೊಬೈಲ್ ಬೇಕು ಎಂದರೆ iPhone ತಗೊಂಬೋದು

2. ಆಪರೇಟಿಂಗ್ ಸಿಸ್ಟಮ್

ಇನ್ನು ಆಪರೇಟಿಂಗ್ ಸಿಸ್ಟಮ್ ವಿಚಾರಕ್ಕೆ ಬಂದರೆ, ಐ ಫೋನ್ ಅಲ್ಲಿ Apple ಕಂಪನಿಯ iOS ಆಪರೇಟಿಂಗ್ ಸಿಸ್ಟಮ್ ಬಳಸಲಾಗುತ್ತದೆ ಇತರೆ ಕಂಪನಿಗಳ ಫೋನ್‌ಗಳಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬಳಸಲಾಗುತ್ತದೆ. ಬನ್ನಿ ಈ ಕಂಪನಿಯ ಆಪರೇಟಿಂಗ್ ಸಿಸ್ಟಮ್ ಅಲ್ಲಿರುವ ವಿಶೇಷತೆಗಳನ್ನು ತಿಳಿದುಕೊಳ್ಳೋಣ.

(iOS vs Android)

ಐ ಫೋನ್ (iPhone iOS) ನ ವಿಶೇಷತೆಗಳು

ತುಂಬಾ ಸ್ಮೂತ್ ಮತ್ತು ಫಾಸ್ಟ್ ಪರ್ಫಾರ್ಮೆನ್ಸ್ ಅನ್ನು ಐ ಫೋನ್ ಅಲ್ಲಿ ಕಾಣಬಹುದು,ಸ್ಕ್ರೀನ್ ಸ್ಕ್ರೋಲ್ ಮಾಡುವಾಗ ಇದರ ಸ್ಮೂತ್ ಸಿಸ್ಟಮ್ ನಿಮಗೆ ಉತ್ತಮ ಅನುಭವ ನೀಡುತ್ತದೆ. ಲ್ಯಾಗ್ ಆಗುವುದು ಕಡಿಮೆ,  ಸುರಕ್ಷತೆ ಹೆಚ್ಚಿರುತ್ತದೆ ಐ ಫೋನ್ ತೆಗೆದುಕೊಳ್ಳುವವರು ಸುರಕ್ಷತೆಯ ವಿಚಾರಕ್ಕೆ ಇದನ್ನು ಆಯ್ಕೆ ಮಾಡುತ್ತಾರೆ, ಅಪ್ಲಿಕೇಶನ್ ಗಳು ಚೆನ್ನಾಗಿ optimize ಆಗಿರುತ್ತವೆ.

ಆಂಡ್ರಾಯ್ಡ್ ಫೋನ್ ವಿಶೇಷತೆಗಳು

ಹೆಚ್ಚು ಕಸ್ಟಮೈಜೇಷನ್ ಸೌಲಭ್ಯ ಸಿಗುತ್ತವೆ, ನಿಮಗೆ ಇದರಲ್ಲಿ ವಿಭಿನ್ನ ಬ್ರ್ಯಾಂಡ್ ಗಳ ಆಯ್ಕೆ ಕೂಡ ನಿಮಗೆ ಇರುತ್ತದೆ, ಕಡಿಮೆ ಬಜೆಟ್ ಇಂದ ಪ್ರೀಮಿಯಂ ಬಜೆಟ್ ಎಲ್ಲಾ ಬೆಲೆಗಳಲ್ಲು ಆಂಡ್ರಾಯ್ಡ್ ಲಭ್ಯವಿರುತ್ತವೆ ಒಟ್ಟಿನಲ್ಲಿ ಹೇಳುವುದಾದರೆ, iOS ಸರಳ ಮತ್ತು ಸುರಕ್ಷತೆಯನ್ನು ನೀಡಿದರೆ, ಆಂಡ್ರಾಯ್ಡ್ ನಿಮಗೆ ಹೆಚ್ಚು ಸ್ವಾತಂತ್ರ್ಯ ಮತ್ತು ವಿವಿಧ ಆಯ್ಕೆಯನ್ನು ನೀಡುತ್ತದೆ.

3. ಕ್ಯಾಮೆರಾದ ಗುಣಮಟ್ಟ

ಈಗಿನ ಕಾಲದಲ್ಲಿ ಯುವುದೇ ಸ್ಮಾರ್ಟ್ ಫೋನ್ ಖರೀದಿಮಾಡಲು ಹೋದರು ಮೊದಲು ಎಲ್ಲಾ ನೋಡುವುದು ಕ್ಯಾಮೆರಾದ ಗುಣಮಟ್ಟ. ಆದರಿಂದ ಬನ್ನಿ ಆಪಲ್ ಕಂಪನಿಯ ಸ್ಮಾರ್ಟ್ ಫೋನಿಗೂ, ಬೇರೆ ಕಂಪನಿಯ ಸ್ಮಾರ್ಟ್ ಫೋನಿಗೂ ಇರುವ ವ್ಯತ್ಯಾಸ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಆಪಲ್ iPhone ಕ್ಯಾಮೆರಾ ವಿಶೇಷತೆಗಳು

ವಿಡಿಯೋ ರೆಕಾರ್ಡಿಂಗ್ ಮಾಡಲು ಅತ್ಯುತ್ತಮ (Natural) ಕಲರ್ ರಿಯಲಿಸ್ಟಿಕ್ ಆದ ಕಲರ್ ಸ್ಟೇಬಲ್ ಆದ ಫೋಟೋಗಳನ್ನು ಇವು ತೆಗೆದುಕೊಡುತ್ತವೆ

ಆಂಡ್ರಾಯ್ಡ್ ಕ್ಯಾಮೆರಾದ ವಿಶೇಷತೆಗಳು

ಹೆಚ್ಚಿನ ಮೆಗಾಪಿಕ್ಸೆಲ್ ದೊರೆಯುತ್ತವೆ, ವಿಭಿನ್ನ ಕ್ಯಾಮೆರಾ ಮೂಡ್ ಗಳು ಕೂಡ ನಿಮಗೆ ಲಭ್ಯವಿರುತ್ತವೆ, AI ಎಡಿಟಿಂಗ್ ಆಯ್ಕೆಗಳನ್ನು ಕೂಡ ಇದರಲ್ಲಿ ಕಾಣಬಹುದು, ಕೆಲವು ಆಂಡ್ರಾಯ್ಡ್ ಫೋನ್‌ಗಳು ಕ್ಯಾಮೆರಾದ ವಿಚಾರಕ್ಕೆ ಬಂದರೆ iPhone ಗಿಂತಲೂ ಉತ್ತಮವಾದ ಗುಣಮಟ್ಟವನ್ನು ಹೊಂದಿರುತ್ತದೆ. ವಿಶೇಷವಾಗಿ ಸ್ಯಾಮ್ಸಂಗ್ ಮತ್ತು ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಗಳು.

4. ಸುರಕ್ಷತೆ ವಿಚಾರದಲ್ಲಿ ಯಾವುದು ಬೆಸ್ಟ್

ಇನ್ನು ನೀವು ಸುರಕ್ಷತೆ ವಿಚಾರಕ್ಕೆ ಬಂದರೆ iPhone ಮೊದಲ ಆದ್ಯತೆ ಪಡೆಯುತ್ತದೆ. ಬನ್ನಿ ಈಗ ಐ ಫೋನ್ ಮತ್ತು ಆಂಡ್ರಾಯ್ಡ್ ಈ ಕಂಪನಿಗಳ ಮೊಬೈಲ್ ಗಳಲ್ಲಿ ಇರುವ ಸುರಕ್ಷತೆ ಗಳ ಬಗ್ಗೆ ತಿಳಿಯೋಣ

ಐ ಫೋನ್ (iPhone) ಅಲ್ಲಿರುವ ಸುರಕ್ಷತೆ

ಐ ಫೋನಿನಲ್ಲಿ App ಸ್ಟೋರ್ ನಲ್ಲಿ ಸಿಗುವ ಅಪ್ಲಿಕೇಶನ್ ಗಳನ್ನು ಮಾತ್ರ ನೀವು ಡೌನ್ಲೋಡ್ ಮಾಡಬಹುದು ಇದರಿಂದ ವೈರಸ್ ಅಟ್ಯಾಕ್ ಆಗುವ ಸಂಭವ ತೀರ ಕಮ್ಮಿ ಇರುತ್ತದೆ, ಗೌಪ್ಯತೆ ನೀತಿ (Pravicy policy) ಇದರಲ್ಲಿ ಹೆಚ್ಚು ಅಂತಾನೆ ಹೇಳಬಹುದು

  ಆಂಡ್ರಾಯ್ಡ್ ಫೋನಿನಲ್ಲಿ ಇರುವ ಸುರಕ್ಷತೆ

ಪ್ಲೇ ಸ್ಟೋರ್ ಇಂದ ಆಚೆಗೂ ನೀವು ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಬಹುದು ಇದರಿಂದ ಕೆಲವು ವೈರಸ್ ಅಟ್ಯಾಕ್ ಆಗಬಹುದು. ಇದರಿಂದ ನಿಮ್ಮ ಮೊಬೈಲ್ ಹ್ಯಾಕಿಂಗ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರಿಂದ ಗೌಪ್ಯತೆ (Pravaicy) ದೃಷ್ಟಿಯಲ್ಲಿ ನೋಡುವುದಾದರೆ ಐಫೋನ್ (iPhone) ನಿಮಗೆ ಹೆಚ್ಚಿನ ಸುರಕ್ಷಿತೆಯನ್ನು ಒದಗಿಸುತ್ತದೆ.

5. ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯ

ಇನ್ನು ಸ್ಮಾರ್ಟ್ ಪೋನ್ ಗೆ ಬ್ಯಾಟರಿ ಬ್ಯಾಕ್ ಅಪ್ ಮತ್ತು ಚಾರ್ಜಿಂಗ್ ವೇಗವಾಗಿ ಇರುವುದು ಅತಿ ಮುಖ್ಯ ಆಗಾಗಿ ಬನ್ನಿ ಇವುಗಳ ಬ್ಯಾಟರಿ ಮತ್ತು ಚಾರ್ಜಿಂಗ್ ಗಳ ವ್ಯತ್ಯಾಸಗಳನ್ನು ತಿಳಿಯೋಣ.

ಸಾಮಾನ್ಯವಾಗಿ ಆಂಡ್ರಾಯ್ಡ್ ಫೋನ್ ಗಳಲ್ಲಿ  5000mAh ಅಥವಾ ಅದಕ್ಕಿನ ಹೆಚ್ಚಿನ ಬ್ಯಾಟರಿಯನ್ನು ಹೊಂದಿರುತ್ತದೆ. ಫಾಸ್ಟ್ ಚಾರ್ಜಿಂಗ್ ನಿಮಗೆ (30W, 60W, 100W) ವರೆಗಿನ ಚಾರ್ಜಿಂಗ್ ವೇಗವನ್ನು ಹೊಂದಿರುತ್ತದೆ. ಇನ್ನು ಐ ಫೋನ್ (iPhone) ಬ್ಯಾಟರಿ ವಿಚಾರಕ್ಕೆ ಬಂದರೆ ಕಡಿಮೆ mAh ಬ್ಯಾಟರಿ ಇದ್ದರೂ ಆಪ್ಟಿಮೈಸ್ ಉತ್ತಮವಾಗಿರುತ್ತದೆ. ಕಡಿಮೆ ಚಾರ್ಜಿಂಗ್ ಸ್ಪೀಡ್ ಅನ್ನು ಹೊಂದಿರುತ್ತದೆ ಹೆಚ್ಚಿನ ಬ್ಯಾಟರಿ ಕ್ಯಾಪಾಸಿಟಿಯಲ್ಲಿ ಆಂಡ್ರಾಯ್ಡ್ ಫೋನುಗಳು ಹೆಚ್ಚಿನ ಅಂಕ ಪಡೆಯುತ್ತದೆ. ಆದರೆ ಬ್ಯಾಟರಿ ಬ್ಯಾಕಪ್ ಐಫೋನ್ (iPhone) ನಲ್ಲಿ ಚೆನ್ನಾಗಿರುತ್ತದೆ.

6. ಡಿಸೈನ್ ಮತ್ತು ಬಿಲ್ಡ್ ಕ್ವಾಲಿಟಿ

ಐ ಫೋನ್ (iPhone) ಅಲ್ಲಿ ನೀವು ಪ್ರೀಮಿಯಂ ಲುಕ್ ನೀವು ಕಾಣಬಹುದು. ಗ್ಲಾಸ್ ಮತ್ತು ಮೆಟಲ್ ಬಾಡಿ ಎರಡು ಕೂಡ ಇದೆ, ಸ್ಟ್ರಾಂಗ್ ಬಿಲ್ಡ್ ಕ್ವಾಲಿಟಿಯನ್ನು ಹೊಂದಿದೆ.

ಆಂಡ್ರಾಯ್ಡ್ (Android) ಮೊಬೈಲ್ ಗಳು

ವಿವಿಧ ಡಿಸೈನ್ ಗಳಲ್ಲಿ ನಿಮಗೆ ಲಭ್ಯವಿದೆ ಪ್ಲಾಸ್ಟಿಕ್, ಗ್ಲಾಸ್, ಮೆಟಲ್ ಎಲ್ಲಾ ರೀತಿಯ ಮೊಬೈಲ್ ಗಳು ಕೂಡ ಲಭ್ಯವಿರುತ್ತದೆ. ನಿಮಗೆ ಒಂದು ಪ್ರೀಮಿಯಂ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಬೇಕಾದರೆ ನಿಮಗೆ ಐ ಫೋನ್ ಬೆಸ್ಟ್, ಬಜೆಟ್ ಫ್ರೆಂಡ್ಲಿ ಹಾಗೂ ಉತ್ತಮ ಫೀಚರ್ಸ್ ಇರುವ ಫೋನ್ ಬೇಕಾದರೆ ನಿಮಗೆ ಆಂಡ್ರಾಯ್ಡ್ ಉತ್ತಮವಾದ ಆಯ್ಕೆ

7. ಸ್ಟೋರೇಜ್ ಮತ್ತು ಫ್ರೀಡಂ ವಿಷಯ

ಇನ್ನು ಅತಿ ಮುಖ್ಯವಾಗಿ ಮೊಬೈಲ್ ಖರೀದಿ ಮಾಡುವವರು ಗಮನಿಸುವುದು ಸ್ಟೋರೇಜ್ ಬಗ್ಗೆ, ಬನ್ನಿ ಈ ವಿಚಾರದಲ್ಲಿ ನಿಮಗೆ ಯಾವುದು ಬೆಸ್ಟ್ ತಿಳಿಯೋಣ

ಐ ಫೋನ್ (iPhone) ನಿಮಗೆ ಇದರಲ್ಲಿ ಮೆಮೊರಿ ಕಾರ್ಡ್ (SD card) ಆಯ್ಕೆ ಲಭ್ಯವಿರುವುದಿಲ್ಲ. ಫೈಲ್ ಗಳನ್ನು ವರ್ಗಾವಣೆ ಮಾಡುವುದು ಇದರಲ್ಲಿ ತುಸು ಕಷ್ಟ ಫೈಲ್ ಟ್ರಾನ್ಸ್ಫರ್ ಮಾಡುವುದಕ್ಕೆ iTunes ಅಥವಾ Airdrop ಇರಲೇಬೇಕು

ಆಂಡ್ರಾಯ್ಡ್ (Android) ಇದರಲ್ಲಿ ಮೆಮೊರಿ ಕಾರ್ಡ್ ಆಯ್ಕೆ ಕಾಣಸಿಗುತ್ತದೆ ಇದರಲ್ಲಿ ನೀವು ಫೈಲುಗಳನ್ನು ಇಟ್ಟುಕೊಳ್ಳಬಹುದು, ಫೈಲ್ ಗಳನ್ನು ಇದರಲ್ಲಿ ವರ್ಗಾವಣೆ ಮಾಡುವುದು ಸುಲಭ, ಬ್ಲೂ ಟೂತ್ ಒಂದು ಇದ್ದರೆ ಸಾಕು ಅದರ ಮೂಲಕ ಎಲ್ಲಾ ಫೋನ್ ಗಳಿಗು ಶೇರ್ ಮಾಡಬಹುದು. ಈ ವಿಚಾರಕ್ಕೆ ಬಂದರೆ ನಿಮಗೆ i phone ಗಿಂತ ಆಂಡ್ರಾಯ್ಡ್ ಮೊಬೈಲ್ ಗಳೆ ಉತ್ತಮವಾದ ಆಯ್ಕೆ

8. ಬ್ರಾಂಡ್ ವ್ಯಾಲ್ಯೂ ವಿಷಯಕ್ಕೆ ಬಂದರೆ

ಇನ್ನು ನೀವು ಬ್ರ್ಯಾಂಡ್ ವ್ಯಾಲ್ಯೂ ವಿಚಾರಕ್ಕೆ ಬಂದರೆ i Phone ಒಂದು ನಿಮಗೆ ಸ್ಟೇಟಸ್ ಚಿಹ್ನೆ ಆಗಿದೆ ಐ ಫೋನ್ ಬ್ರ್ಯಾಂಡ್ ನಿಮಗೂ ಒಂದು ಬ್ರ್ಯಾಂಡ್ ವ್ಯಾಲ್ಯೂ ಅನ್ನು ಕೊಡುತ್ತದೆ, ಹಾಗೂ Resale ಬೆಲೆ ಹೆಚ್ಚು ಮತ್ತು ಬ್ರ್ಯಾಂಡ್ ಇಮೇಜ್ ಸ್ಟ್ರಾಂಗ್ ಆಗಿ ಇದೆ.

ಇನ್ನು ಆಂಡ್ರಾಯ್ಡ್ ವಿಚಾರದಲ್ಲಿ ಈ ಫೋನ್ ಅನ್ನು ಹೆಚ್ಚು ಜನ ಬಳಸುವುದರಿಂದ ಈ ಫೋನ್ ಗಳ Resale ವ್ಯಾಲ್ಯೂ ಕೂಡ ಕಮ್ಮಿ ಹಾಗೂ ಕೆಲವರಿಗೆ ಪ್ರೆಸ್ಟೀಜ್ ವಿಷಯದಲ್ಲೂ ಇಷ್ಟ ವಾಗಲ್ಲ.

ಕೊನೆಯದಾಗಿ ಹೇಳುವುದು ಏನೆಂದರೆ

iPhone ಮತ್ತು ಆಂಡ್ರಾಯ್ಡ್ ಈ ಎರಡು ಸ್ಮಾರ್ಟ್ ಫೋನಿಗೂ ಅದರದ್ದೇ ಆದ ವಿಶೇಷತೆಗಳಿವೆ. iPhone ಪ್ರೀಮಿಯಂ, ಸುರಕ್ಷಿತ ಮತ್ತು ಸ್ಥಿರ ಪರ್ಫಾರ್ಮೆನ್ಸ್ ನೀಡುತ್ತದೆ. ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಆಯ್ಕೆ, ಕಡಿಮೆ ಬೆಲೆ ಮತ್ತು ಹೆಚ್ಚಿನ ಫೀಚರ್‌ಗಳನ್ನು ನೀಡುತ್ತವೆ.

ಒಟ್ಟಿನಲ್ಲಿ  ಹೇಳಬೇಕೆಂದರೆ

ಹಣ ಸಮಸ್ಯೆ ಇಲ್ಲದಿದ್ದರೆ iPhone ಉತ್ತಮ ಆಯ್ಕೆ. ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ಬೇಕಾದರೆ ಆಂಡ್ರಾಯ್ಡ್ ಉತ್ತಮ ಆಯ್ಕೆ.

ನಿಮಗೆ ಯಾವ ಫೋನ್ ಸೂಕ್ತ ಅನ್ನುವುದು ನಿಮ್ಮ ಬಳಕೆ, ಬಜೆಟ್ ಮತ್ತು ಅಗತ್ಯಗಳ ಮೇಲೆ ಅವಲಂಬಿತವಾಗಿದೆ. ಯಾವುದೆ ಫೋನ್ ಗಳು ಕೂಡ ಕಳಪೆ ಅಲ್ಲ

Leave a Comment