YouTube ಚಾನೆಲ್ ಪ್ರಾರಂಭಿಸಲು ಸ್ಟೆಪ್-ಬೈ-ಸ್ಟೆಪ್ ಗೈಡ್ (2026)

ಚಾನೆಲ್ ಕ್ರಿಯೇಟ್ ಮಾಡುವುದು, ಸೆಟ್ಟಿಂಗ್ಸ್, ವಿಡಿಯೋ ಅಪ್ಲೋಡ್, ಮತ್ತು ವೇಗವಾಗಿ ಗ್ರೋ ಆಗುವ ಸುಲಭ ಟಿಪ್ಸ್ ಇಲ್ಲಿ ತಿಳಿಯಿರಿ.

ಇಂದಿನ ಡಿಜಿಟಲ್ ಯುಗದಲ್ಲಿ ಯುಟ್ಯೂಬ್ (You Tube) ಆನ್ ಲೈನ್ ಅಲ್ಲಿ ಹಣ ಮಾಡಬೇಕು ಅನ್ನೋರಿಗೆ ಮತ್ತು ತಮ್ಮ ಪ್ರತಿಭೆ ಯನ್ನು  ತೋರಿಸಲು ಒಂದು ಉತ್ತಮ ಪ್ಲಾಟ್ ಫಾರ್ಮ್ ಆಗಿದೆ. ನಿಮ್ಮ ಜ್ಞಾನ ಪ್ರತಿಭೆ ಮತ್ತು ಹವ್ಯಾಸ ಗಳನ್ನು ಇದರಲ್ಲಿ ತೋರಿಸಿ ಹಣ ಸಂಪಾದನೆ ಮಾಡಬಹುದು. ಈ ಯೂಟ್ಯೂಬ್ (You Tube) ಮೂಲಕ ತುಂಬ ಮಂದಿ ಜೀವನ ವನ್ನು ಕೂಡ ಕಟ್ಟಿ ಕೊಂಡಿದ್ದಾರೆ ಹಾಗಾದರೆ ಹೊಸ ಯೂಟ್ಯೂಬ್ ಚಾನಲ್ ಅನ್ನು ಹೇಗೆ ಪ್ರಾರಂಭಿಸಬೇಕು? ಎಂದು ಹಂತ ಹಂತವಾಗಿ ಈ ಲೇಖನಿಯಲ್ಲಿ ತಿಳಿದು ಕೊಳ್ಳೋಣ ಬನ್ನಿ!

1.ನೀವು ನಿಮ್ಮ  ಯೂಟ್ಯೂಬ್ ಚಾನೆಲ್ ನ niche (ವಿಷಯ) ವನ್ನು ಆಯ್ಕೆ ಮಾಡಿ

ಮೊದಲು ನೀವು ನಿಮ್ಮ ಯೂಟ್ಯೂಬ್ ಚಾನೆಲ್ ಅಲ್ಲಿ ಯಾವ ವಿಷಯದ ಮೇಲೆ ವಿಡಿಯೋ ಮಾಡಬೇಕು ಎಂಬುದನ್ನು ಮೊದಲು ನಿರ್ಧರಿಸಿ. ನೀವು ಆಯ್ಕೆ ಮಾಡುವ ವಿಷಯ ಹೇಗಿರಬೇಕು ಎಂದರೆ ನಿಮಗೆ ಇಷ್ಟವಾಗುವ, ನೀವು ಆಸಕ್ತಿ ಹೊಂದಿರುವ ಮತ್ತು ಅದರಲ್ಲೂ ದಿನ ನಿತ್ಯವೂ ನಿರಂತರವಾಗಿ ವಿಡಿಯೋ ಮಾಡ ಬಹುದಾದ ವಿಷಯ ವನ್ನು ಆಯ್ಕೆ ಮಾಡಿ ಕೊಳ್ಳುವುದು ಉತ್ತಮ.

ಈ ಕೆಳಗೆ ನಾನು ಕೆಲವು ಜನಪ್ರಿಯ ಯೂಟ್ಯೂಬ್ ವಿಷಯ ಗಳನ್ನು ತಿಳಿಸಿ ಕೊಡುತ್ತೀನಿ ನೋಡಿ:

1. ಶಿಕ್ಷಣ (Education)

2. ತಂತ್ರಜ್ಞಾನ (Tech)

3. ದಿನನಿತ್ಯದ ವ್ಲಾಗ್ (Daily Vlog)

4. ಅಡುಗೆ (Cooking)

5. ಕೃಷಿ (Agriculture)

6. ಪ್ರೇರಣೆ ಕೊಡುವುದು (Motivation)

7. ಉದ್ಯೋಗ ಮಾಹಿತಿ (Job information)

8. ಹಣಕಾಸು ವಿಚಾರ (Finance)

9. ಸಿನೆಮಾ ರಿವ್ಯೂ ಗಳು (Movie reviews)

10. ಹಾಸ್ಯ ವಿಡಿಯೋ ಗಳು (Comedy Videos)

ಹೀಗೆ ನಿಮಗೆ ಇಷ್ಟವಿರುವ ಮತ್ತು ನೀವು ಆಸಕ್ತಿ ಹೊಂದಿರುವ ವಿಷಯ ವನ್ನು ಆಯ್ಕೆ ಮಾಡಿ

2. ಗೂಗಲ್ ಖಾತೆ ರಚಿಸಬೇಕು (google account)

ನೀವು ಯುಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಲು ನಿಮ್ಮ ಬಳಿ ಒಂದು ಗೂಗಲ್ ಖಾತೆ (G Mail) ಇರಬೇಕು. ಈಗಾಗಲೇ ನಿಮ್ಮ ಬಳಿ ಜಿ ಮೇಲ್ ಅಕೌಂಟ್ ಇದ್ದರೆ ಅದನ್ನು ಬಳಸಬಹುದು. ಯಾವ ಹೊಸದಾಗಿ ಕ್ರಿಯೇಟ್ ಮಾಡಿ ಕೂಡ ಅದನ್ನು ಬಳಸ ಬಹುದು!

ಬನ್ನಿ ಈಗ ಜಿ ಮೇಲ್ ಅಕೌಂಟ್ ಅನ್ನು ಬಳಸಿ ಹೊಸ ಯೂಟ್ಯೂಬ್ (You Tube) ಚಾನೆಲ್ ಅನ್ನು ಹೇಗೆ ರಚಿಸಬೇಕೆಂದು ಹಂತ ಹಂತವಾಗಿ ತಿಳಿದು ಕೊಳ್ಳೋಣ. ಮೊದಲು ಯೂಟ್ಯೂಬ್ ಗೆ ಹೋಗಿ ಸೈನ್ ಇನ್ (Sign in) ಮೇಲೆ ಕ್ಲಿಕ್ ಮಾಡಿ ನಿಮ್ಮ ಗೂಗಲ್ (G Mail) ಅನ್ನು ಬಳಸಿ ಲಾಗಿನ್ (log in) ಆಗಿ ಕ್ರಿಯೇಟ್ ಚಾನೆಲ್ (create a Channel) ಮೇಲೆ ಕ್ಲಿಕ್ ಮಾಡಿ!

3. ಚಾನೆಲ್ ಹೆಸರು ಮತ್ತು ಪೋಸ್ಟರ್ ಅನ್ನು ರಚನೆ ಮಾಡಿ

ನಿಮ್ಮ ಯೂಟ್ಯೂಬ್ (You Tube) ಚಾನೆಲ್ ಗೆ ಒಂದು ಹೆಸರನ್ನು ಆಯ್ಕೆ ಮಾಡಿ. ಆದಷ್ಟು ನಿಮಗೆ ಯಾವಾಗಲೂ ನೆನಪಲ್ಲಿ ಬರೋ ಹೆಸರನ್ನು ಆಯ್ಕೆ ಮಾಡಿ.

ಚಾನೆಲ್ ಲೋಗೋ, ಬ್ಯಾನರ್ ಚಿತ್ರ (Banner image) ಅನ್ನು ರಚನೆ ಮಾಡಿ ಚಾನೆಲ್ ಗೆ ಹಾಕಿ ಮತ್ತು about section ಅಲ್ಲಿ ನಿಮ್ಮ ಚಾನೆಲ್ ಯಾವ ವಿಷಯದ ಬಗ್ಗೆ ಇದೆ ನಿಮ್ಮ ಉದ್ದೇಶ ಏನು ಈ ಎಲ್ಲಾ ವಿವರಣೆ ಗಳನ್ನು ಕನ್ನಡ ದಲ್ಲಿ ಬರೆಯಿರಿ!

ಇದು ನಿಮ್ಮ ಚಾನೆಲ್ ಗೆ ಪ್ರೊಫೆಷನಲ್ ಆಗಿ ಕಾಣುತ್ತದೆ!

4. ವಿಡಿಯೋ ಮಾಡಲು ಬೇಕಾದ ಸಾಧನಗಳು!

ನೀವು ಹೊಸದಾಗಿ ಯೂಟ್ಯೂಬ್ (You Tube) ಚಾನೆಲ್ ಶುರು ಮಾಡಿದ ಪ್ರಾರಂಭ ದಲ್ಲಿ  ದುಬಾರಿ ಕ್ಯಾಮೆರಾಗಳು ಮತ್ತು ದುಬಾರಿ ಮೈಕ್ ಗಳನ್ನು ಕೊಳ್ಳುವುದು ಅವಶ್ಯಕತೆ ಇಲ್ಲ 

ಅವಶ್ಯಕತೆ ಇರುವ ಸಾಧನಗಳು

1. ಮೊದಲು ವಿಡಿಯೋ ಮಾಡಲು ಒಂದು ಸ್ಮಾರ್ಟ್ ಪೋನ್ (Smart phone) ಸ್ಮಾರ್ಟ್ ಫೋನ್ ಕ್ಯಾಮೆರಾ ಚೆನ್ನಾಗಿದ್ದರೆ ಸಾಕು.

2. ಎರಡನೆಯದು ಮೈಕ್ರೋ ಪೋನ್ ಆಡಿಯೋ ಕ್ಲಾರಿಟಿ ಮುಖ್ಯ ವಾಗಿ ಇರಲಿ.

3. ಟ್ರೈಪಾಡ್ (try pad) ಇದ್ದರೆ ಉತ್ತಮ ಇಲ್ಲ ಅಂದರು ನಡೆಯುತ್ತೆ.

4. ಬೆಳಕು ರಿಂಗ್ ಲೈಟ್ ಬೇಕು ಅಂತ ಏನಿಲ್ಲ ನ್ಯಾಚುರಲ್ (Natural) ಬೆಳಕು ಇದ್ದರೆ ಸಾಕು.

5. ಮೊದಲ ವಿಡಿಯೋ ರೆಕಾರ್ಡ್ ಮಾಡಿ

ಮೊದಲಿಗೆ ಒಂದು ವಿಡಿಯೋ ಮಾಡಿ ಅದರಲ್ಲಿ ನಿಮ್ಮ ಪರಿಚಯದ ಬಗ್ಗೆ ಮತ್ತು ನಿಮ್ಮ ಚಾನೆಲ್ ನ ಬಗ್ಗೆ ಅದರಲ್ಲಿ ಬರುವ ಕಂಟೆಂಟ್ ಬಗ್ಗೆ ಸರಳವಾಗಿ ವಿವರಿಸಿ. ಸ್ಪಷ್ಟವಾಗಿ ಮಾತನಾಡಿ, ಸರಳವಾದ ಕನ್ನಡ ಬಳಸಿ, 5 ರಿಂದ 8 ನಿಮಿಷ ಗಳ ವಿಡಿಯೋ ಮಾಡಿ ಸಾಕು.

6. ವಿಡಿಯೋ ಎಡಿಟಿಂಗ್ ಮತ್ತು ಅಪ್ ಲೋಡ್

ನೀವು ನಿಮ್ಮ ವಿಷಯ ವನ್ನು ಆಯ್ಕೆ ಮಾಡಿ ಆ ವಿಷಯದ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ಮತ್ತು ಆ ವಿಡಿಯೋ ಎಡಿಟ್ ಮಾಡಲು ಈ ಕೆಳಗಿನ ಅಪ್ಪಿಕೇಶನ್ ಗಳನ್ನು ಬಳಸಬಹುದು.

1.ಕೈನ್ ಮಾಸ್ಟರ್ (kine Master) ಇದು Begginer ಗಳಿಗೆ ಯೂಟ್ಯೂಬ್ ವಿಡಿಯೋ ಎಡಿಟಿಂಗ್ ಮಾಡಲು ಉತ್ತಮವಾದ ಅಪ್ಲಿಕೇಶನ್.

2. ಕ್ಯಾಪ್ ಕಟ್ (Cap Cut) ಇದು ಚೀನಾ ಮೂಲದ ಅಪ್ಲಿಕೇಶನ್ ಈ ನಡುವೆ ಈ ಅಪ್ಲಿಕೇಶನ್ ಕೂಡ ಜನಪ್ರಿಯ ಅಪ್ಲಿಕೇಶನ್ ಎಡಿಟಿಂಗ್ ಮಾಡಲು.

3. ವಿ ನ್ ಎಡಿಟರ್ (VN Ediotor) ಈ ಅಪ್ಲಿಕೇಶನ್ ನಿಮಗೆ ಯೂಟ್ಯೂಬ್ (You Tube) ಅಷ್ಟೆ ಅಲ್ಲದೆ instagram ರೀಲ್ಸ್ ಹೀಗೆ ಪ್ರತಿಯೊಂದು ವಿಡಿಯೋ ಎಡಿಟಿಂಗ್ ಮಾಡಲು ಕೂಡ ಉತ್ತಮವಾದ ಆಯ್ಕೆ!

ಹಾಗೂ ನೀವು ಅಪ್ ಲೋಡ್ ಮಾಡುವಾಗ 1.ಟೈಟಲ್ ಕನ್ನಡದಲ್ಲಿ ಬರೆಯಿರಿ, 2.ಡಿಸ್ಕ್ರಿಪ್ಶನ್ (Discription) ಮತ್ತು ಟ್ಯಾಗ್ (Tag) ಗಳನ್ನು ಬಳಸಿ, 3. ಆಕರ್ಷಕ ತಂಬ್ ನೈಲ್ (Attractive thumbnail) ಗಳನ್ನು ಬಳಸಿ

7.ನಿರಂತರ ವಿಡಿಯೋ ಅಪ್ ಲೋಡ್ ಮತ್ತು ತಾಳ್ಮೆ ಇರಲಿ.

ಇದೆಲ್ಲಾ ಆದಮೇಲೆ ಯೂಟ್ಯೂಬ್ (YouTube) ಅಲ್ಲಿ ದಿನನಿತ್ಯವೂ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿ ಆಗಲಿಲ್ಲ ಅಂದರೆ ಕನಿಷ್ಠ ವಾರಕ್ಕೆ ಒಂದು ಅಥವಾ ಎರಡು ವಿಡಿಯೋ ಆದರೂ ಅಪ್ಲೋಡ್ ಮಾಡಿ, ನಂತರ ಯೂಟ್ಯೂಬ್ (You Tube) ಅಲ್ಲಿ ನಿಮಗೆ ಒಂದೇ ದಿನ ಯಶಸ್ಸು ಸಿಗಲ್ಲ. ತಾಳ್ಮೆಯಿಂದ ಕಾಯಬೇಕಾಗುತ್ತದೆ. ತಾಳ್ಮೆಯಿಂದ ಇದ್ದರೆ ಒಂದಲ್ಲ ಒಂದು ದಿನ ಯಶಸ್ಸು ಖಂಡಿತ. ಆರಂಭದಲ್ಲಿ ಕಡಿಮೆ ವೀಕ್ಷಣೆ ಇರುತ್ತದೆ ಆದರೂ ತಾಳ್ಮೆಯಿಂದ ದಿನ ನಿತ್ಯ ಒಂದು ವಿಡಿಯೋ ವನ್ನು ಅಪ್ ಲೋಡ್ ಮಾಡಲು ಪ್ರಯತ್ನ ಪಟ್ಟರೆ ಖಂಡಿತ ಬೆಳವಣಿಗೆ ಇದೆ.

ಯೂಟ್ಯೂಬ್ ಇಂದ ಹಣ ಹೇಗೆ ಬರುತ್ತದೆ!

ಇಷ್ಟೆಲ್ಲಾ ಮಾಡಿದ ಮೇಲೆ ನಿಮಗೆ ಹಣ ಹೇಗೆ ಬರುತ್ತದೆ ಅಂತ ಪ್ರಶ್ನೆ ಇರುತ್ತದೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಮೊದಲು 1000 ಜನ ಚಂದಾದಾರರು (Subscribers) ಮತ್ತು 4000 ಗಂಟೆಗಳ ಕಾಲ ವೀಕ್ಷಣೆ ಇರಬೇಕು (4000 Views) ಇದು ಮೊದಲನೇ ಷರತ್ತು.

ಮೊದಲನೆ ಷರತ್ತನ್ನು ನೀವು ಪಾಸ್ ಮಾಡಿದ ನಂತರ

1.ಗೂಗಲ್ ಜಾಹೀರಾತಿಗೆ ಅಪ್ಲೈ ಮಾಡಿ. ಅದರಿಂದ ಹಣ ಮಾಡಬಹುದು. 2. ಬ್ರಾಂಡ್ ಪ್ರಾಯೋಜಕತ್ವ (Brand Promotion), 3. ಅಫಿಲಿಯೆಟ್ ಮಾರ್ಕೆಟಿಂಗ್ ಪ್ರೋಗ್ರಾಮ್ (Affiliate Marketing Program) ಮೂಲಕ ಹಣ ಗಳಿಸಬಹುದು!

ಕೊನೆಯದಾಗಿ ಹೇಳುವುದು!

ಕನ್ನಡದಲ್ಲಿ ಯೂಟ್ಯೂಬ್ (You Tube) ಚಾನೆಲ್ ಅನ್ನು  ಶುರು ಮಾಡುವುದು ಉತ್ತಮ ಆಯ್ಕೆ ಏಕೆಂದರೆ. ಈಗಿನ ಡಿಜಿಟಲ್ ಕಾಲದಲ್ಲಿ ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ ಅದರಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ಎಲ್ಲಾ ಬಳಸುತ್ತಾರೆ. ಹಾಗಾಗಿ ತಾಳ್ಮೆಯಿಂದ ಶ್ರಮ ಪಟ್ಟು ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುವುದರಿಂದ ಯಶಸ್ಸು ಅನ್ನೋದು ಖಂಡಿತ!

Leave a Comment