Oppo K14x 5G smartphone Review,Specs,battery, display, review
ಇಂದಿನ ದಿನಗಳಲ್ಲಿ 15 ಸಾವಿರದಿಂದ 20 ಸಾವಿರ ರೂ. ಒಳಗಿನ ಬಜೆಟ್ನಲ್ಲಿ ಉತ್ತಮ ಬ್ಯಾಟರಿ, ದೊಡ್ಡ ಡಿಸ್ಪ್ಲೇ ಮತ್ತು ಫಾಸ್ಟ್ ಪರ್ಫಾರ್ಮೆನ್ಸ್ ಇರುವ ಸ್ಮಾರ್ಟ್ಫೋನ್ ಖರೀದಿಸಬೇಕು ಎನ್ನುವ ಪ್ಲಾನ್ ಇದ್ದರೆ, ನಿಮಗೆ ಒಪ್ಪೋ (OPPO) ಹೊಸದಾಗಿ ಬಿಡುಗಡೆ ಮಾಡಿರುವ ಒಪ್ಪೋ (OPPO K14x 5G) ಒಂದು ಉತ್ತಮ ಆಯ್ಕೆಯಾಗಿದೆ. ಈ ಫೋನ್ ವಿಶೇಷವಾಗಿ ಬ್ಯಾಟರಿ ಲೈಫ್, 120Hz ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5G ಕನೆಕ್ಟಿವಿಟಿ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ. ಈ ಲೇಖನದಲ್ಲಿ ಒಪ್ಪೋ (OPPO K14x 5G) ಮೊಬೈಲ್ನ ರಿವ್ಯೂ, ಸ್ಪೆಸಿಫಿಕೇಶನ್, ಬ್ಯಾಟರಿ, ಕ್ಯಾಮೆರಾ, ಪರ್ಫಾರ್ಮೆನ್ಸ್ ಮತ್ತು ಹೆಚ್ಚುವರಿ ಫೀಚರ್ಸ್ ಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ!

OPPO K14x 5G – ಓವರ್ವ್ಯೂ
ಒಪ್ಪೋ (OPPO) ಈ ಫೋನ್ಅನ್ನು ಇಂಡಿಯಾದಲ್ಲಿ ಸುಮಾರು ₹14,999 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದ್ದು, ಇದು ಮೀಡಿಯಾ ಟೆಕ್ Dimensity 6300 ಪ್ರೊಸೆಸರ್, 6500mAh ಬ್ಯಾಟರಿ ಮತ್ತು 120Hz ಡಿಸ್ಪ್ಲೇ ಜೊತೆ ಬರುತ್ತಿದೆ.
ಈ ಮೊಬೈಲ್ ವಿಶೇಷವಾಗಿ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳು, ದಿನಪೂರ್ತಿ ಫೋನ್ ಬಳಸುವವರು ಮತ್ತು ಗೇಮಿಂಗ್ ಪ್ರಿಯರಿಗೆ ಸೂಕ್ತವಾಗಿದೆ.
ಡಿಸೈನ್ ಮತ್ತು ಡಿಸ್ಪ್ಲೇ (Display)
ಒಪ್ಪೋ OPPO K14x 5G ಫೋನ್ ಸ್ಟೈಲಿಷ್ ಮತ್ತು ಪ್ರೀಮಿಯಂ ಲುಕ್ನೊಂದಿಗೆ ಬರುತ್ತಿದೆ . ಇದು Icy ಬ್ಲೂ ಮತ್ತು Prism Violet ಎಂಬ ಎರಡು ಕಲರ್ ಆಯ್ಕೆಗಳಲ್ಲಿ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಡಿಸ್ಪ್ಲೇ (Display) ವಿಶೇಷತೆಗಳು6.75 ಇಂಚಿನ HD + LCD ಡಿಸ್ಪ್ಲೇ (Display)
6.75 ಇಂಚಿನ HD + LCD ಡಿಸ್ಪ್ಲೇ (Display) ಯನ್ನು ಹೊಂದಿದೆ, 120Hz ರಿಫ್ರೆಶ್ ರೇಟ್ ಅನ್ನು ಈ ಮೊಬೈಲಿನ ಡಿಸ್ಪ್ಲೇ ಒಳಗೊಂಡಿದೆ, 1125 nits ಬ್ರೈಟ್ನೆಸ್ ಅನ್ನು ಹೊಂದಿದೆ, ಸ್ಮೂತ್ ಸ್ಕ್ರೋಲಿಂಗ್ ಅನುಭವವನ್ನು ಈ ಮೊಬೈಲಿನ ಡಿಸ್ಪ್ಲೇ (Display) ಕೊಡುತ್ತದೆ. ಈ ಡಿಸ್ಪ್ಲೇ (Display) ದಿನಪೂರ್ತಿ ವಿಡಿಯೋ ನೋಡುವುದಕ್ಕೂ ಗೇಮಿಂಗ್ ಆಡುವುದಕ್ಕೂ ಬಳಸುವುದಕ್ಕೂ ತುಂಬಾ ಸೂಕ್ತವಾಗಿದೆ. ಬಿಸಿಲಿನಲ್ಲಿ ಕೂಡ ಈ ಡಿಸ್ಪ್ಲೇ ಅಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಡಿಸ್ಪ್ಲೇ ವಿಚಾರಕ್ಕೆ ಬಂದರೆ ಹೆಚ್ಚಿನ ಅಂಕಗಳನ್ನು ಈ ಸ್ಮಾರ್ಟ್ ಪೋನ್ ಪಡೆಯುತ್ತದೆ.
ಪರ್ಫಾರ್ಮೆನ್ಸ್ ಮತ್ತು ಪ್ರೊಸೆಸರ್
ಈ ಫೋನ್ನಲ್ಲಿ ಮೀಡಿಯಾ ಟೆಕ್ Dimensity 6300 5G ಪ್ರೊಸೆಸರ್ ನೀಡಲಾಗಿದೆ. ಇದು ಡೇಲಿ ಯೂಸ್, ಸೋಶಿಯಲ್ ಮೀಡಿಯಾ, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ಗೆ ಉತ್ತಮ ಪರ್ಫಾರ್ಮೆನ್ಸ್ (Performance) ನೀಡುತ್ತದೆ. ಬನ್ನಿ ಪರ್ಫಾರ್ಮೆನ್ಸ್ ಫೀಚರ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ. 6mm ಚಿಪ್ ಸೆಟ್ ಅನ್ನು ಹೊಂದಿದೆ, 4GB ಹಾಗೂ 6GB RAM ಅನ್ನು ಒಳಗೊಂಡಿದೆ, 128GB ಸ್ಟೋರೇಜ್ ಇದೆ ಮತ್ತು 5G ಕನೆಕ್ಟಿವಿಟಿ ಅನ್ನು ಕೂಡ ಹೊಂದಿದೆ. ಈ ಫೋನ್ ಗೇಮಿಂಗ್ ಮತ್ತು ವಿಡಿಯೋ ಎಡಿಟಿಂಗ್ ಮಾಡುವವರಿಗೆ ಕಡಿಮೆ ಬೆಲೆಯಲ್ಲಿರುವ ಈ ಸ್ಮಾರ್ಟ್ ಪೋನ್ ಒಂದು ಉತ್ತಮ ಆಯ್ಕೆ.
ಬ್ಯಾಟರಿ ರಿವ್ಯೂ
OPPO K14x 5Gನ ಬ್ಯಾಟರಿ ಬಗ್ಗೆ ಹೇಳುವುದಾದರೆ ಇದರ ದೊಡ್ಡ ವಿಶೇಷತೆ ಎಂದರೆ ಇದರ ಬ್ಯಾಟರಿ ಅನ್ನಬಹುದು 6500mAh ಬ್ಯಾಟರಿ. ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟು ದೊಡ್ಡ ಬ್ಯಾಟರಿ ಬ್ಯಾಕ್ ಅಪ್ ಅನ್ನು ಕೊಡುತ್ತಿರುವುದು ಈ ಫೋನಿನ ಮುಖ್ಯವಾದ ವಿಷಯ. ಬನ್ನಿ ಈ ಬ್ಯಾಟರಿಯ ಇನ್ನಷ್ಟು ವಿಶೇಷತೆಗಳನ್ನು ತಿಳಿಯೋಣ, ಒಂದು ದಿನಕ್ಕೂ ಹೆಚ್ಚಿನ ಬ್ಯಾಟರಿ ಬ್ಯಾಕ್ ಅಪ್ ಅನ್ನು ಕೊಡುತ್ತದೆ, 45W ವೇಗವಾದ ಚಾರ್ಜಿಂಗ್ (Speed charging) ಅನ್ನು ಹೊಂದಿದೆ, 6500mAh ಇರುವ ದೊಡ್ಡದಾದ ಬ್ಯಾಟರಿ, ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ ಹಾಗೆ ಒಪ್ಪೋ (OPPO) ಕಂಪನಿಯು ಹೇಳುವ ಪ್ರಕಾರ 22 ಗಂಟೆಗೂ ಅಧಿಕವಾಗಿ ವೀಡಿಯೊ ವೀಕ್ಷಣೆ ಮಾಡಬಹುದು, 11 ಗಂಟೆ ಗೇಮ್ ಗಳನ್ನು ಆಡಬಹುದು, 50 ಪ್ಲಸ್ ಹೆಚ್ಚಿನ ಗಂಟೆಗಳ ಕಾಲ ಕಾಲಿಂಗ್ ಟೈಮ್, ನಿಮ್ಮ ಪ್ರಾಮುಖ್ಯತೆ ಬ್ಯಾಟರಿ ಅಂದರೆ ನಿಮಗೆ ಈ ಫೋನ್ ಒಂದು ಅತ್ಯುತ್ತಮವಾದ ಆಯ್ಕೆ.

ಕ್ಯಾಮೆರಾ ಬಗ್ಗೆ (ರಿವ್ಯೂ) ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಈ ಸ್ಮಾರ್ಟ್ ಪೋನ್ ಅಲ್ಲಿ ನೀಡಲಾಗಿದೆ. ಬನ್ನಿ ಇದರ ವಿಶೇಷತೆಗಳನ್ನು ತಿಳಿಯೋಣ
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಈ ಸ್ಮಾರ್ಟ್ ಪೋನ್ ಅಲ್ಲಿ ನೀಡಲಾಗಿದೆ. ಬನ್ನಿ ಇದರ ವಿಶೇಷತೆಗಳನ್ನು ತಿಳಿಯೋಣ
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ ಅಪ್ ಅನ್ನು ಈ ಸ್ಮಾರ್ಟ್ ಪೋನ್ ಅಲ್ಲಿ ನೀಡಲಾಗಿದೆ, ಹಾಗೂ ಬನ್ನಿ ಈ ಕ್ಯಾಮರಾದ ಇನ್ನಷ್ಟು ವಿಶೇಷತೆಗಳನ್ನು ತಿಳಿಯೋಣ , ಮೈನ್ ಕ್ಯಾಮೆರಾ 50MP ಅನ್ನು ಹೊಂದಿದೆ, 2MP ಆಳವಾದ ಸೆನ್ಸಾರ್ ಅನ್ನು ಕೂಡ ಒಳಗೊಂಡಿದೆ (Depth Censor), ಫ್ರಂಟ್ ಕ್ಯಾಮೆರಾ 5MP annu ಹೊಂದಿದೆ. ಕ್ಯಾಮೆರಾದ ಫೀಚರ್ಸ್ ಗಳ ಬಗ್ಗೆ ಹೇಳಬೇಕು ಎಂದರೆ •AI Eraser, •AI ಬೆಸ್ಟ್ ಶಾಟ್ (Best Shot), •AI ಅನ್ಬ್ಲರ್ (Unblur), •ಪ್ರೋಟ್ರೇಟ್ ಮೋಡ್ (Portrait Mode), •ನೈಟ್ ಮೋಡ್ (Night Mode) ಬೆಳಕಿನ ಸಮಯದಲ್ಲಿ ತೆಗೆಯುವ ಫೋಟೋಗಳು ತುಂಬಾ ಶಾರ್ಪ್ ಆಗಿ ಬರುತ್ತವೆ. ಈ ಬೆಲೆಯಲ್ಲಿ ಇಷ್ಟು ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವುದು ಈ ಫೋನಿನ ಇನ್ನೊಂದು ವಿಶೇಷತೆ ಎನ್ನಬಹುದು.
ಎಕ್ಸ್ಟ್ರಾ ಫೀಚರ್ಸ್ ಮತ್ತು ಸ್ಪೆಷಲ್ ಫಂಕ್ಷನ್ಸ್
ಇದರಲ್ಲಿರುವ ಇನ್ನೊಂದು ವಿಶೇಷತೆಗಳು ಎಂದರೆ ನಿಮಗೆ ಬೇರೆ ಫೋನ್ ಗಳಲ್ಲಿ ಸಿಗದಂತಹ ಈ ಫೀಚರ್ಸ್ ಗಳು ಈ ಕಡಿಮೆ ಬೆಲೆಯ ಫೋನ್ ಅಲ್ಲಿ ಸಿಗುತ್ತಿದೆ ಅದೇನು ಅಂತ ತಿಳಿಯೋಣ ಬನ್ನಿ
•AI ಫೀಚರ್ಸ್ ಗಳು AI ರಿಫ್ಲೆಕ್ಷನ್ ರಿಮೂವರ್ ಅನ್ನು ಹೊಂದಿದೆ ,AI ಫೋಟೋ enhancement ಕೂಡ ಇದೆ, ಸ್ಮಾರ್ಟ್ ಫೋಟೋ ಎಡಿಟಿಂಗ್ ಕೂಡ ಇದು ಒಳಗೊಂಡಿದೆ (Smart Image Editing)
•ಬಿಲ್ಡ್ ಗುಣಮಟ್ಟ(Build Quality)
ಇನ್ನು ಫೋನಿನ ಬಿಲ್ಡ್ ಕ್ವಾಲಿಟಿ ಬಗ್ಗೆ ಹೇಳುವುದಾದರೆ ಧೂಳು ಮತ್ತು ನೀರಿನ IP64 ರಕ್ಷಣೆಯನ್ನು ಈ ಮೊಬೈಲ್ ಹೊಂದಿದೆ (Dust & Water Resistant), ಮತ್ತು ಸ್ಲಿಮ್ ಹಾಗೂ ಸ್ಟೈಲಿಶ್ ಡಿಸೈನ್ ಅನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.
•ಸಾಫ್ಟ್ ವೇರ್ (Software)
ಇನ್ನು ಇದು ಆಂಡ್ರಾಯ್ಡ್ 15 (Android 15) ಸಾಫ್ಟ್ವೇರ್ ಅನ್ನು ಹೊಂದಿದೆ ಮತ್ತು ಕಲರ್ OS 15 (ColorOS 15) ಅನ್ನು ಕೂಡ ಒಳಗೊಂಡಿದೆ ಈ ಫೋನ್ 48 ತಿಂಗಳ Fluency Protection ನೀಡುತ್ತದೆ. ಅಂದರೆ ದೀರ್ಘಕಾಲ ಲ್ಯಾಗ್ ಇಲ್ಲದೇ ಬಳಸಬಹುದು ಎಂದು ಒಪ್ಪೋ (Oppo) ಕಂಪನಿ ಹೇಳಿದೆ.
ಗೇಮಿಂಗ್ ಪರ್ಫಾರ್ಮೆನ್ಸ್
BGMI, ಫ್ರೀ ಫೈರ್, COD ಮೊಬೈಲ್ ತರಹದ ಗೇಮ್ಸ್ ಈ ಫೋನ್ನಲ್ಲಿ ಸ್ಮೂತ್ ಆಗಿ ರನ್ ಆಗುತ್ತವೆ. ಇದರ ಲಾಂಗ್ ಬ್ಯಾಟರಿ ಮತ್ತು ಸ್ಟೇಬಲ್ ಪ್ರೊಸೆಸರ್ ಕಾರಣದಿಂದ ಗೇಮಿಂಗ್ ನಲ್ಲಿ ನಿಮಗೆ ಒಂದು ಉತ್ತಮವಾದ ಅನುಭವ ಕೊಡುತ್ತದೆ.

ವೇರಿಯೆಂಟ್ ಮತ್ತು ಅದರ ಬೆಲೆ
ಹಾಗೂ ಇದರ ವೇರಿಯೆಂಟ್ ಗಳು ಹಾಗೂ ಅದರ ಬೆಲೆಯ ವಿಚಾರಕ್ಕೆ ಬಂದರೆ ಇದು 2 ವೇರಿಯೆಂಟ್ ಅಲ್ಲಿ ಲಭ್ಯವಿದೆ ಒಂದು 4GB + 128GB ಈ ವೇರಿಯೆಂಟ್ 14,999 ರಲ್ಲಿ ಲಭ್ಯವಿದ್ದರೆ, ಇನ್ನೊಂದು ವೇರಿಯೆಂಟ್ ಆದ 6GB + 128GB 16,999 ರಲ್ಲಿ ಲಭ್ಯವಿದೆ. ಈ ಬೆಲೆಯಲ್ಲಿ 6000mAh ಇರುವ ಇಷ್ಟು ದೊಡ್ಡ ಬ್ಯಾಟರಿ ಮತ್ತು 5G ಫೋನ್ ಸಿಗುತ್ತಿರುವುದು ಒಂದು ವಿಶೇಷ ಎನ್ನಬಹುದು.
ಪಾಸಿಟಿವ್ ಅಂಶಗಳು (Pros)
ಇದರ ಪಾಸಿಟಿವ್ ಅಂಶಗಳ ವಿಚಾರಕ್ಕೆ ಬಂದರೆ 6500mAh ದೊಡ್ಡ ಬ್ಯಾಟರಿ ಇದು ವಿಶೇಷವಾದ ಅಂಶ, 120Hz ಸ್ಮೂತ್ ಡಿಸ್ಪ್ಲೇ (Smooth Display) ಇದೆ, ಮೈನ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಅನ್ನು ಹೊಂದಿದೆ, 5G ಸಪೋರ್ಟ್ ಜೊತೆಗೆ ಸ್ಟೈಲಿಶ್ ಡಿಸೈನ್ ಕೂಡ ಈ ಸ್ಮಾರ್ಟ್ ಪೋನ್ ಅಲ್ಲಿ ಲಭ್ಯವಿದೆ.
ನೆಗೆಟಿವ್ ಅಂಶಗಳು (Cons)
ಇದರ ನೆಗೆಟಿವ್ ಅಂಶಗಳು ಎಂದರೆ HD+ ಡಿಸ್ಪ್ಲೇ ಮಾತ್ರ ಇದೆ (HD+Display only), ಫ್ರಂಟ್ ಕ್ಯಾಮೆರಾ ಆವರೇಜ್ ಆಗಿ ಇದೆ ಸೆಲ್ಫಿ ಪ್ರಿಯರಿಗೆ ಇದೊಂದು ನಿರಾಸೆ , ಹಾಗೂ 210 ಗ್ರಾಂ ಹೆವಿ ವೈಟ್ ಕೂಡ ಈ ಸ್ಮಾರ್ಟ್ ಫೋನ್ ಹೊಂದಿದೆ.
ಯಾರು ಈ ಫೋನ್ ಖರೀದಿಸಬೇಕು?
ಈ ಫೋನ್ ಯಾರು ಖರೀದಿಸಬೇಕು ಯಾರಿಗೆ ಉತ್ತಮ ಎಂದು ಈ ಕೆಳಗಿನ ಪಾಯಿಂಟ್ ಗಳ ಮೂಲಕ ತಿಳಿಯೋಣ ಬನ್ನಿ
ವಿದ್ಯಾರ್ಥಿಗಳಿಗೆ, ಗೇಮಿಂಗ್ ಪ್ರಿಯರಿಗೆ, ಲಾಂಗ್ ಬ್ಯಾಟರಿ ಬೇಕಿರುವವರು, ಡೇಲಿ ಯೂಸ್ ಫೋನ್ ಕಡಿಮೆ ಬೆಲೆಯಲ್ಲಿ ಒಳ್ಳೆ ಫೀಚರ್ಸ್ ಇರುವ ಸಾಮಾನ್ಯವಾಗಿ ಬಳಕೆ ಮಾಡುವವರಿಗೆ ಇದು ಉತ್ತಮವಾದ ಆಯ್ಕೆ.
ಕೊನೆಯದಾಗಿ ಹೇಳುವುದು ಏನೆಂದರೆ
OPPO K14x 5G ಒಂದು ಬ್ಯಾಟರಿ ಕಿಂಗ್ ಫೋನ್ ಎಂದು ಹೇಳಬಹುದು ಬ್ಯಾಟರಿ ಇದರ ಪ್ರಮುಖ ಆಕರ್ಷಣೆ ಅಂತಾನೆ ಹೇಳಬಹುದು. 6500mAh ಬ್ಯಾಟರಿ, 120Hz ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5G ಸಪೋರ್ಟ್ ಜೊತೆ ಈ ಫೋನ್ ಮಿಡ್ರೇಂಜ್ ಸೆಗ್ಮೆಂಟ್ನಲ್ಲಿ ಒಳ್ಳೆಯ ಆಯ್ಕೆ.
ನೀವು ಹೆಚ್ಚು ಕಾಲ ಬ್ಯಾಟರಿ ಬ್ಯಾಕಪ್, ಸ್ಮೂತ್ ಪರ್ಫಾರ್ಮೆನ್ಸ್ ಮತ್ತು ಕಡಿಮೆ ಬೆಲೆಯಲ್ಲಿ ಒಳ್ಳೆಯ ಫೋನ್ ಹುಡುಕುತ್ತಿದ್ದರೆ, OPPO K14x 5G ಒಂದು ಬೆಸ್ಟ್ ಸ್ಮಾರ್ಟ್ ಫೋನ್ ಅಂತಾನೆ ಹೇಳಬಹುದು.